Sunil Holkar passed away: ಚಿತ್ರನಟ ಹಾಗೂ ಖ್ಯಾತ ಕಥೆಗಾರ ಸುನೀಲ್ ಹೋಲ್ಕರ್ ವಿಧಿವಶ

(Sunil Holkar passed away) ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾಗೆ ಹೆಸರುವಾಸಿಯಾದ ಟಿವಿ ನಟ ಸುನೀಲ್ ಹೋಲ್ಕರ್ ಅವರು ತಮ್ಮ ನಲವತ್ತನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಲಿವರ್‌ ಸೋರಿಯಾಸಿಸ್‌ ನಿಂದ ಬಳಲುತ್ತಿದ್ದ ಸುನೀಲ್‌ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸುನೀಲ್‌ ಅವರು ಕಳೆದ ಕೆಲವು ಸಮಯಗಳಿಂದ ಲಿವರ್‌ ಸೋರಿಯಾಸಿಸ್‌ ನಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು. ಆದರೆ ದುರದೃಷ್ಟವಶಾತ್‌ ಅವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಸುನೀಲ್ ಹೋಳ್ಕರ್ ಕೊನೆಯ ಬಾರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಗೋಷ್ಟ್ ಎಕಾ ಪೈಥಾನಿಚಿಯಲ್ಲಿ ಕಾಣಿಸಿಕೊಂಡಿದ್ದರು. ಸುನೀಲ್ ಹೋಳ್ಕರ್ ಅವರು ಅಶೋಕ್ ಹಂದೆ ಅವರ ಚೌರಂಗ್ ನಾಟ್ಯ ಸಂಸ್ಥಾನದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. ಅವರು 12 ವರ್ಷಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ ನಟ ಮತ್ತು ಕಥೆಗಾರ ಎಂದು ಹೆಸರಾಗಿದ್ದರು. ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಚಿತ್ರದಲ್ಲಿ ನಟಿಸಿ ಜನರ ಮನಸನ್ನು ಗೆದ್ದು, ಚಿತ್ರರಂಗದಲ್ಲಿ ಹೆಸರುವಾಸಿಯಾದರು. ಅಲ್ಲದೇ ತೆಲುಗು ಚಿತ್ರರಂಗದಲ್ಲಿ ಉತ್ತಮ ನಟ ಹಾಗೂ ಉತ್ತಮ ಕಥೆಗಾರನೆಂದೇ ಹೆಸರುವಾಸಿಯಾಗಿದ್ದರು.

ಇದನ್ನೂ ಓದಿ : ಜಗಮೆಚ್ಚಿದ “ಕಾಂತಾರ” ಸಿನಿಮಾ : ಶೀಘ್ರದಲ್ಲೇ ಕಿರುತೆರೆಗೆ

ತನ್ನ ಸಾವನ್ನು ಮೊದಲೇ ಅರಿತುಕೊಂಡಿದ್ದ ಸುನೀಲ್‌ ತನ್ನ ಕೊನೆಯ ಸಂದೇಶವನ್ನು ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲು ಸ್ನೇಹಿತನಲ್ಲಿ ಕೇಳಿಕೊಂಡಿದ್ದರಂತೆ. ಆ ಮೂಲಕ ಎಲ್ಲರಿಗೂ ವಿಧಾಯವನ್ನು ಹೇಳಿದ್ದರು. ಅಲ್ಲದೇ ತಮ್ಮ ಎಲ್ಲಾ ತಪ್ಪುಗಳಿಗೆ ಕ್ಷಮೆಯಾಚಿಸುವಂತೆ ಕೋರಿ ಸ್ನೇಹಿತನ ಮೂಲಕ ಎಲ್ಲರಿಗೂ ವಿಧಾಯವನ್ನು ಸೂಚಿಸಿದ್ದಾರೆ ಎಂದು ವರದಿ ಮಾಧ್ಯಮಗಳು ತಿಳಿಸಿವೆ.

ಇದನ್ನೂ ಓದಿ : ಎರಡೇ ತಿಂಗಳಿಗೆ ಚಿತ್ರೀಕರಣ ಮುಗಿಸಿದ “ಧೂಮಂ”‌ ಸಿನಿತಂಡ : ಹೊಂಬಾಳೆಯ ಮತ್ತೊಂದು ಸಿನಿಮಾ ರೆಡಿ

ಇದನ್ನೂ ಓದಿ : ವಂಚನೆ ಪ್ರಕರಣ : ಮಠ ನಿರ್ದೇಶಕ ಗುರುಪ್ರಸಾದ್‌ ಬಂಧನ

ಸದ್ಯ ಅವರ ಸಾವಿನ ಸುದ್ದಿ ತೆಲುಗು ಚಿತ್ರರಂಗಕ್ಕೆ ಭಾರಿ ಆಘಾತವನ್ನುಂಟುಮಾಡಿದೆ. ಅವರ ಸಾವಿಗೆ ಸಿನಿಗಣ್ಯರು ಸಂತಾಪವನ್ನು ಸೂಚಿಸಿದ್ದು, ಸುನೀಲ್‌ ಅವರ ಸಾವಿಗೆ ಚಿತ್ರರಂಗವೇ ಕಣ್ಣೀರಿಡುತ್ತಿದೆ. ಚಿತ್ರರಂಗದಲ್ಲಷ್ಟೇ ಅಲ್ಲದೇ ನಾಟಕ ರಂಗದಲ್ಲೂ ಕೂಡ ಹೆಸರು ಮಾಡಿದ್ದ ಸುನೀಲ್‌ ಅವರ ಸಾವು ಕಲಾರಂಗಕ್ಕೆ ನಷ್ಟವಾಗಿದೆ.

Sunil Holkar passed away: Film actor and famous storyteller Sunil Holkar passed away

Comments are closed.