Pro Kabaddi League : ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್ ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ನಂ.1

ಪುಣೆ: ಕರ್ನಾಟಕದ ದಿಗ್ಗಜ ಆಟಗಾರ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ತಂಡ, ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League)ಆವೃತ್ತಿಯ ಟೂರ್ನಿಯಲ್ಲಿ 8ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ, 7ನೇ ಆವೃತ್ತಿಯ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಬಳಗವನ್ನು 43-27ರ ಅಂತರದಲ್ಲಿ ಭರ್ಜರಿಯಾಗಿ ಬಗ್ಗು ಬಡಿಯಿತು. ವಿಶೇಷ ಏನಂದರೆ ಬೆಂಗಾಲ್ ವಾರಿಯರ್ಸ್ ಪ್ರೊ ಕಬಡ್ಡಿ ಲೀಗ್’ನಲ್ಲಿ ಚಾಂಪಿಯನ್ ಆದಾಗ ಬಿ.ಸಿ ರಮೇಶ್ ಅವರೇ ಬೆಂಗಾಲ್ ತಂಡದ ಕೋಚ್ ಆಗಿದ್ದರು.

ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 14 ರೇಡ್ ಪಾಯಿಂಟ್ಸ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೆ, ಪುಣೇರಿ ಪಲ್ಟನ್ ಪರ ಯುವ ರೇಡರ್ ಆಕಾಶ್ ಶಿಂಧೆ 10 ರೇಡ್ ಪಾಯಿಂಟ್ಸ್, ಅಸ್ಲಾಂ ಇನಾಮ್ದಾರ್ 9 ರೇಡ್ ಪಾಯಿಂಟ್ಸ್ ಹಾಗೂ ಮೋಹಿತ್ ಗೊಯಾಟ್ 8 ರೇಡ್ ಪಾಯಿಂಟ್ಸ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 33-32ರ ಅಂತರದಲ್ಲಿ ಒಂದು ಅಂಕದ ರೋಚಕ ಗೆಲುವು ಸಾಧಿಸಿತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟನ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಬುಲ್ಸ್ ಬಳಗ ಪುಣೇರಿ ಪಲ್ಟನ್ ಪಡೆಯನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲಿದೆ. ಸದ್ಯ ಆಡಿರುವ 13 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿರುವ ಬೆಂಗಳೂರು ಬುಲ್ಸ್ 46 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.
ಮಂಗಳವಾರ ನಡೆಯುವ ಮತ್ತೊಂದು ಪಂದ್ಯದಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್, 2ನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ತಂಡವನ್ನು ಎದುರಿಸಲಿದೆ.

Pro Kabaddi League : ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು

  1. ಜೈಪುರ ಪಿಂಕ್ ಪ್ಯಾಂಥರ್ಸ್ Vs ಯು ಮುಂಬಾ
  2. ತೆಲುಗು ಟೈಟನ್ಸ್ Vs ಬೆಂಗಳೂರು ಬುಲ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Tamil Thalaivas vs Bengaluru Bulls : ತಮಿಳ್ ತಲೈವಾಸ್ ಕೊಬ್ಬಿಳಿಸಿ ಅಗ್ರಸ್ಥಾನಕ್ಕೇರಿದ ಕೆಂಪು ಗೂಳಿಗಳು

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League: After winning against Bengal Warriors, Puneri Paltan is again No.1 in the points table

Comments are closed.