Kim Jong-un : ಮೊದಲ ಕೋವಿಡ್​ ಪ್ರಕರಣ ವರದಿಯಾಗ್ತಿದ್ದಂತೆ ಮಾಸ್ಕ್​ ಧರಿಸಲು ಆರಂಭಿಸಿದ ಕಿಮ್​ ಜಾಂಗ್​ ಉನ್​

Kim Jong-un  : ಕೊರೊನಾ ಸಾಂಕ್ರಾಮಿಕ ಶುರುವಾಗಿ ಎರಡು ವರ್ಷಗಳೇ ಕಳೆದಿದ್ದರೂ ಸಹ ಉತ್ತರ ಕೊರಿಯಾ ಮಾತ್ರ ತನಗೂ ಕೋವಿಡ್​ ಮಹಾಮಾರಿಗೂ ಸಂಬಂಧವೇ ಇಲ್ಲ ಎಂಬಂತೆ ಇತ್ತು. ಗಡಿಗಳನ್ನು ಬಂದ್​ ಮಾಡುವುದರಿಂದ ಹಿಡಿದು ಕೊರೊನಾ ಸೋಂಕಿತರು ಪತ್ತೆಯಾದಲ್ಲಿ ಗುಂಡಿಕ್ಕುತ್ತೇವೆಂಬ ಕಠಿಣ ಆದೇಶಗಳ ಮೂಲಕವೇ ಉತ್ತರ ಕೊರಿಯಾ ಕಳೆದ 2 ವರ್ಷಗಳಿಂದ ಒಂದೇ ಒಂದು ಕೊರೊನಾ ಸೋಂಕನ್ನು ವರದಿ ಮಾಡದೆಯೇ ಹಾಯಾಗಿತ್ತು. ಆದರೆ ಇದೀಗ ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್​ ಪ್ರಕರಣ ವರದಿಯಾಗಿದೆ. ಗುರುವಾರದಂದು ಉತ್ತರ ಕೊರಿಯಾದಲ್ಲಿ ಮೊಟ್ಟ ಮೊದಲ ಕೋವಿಡ್​ ಪ್ರಕರಣ ವರದಿಯಾಗುತ್ತಿದ್ದಂತೆಯೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಫುಲ್​ ಅಲರ್ಟ್ ಆಗಿದ್ದಾರೆ.

ಕೊರೊನಾ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಸಭೆ ಕರೆದ ನಾಯಕ ಕಿಮ್​ ಜಾಂಗ್​ ಉನ್​​ ಮೊಟ್ಟ ಮೊದಲ ಬಾರಿಗೆ ಫೇಸ್​ ಮಾಸ್ಕ್​ ಧರಿಸಿದ್ದನ್ನು ಕಂಡು ಬಂದಿದೆ. ಕೊರೊನಾ ಸಾಂಕ್ರಾಮಿಕ ಆರಂಭವಾಗಿ ಎರಡು ವರ್ಷಗಳಲ್ಲಿ ಇಡೀ ವಿಶ್ವಕ್ಕೆ ನಲುಗಿದ್ದರೂ ಸಹ ನಮ್ಮಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.


ದೇಶದಲ್ಲಿ ಮೊದಲ ಕೋವಿಡ್​ ಪ್ರಕರಣ ವರದಿಯಾದ ಬಳಿಕ ಕಿಮ್​ ಜಾಂಗ್​ ಉನ್​​​ ದೇಶಾದ್ಯಂತ ಎಲ್ಲಾ ನಗರಗಳು ಹಾಗೂ ಕೌಂಟಿಗಳಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಕರೆ ನೀಡಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ಕೆಲಸದ ಸ್ಥಳಗಳನ್ನು ಘಟಕಗಳಿಂದ ಪ್ರತ್ಯೇಕಿಸಬೇಕು ಎಂದು ಹೇಳಿದರು. ಉತ್ತರ ಕೊರಿಯಾದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಇನ್ನೂ ಸೂಕ್ತ ಮಾಹಿತಿ ದೊರಕಿಲ್ಲ. ಇಲ್ಲಿ 26ಕ್ಕೂ ಅಧಿಕ ಮಿಲಿಯನ್​ ಜನರು ಇನ್ನೂ ಕೊರೊನಾ ಲಸಿಕೆಯನ್ನು ಸ್ವೀಕರಿಸಿಲ್ಲ. ಹಾಗೂ ಇಲ್ಲಿನ ಆರೋಗ್ಯ ವ್ಯವಸ್ಥೆ ಕೂಡ ಕಳಪೆ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತದೆ.


ರಾಜಧಾನಿ ಪ್ಯೋಂಗ್​ಯಾಂಗ್​ನಲ್ಲಿ ಜ್ವರದಿಂದ ಬಳಲುತ್ತಿರುವ ಅಸಂಖ್ಯಾತ ಜನಸಂಖ್ಯೆಯಿಂದ ಭಾನುವಾರ ಸ್ವ್ಯಾಬ್​ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು ಇವರೆಲ್ಲ ಓಮಿಕ್ರಾನ್​ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೊರಿಯನ್​ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನು ಓದಿ : IPL 2022 AB de Villiers : ಆರ್‌ಸಿಬಿಗೆ ಮರಳಲಿದ್ದಾರೆ ಎಬಿ ಡಿವಿಲಿಯರ್ಸ್ : ವಿರಾಟ್‌ ಕೊಹ್ಲಿ ಹೇಳಿಕೆ

ಇದನ್ನೂ ಓದಿ : Brendon McCullum : ಬ್ರೆಂಡನ್‌ ಮೆಕಲಮ್‌ ಇಂಗ್ಲೆಂಡ್‌ ತಂಡಕ್ಕೆ ಕೋಚ್‌ : ಕೆಕೆಆರ್‌ ತೊರೆಯುತ್ತಾರಾ ನ್ಯೂಜಿಲೆಂಡ್‌ ಮಾಜಿ ನಾಯಕ

Kim Jong-un wears mask for 1st time after North Korea confirms Covid outbreak

Comments are closed.