athiya and kl rahul : ಕೆ.ಎಲ್​ ರಾಹುಲ್​ & ಆಥಿಯಾ ಶೆಟ್ಟಿ ವಿವಾಹಕ್ಕೆ ಅಸ್ತು ಎಂದ ಸುನೀಲ್​ ಶೆಟ್ಟಿ

athiya and kl rahul : ಟೀಂ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್​ ಹಾಗೂ ಬಾಲಿವುಡ್​ ನಟಿ ಆಥಿಯಾ ಶೆಟ್ಟಿ ಪರಸ್ಪರ ಡೇಟಿಂಗ್​ನಲ್ಲಿದ್ದಾರೆ ಎಂಬ ಸುದ್ದಿ ಗುಟ್ಟಾಗೇನು ಉಳಿದಿಲ್ಲ. ಈ ಬಗ್ಗೆ ಕೆ.ಎಲ್​ ರಾಹುಲ್​ ಹಾಗೂ ಆಥಿಯಾ ಶೆಟ್ಟಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಸಹ ಇವರಿಬ್ಬರ ನಡುವಿನ ಬಾಂಡಿಂಗ್​ ಎಲ್ಲವನ್ನೂ ಹೇಳುತ್ತದೆ. ಸಧ್ಯದಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಈ ಎಲ್ಲದರ ನಡುವೆ ಹಿರಿಯ ನಟ ಸುನೀಲ್​ ಶೆಟ್ಟಿ ತಮ್ಮ ಪುತ್ರಿ ಆಥಿಯಾ ಶೆಟ್ಟಿ ವಿವಾಹದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.


ಇದೇ ವಿಚಾರದಲ್ಲಿ ಖಾಸಗಿ ವಾಹಿನಿ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರಿಯ ನಟ ಸುನೀಲ್​ ಶೆಟ್ಟಿ, ಇದೀಗ ಕಾಲ ಬದಲಾಗಿದೆ. ನಮಗೆ ಏನು ಬೇಕು ಎನ್ನುವುದನ್ನು ಇಚ್ಛೆಯನುಸಾರ ಅವರವರೇ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ನನ್ನ ಪುತ್ರ ಹಾಗೂ ಪುತ್ರಿ ಇಬ್ಬರೂ ಜವಾಬ್ದಾರಯುತವಾಗಿದ್ದಾರೆ.ಹೀಗಾಗಿ ಅವರ ಭವಿಷ್ಯದ ನಿರ್ಧಾರಗಳನ್ನೂ ಅವರೇ ಕೈಗೊಳ್ಳಲಿ. ಅವರು ಏನೇ ನಿರ್ಧಾರ ಕೈಗೊಂಡರೂ ಎಲ್ಲದ್ದಕ್ಕೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.


ಆಥಿಯಾ ಹಾಗೂ ಕೆ.ಎಲ್​ ರಾಹುಲ್​ ಜೊತೆಯಾಗಿ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಜೋಡಿ ಮೊಟ್ಟ ಮೊದಲ ಬಾರಿಗೆ ಆಥಿಯಾ ಸಹೋದರ ಅಹಾನ್​ ಶೆಟ್ಟಿ ಮೊದಲ ಸಿನಿಮಾ ತಡಪ್​​ನ ಪ್ರೀಮಿಯರ್​ ನೈಟ್​ನಲ್ಲಿ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಈ ಜೋಡಿ ಈ ವರ್ಷದ ಅಂತ್ಯದೊಳಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎನ್ನಲಾಗಿದೆ. ದಕ್ಷಿಣ ಭಾರತದ ಸಂಪ್ರದಾಯದಂತೆ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಕೂಡ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನು ಓದಿ : Ravindra Jadeja : ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್‌

ಇದನ್ನೂ ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

suniel shetty says daughter athiya and kl rahul have his blessings for wedding

Comments are closed.