Milk price hike Karnataka : ಹಾಲಿನ ದರ ಏರಿಕೆ: ಆದೇಶ ಜಾರಿಗೂ ಮುನ್ನವೇ ಬ್ರೇಕ್ ಹಾಕಿದ ಸಿಎಂ

ಬೆಂಗಳೂರು : ಈಗಾಗಲೇ ಬೆಲೆ ಏರಿಕೆ, ಬಸ್ ದರ ಏರಿಕೆ, ವಿದ್ಯುತ್ ದರ ಏರಿಕೆಯಿಂದ ಕಂಗಾಲಾದ ಜನರಿಗೆ ಕೆಎಮ್ ಎಫ್ ( KMF) ಸದ್ಯದಲ್ಲೇ ಹಾಲಿದ ದರ (Milk price hike Karnataka) ಏರಿಸುವುದಾಗಿ ಘೋಷಿಸಿ ಶಾಕ್ ನೀಡಿತ್ತು. ಆದರೆ ಈಗ ಈ ಪ್ರಸ್ತಾವನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಬ್ರೇಕ್ ಹಾಕಿದ್ದು ಸದ್ಯ ಹಾಲಿನ ದರ ಏರಿಕೆ ತೀರ್ಮಾನವಿಲ್ಲ ಎನ್ನುವ ಮೂಲಕ ಜನರ ಆಕ್ರೋಶದಿಂದ ಬಚಾವಾಗಿದ್ದಾರೆ.

ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲು ಮತ್ತು ಮೊಸರಿನ ದರವನ್ನು ಸದ್ಯದಲ್ಲೇ 3 ರೂಪಾಯಿ ಏರಿಕೆ ಮಾಡಲಾಗುವುದು ಎಂದು ಹೇಳಿದ್ದರು. ಅಲ್ಲದೇ ಹೀಗೆ ಹೆಚ್ಚಿಸಲಾದ ಹಣವನ್ನು ಪ್ರೋತ್ಸಾಹಧನದ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.

ಈಗಾಗಲೇ ರಾಜ್ಯದಲ್ಲಿ ಹಾಲಿನ ದರವನ್ನು ಪರಿಷ್ಕರಿಸುವಂತೆ 16 ಹಾಲು ಒಕ್ಕೂಟಗಳು ಕೆಎಂಎಫ್ ಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಹೀಗೆ ಏರಿಕೆಯಾದ ಹಣವನ್ನು ರೈತರಿಗೆ ನೀಡೋದಾಗಿಯೂ ಕೆಎಂಎಫ್ ಭರವಸೆ ನೀಡಿತ್ತು. ಕೆಎಂಎಫ್ ನೀಡಿದ ಭರವಸೆಯಂತೇ ನವೆಂಬರ್ 15 ರಿಂದ ಅಂದ್ರೇ ಇಂದಿನಿಂದಲೇ ಜಾರಿಗೆ ಬರುವಂತೆ ಪರಿಷ್ಕೃತ ದರವನ್ನು ಕೆಎಂಎಫ್ ಘೋಷಿಸಿತ್ತು. ಆದರೆ ಈಗ ಕೆಎಂಎಫ್ ಈ ನಿರ್ಣಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ. ಹಾಲಿನ ಪರಿಷ್ಕೃತ ದರವನ್ನು ಜಾರಿಗೆ ತರದಂತೆ ಕೆಎಂಎಫ್ ಅಧ್ಯಕ್ಷರಿಗೆ ಸ್ವತಃ ಸಿಎಂ ಸೂಚನೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಮೇಲೆ ಈಗಾಗಲೆ ಬೆಲೆ ಏರಿಕೆಯ ಆರೋಪವಿದೆ. ಅಲ್ಲದೇ ಜನರೂ ಸಾಕಷ್ಟು ಆಕ್ರೋಶ ಗೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಹಾಲಿನ ದರ ಏರಿಕೆ ಸೂಕ್ತವಲ್ಲ.‌ ಇದರಿಂದ ರಾಜ್ಯ ಸರ್ಕಾರದ ಮೇಲೆ ಜನರಿಗೆ ಮತ್ತಷ್ಟು ಬೇಸರ ಹಾಗೂ ಆಕ್ರೋಶ ಹೆಚ್ಚುತ್ತದೆ. ಹೀಗಾಗಿ ದರ ಏರಿಕೆಗೆ ಸಿಎಂ ತಡೆ ನೀಡಿದ್ದಾರಂತೆ.

ಸದ್ಯದಲ್ಲೆ ಬಿಬಿಎಂಪಿ ಚುನಾವಣೆ ಘೋಷಣೆಯಾಗಲಿದೆ. ಇದರೊಂದಿಗೆ ಇನ್ನೇನು ಆರು ತಿಂಗಳಲ್ಲಿ ಚುನಾವಣೆ ಕೂಡ ಬರಲಿದೆ. ಇಂಥ ಹೊತ್ತಿನಲ್ಲಿ ಅತ್ಯಂತ ಅವಶ್ಯಕ ಸಂಗತಿಗಳಲ್ಲಿ ಒಂದಾದ ಹಾಲಿನ ದರ ಏರಿಕೆ ಜನರಲ್ಲಿ ಬಿಜೆಪಿ ಬಗ್ಗೆ ಆಕ್ರೋಶ ಹುಟ್ಟುಹಾಕಲಿದೆ ಎಂಬುದು ಸಿಎಂ ಲೆಕ್ಕಾಚಾರ. ಇದೇ ಕಾರಣಕ್ಕೆ ಸಿಎಂ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದ್ದು, ಸದ್ಯಕ್ಕೆ ದರ ಏರಿಕೆ ಬೇಡ ಎಂದು ಅಭಿಪ್ರಾಯಿಸಿದ್ದಾರಂತೆ. ಒಟ್ಟಿನಲ್ಲಿ ಸರ್ಕಾರಕ್ಕೆ ಚುನಾವಣೆ ಭೀತಿ ಎದುರಾಗಿರೋದರಿಂದ ಜನರು ಹಾಲು ಖರೀದಿಸಲು ದುಬಾರಿ ಬೆಲೆ ತೆರೋದು ತಪ್ಪಿದಂತಾಗಿದೆ.

ಇದನ್ನೂ ಓದಿ : Post Office Recruitment 2022:188 ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Fuel under GST: ರಾಜ್ಯಗಳು ಒಪ್ಪಿಗೆ ನೀಡಿದರೆ ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ ತರಲು ಸಿದ್ಧ :ಕೇಂದ್ರ ಸರ್ಕಾರ

Milk price hike Karnataka CM Basavaraj bommai put a brake before the order was implemented

Comments are closed.