Superstar Krishna passed away: ನಟ ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ಹೃದಯಾಘಾತದಿಂದ ವಿಧಿವಶ

ಹೈದರಾಬಾದ್‌ : (Superstar Krishna passed away) ನಟ ಮಹೇಶ್‌ ಬಾಬು ಅವರ ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಘಟ್ಟಮನೇನಿ ಅವರು ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ವಿಧಿವಶರಾದರು. ನಿನ್ನೆ ಹೃದಯಘಾತದಿಂದ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗಿನ ಜಾವ ಅವರು ನಿಧನರಾಗಿದ್ದಾರೆ.

350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸೂಪರ್‌ ಸ್ಟಾರ್‌ ಕೃಷ್ಣ(Superstar Krishna passed away) ಅವರು ತೇನೆಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು ಮುಂತಾದ ಜನಪ್ರೀಯ ಚಿತ್ರಗಳಲ್ಲಿ ನಟಿಸಿದ್ದರು. ಹೆಚ್ಚಾಗಿ ಬಾಂಡ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕೃಷ್ಣ ಅವರನ್ನು ಆಂಧ್ರಪ್ರದೇಶದ ಜನರು ಬಾಂಡ್‌ ಕೃಷ್ಣ ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದರು. 1965ರಲ್ಲಿ ನಟನೆಯ ಪಯಣವನ್ನು ಆರಂಭಿಸಿದ ಇವರು ತೆಲುಗು ಚಿತ್ರರಂಗದಲ್ಲಿ ಸೂಪರ್‌ ಸ್ಟಾರ್‌ ಆಗಿ ಮಿಂಚಿದ್ದರು. ಐತಿಹಾಸಿಕ, ಪೌರಾಣಿಕ ಸೇರಿದಂತೆ ಹಲವಾರು ರೀತಿಯ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದರು. ಅಲ್ಲದೇ ತನ್ನದೇ ಆದ ರೀತಿಯಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಇವರು ಅಭಿಮಾನಿಗಳ ಮನಸ್ಸನ್ನು ಅಪಾರವಾಗಿ ಗೆದ್ದಿದ್ದರು.

ಸೆಪ್ಟೆಂಬರ್​ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದ್ದರಿಂದ ಕೃಷ್ಣ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್​ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಸೆಪ್ಟೆಂಬರ್‌ ತಿಂಗಳಿನಲ್ಲಿ ಮಹೇಶ್‌ ಬಾಬು ಅವರ ತಾಯಿ ಕೂಡ ನಿಧನರಾಗಿದ್ದರು. ಇದೀಗ ತಿಂಗಳಾಗುತ್ತಿದ್ದಂತೆ ಮಹೇಶ್‌ ಬಾಬು ಅವರ ತಂದೆ ಕೃಷ್ಣ ಅವರು ಕೂಡ ನಿಧನರಾಗಿದ್ದಾರೆ.

ಕೃಷ್ಣ ತೇನಿಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು, ಸಿಂಹಾಸನಂ, ಪಾಡಿಪಂಟಲು, ಪಚ್ಚನಿಸಂಸಾರಂ, ಪಂಡಂಟಿಕಾಪುರಂ, ದೇವಡು ಚೇಸಿನ ಮನಷುಲು, ಅಗ್ನಿಪರ್ವತಂ, ಕಂಚುಕಾಗಡ, ನಂಬರ್​ ಒನ್​, ಬ್ರಹ್ಮಾಸ್ತ್ರಂ, ಮೋಸಗಾಳ್ಳಕು ಮೋಸಗಾಡು, ಮುಂದಡುಗು, ಕಂಚುಕಾಗಡ, ವಾರಸುಡು, ಒಸೆಯ್ ರಾಮುಲಮ್ಮ, ಪ್ರಜಾರಾಜ್ಯಂ, ಗೂಢಚಾರಿ 116, ಏಜೆಂಟ್ ಗೋಪಿ, ಅಶ್ವತ್ಥಾಮ, ಇದ್ದರು ದೊಂಗಲು, ಮುಗ್ಗುರು ಕೊಡುಕಲು, ಅನ್ನದಮ್ಮುಲ ಸವಾಲ್​, ಕೈದಿ ರುದ್ರಯ್ಯ, ಈನಾಡು ಸೇರಿದಂತೆ 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ಬಣ್ಣ ಹಚ್ಚಿದ್ದರು. ಅಪಾರವಾಗಿ ಜನಪ್ರಿಯತೆ ಹೊಂದಿದ್ದ ಕೃಷ್ಣ ಅವರಿಗೆ 2500ಕ್ಕೂ ಹೆಚ್ಚು ಅಭಿಮಾನಿ ಸಂಘಗಳಿದ್ದವು. ಅಲ್ಲದೆ ಅವರ ನಟೆನೆಗೆ ಪದ್ಮ ಭೂಷಣ, ನಂದಿ ಅವಾರ್ಡ್, ಫಿಲ್ಮ್​ ಫೇರ್​ ಸೇರಿದಂತೆ ಅನೇಕ ಪ್ರಶಸ್ತಿಗಳು ಕೂಡ ಲಭಿಸಿದ್ದವು.

ಇದನ್ನೂ ಓದಿ : Mahesh Babu : ಮಹೇಶ್‌ ಬಾಬು ತಂದೆ ಆರೋಗ್ಯದಲ್ಲಿ ಏರುಪೇರು : ಟಾಲಿವುಡ್‌ ಹಿರಿಯ ನಟ ಕೃಷ್ಣ ಐಸಿಯುಗೆ ಶಿಪ್ಟ್

ಇದನ್ನೂ ಓದಿ : Preity Zinta : ಮಕ್ಕಳ ದಿನಾಚರಣೆ : ಅವಳಿ ಮಕ್ಕಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ನಟಿ ಪ್ರೀತಿ ಜಿಂಟಾ

ಸೂಪರ್‌ ಸ್ಟಾರ್‌ ಕೃಷ್ಣ ಘಟ್ಟಮನೇನಿ ಅವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಸೇರಿದಂತೆ ಅಭಿಮಾನಿಗಳು, ಆಪ್ತರು ಹಾಗೂ ಹಲವು ಕ್ಷೇತ್ರಗಳ ಗಣ್ಯರು, ನಟರು ಕಂಬನಿ ಮಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹೇಶ್‌ ಬಾಬು ಕುಟುಂಬಕ್ಕೆ ಸಾಂತ್ವಾನವನ್ನು ತಿಳಿಸುತ್ತಿದ್ದಾರೆ.

(Superstar Krishna passed away) Actor Mahesh Babu’s father Superstar Krishna Ghattamaneni passed away at a private hospital in Hyderabad on Tuesday morning at 4 o’clock. Yesterday he was ill with a heart attack and was admitted to the hospital. He passed away this morning.

Comments are closed.