BIGG BOSS PROMO : ಮತ್ತೆ ಹೊರಬಿತ್ತು ಬಿಗ್ ಬಾಸ್ ಪ್ರೋಮೋ: ಕಿರುತೆರೆಗೆ ಬಂದ ಕಮಲ್ ಹಾಸನ್

ಕಿರುತೆರೆಯ ತುಂಬೆಲ್ಲ ಬಿಗ್ ಬಾಸ್ ನದ್ದೆ ಸುದ್ದಿ . ಕನ್ನಡ, ತೆಲುಗು ಬಳಿಕ ಇದೀಗ ತಮಿಳು ಬಿಗ್ ಬಾಸ್ ಪ್ರೋಮೋ ಹೊರಬಿದ್ದಿದ್ದು ಸಖತ್ ಪ್ರೋಮೋ ಜೊತೆ ಕಮಲ ಹಾಸನ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ.

ತಮಿಳು ಬಿಗ್ ಬಾಸ್ ಸೀಸನ್ 5ಕ್ಕೆ ತಯಾರಿ ನಡೆದಿದ್ದು ರಿಲೀಸ್ ಆಗಿರೋ ಪ್ರೋಮೋ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚುನಾವಣೆ ಮಧ್ಯೆಯೂ ಸೀಸನ್ ನಾಲ್ಕನ್ನು ಯಶಸ್ವಿಯಾಗಿ ಮುಗಿಸಿದ ಕಮಲ ಹಾಸನ್ ಐದನೇ ಸೀಸನ್ ಗೆ ಭರದ ಸಿದ್ಧತೆ ನಡೆಸಿದ್ದಾರೆ.

ಬಿಗ್ ಬಾಸ್ ಪ್ರೋಮೋದಲ್ಲಿ ಕಮಲ ಹಾಸನ್ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಆರಂಭಿಸೋಣವೇ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಬಿಗ್ ಬಾಸ್ ಲೋಗೋ ಕೂಡಾ ಅನಾವರಣಗೊಂಡಿದೆ.

ಕೊರೋನಾ ಮೂರನೆ ಅಲೆಯ ಭೀತಿ ನಡುವೆಯೇ ತಮಿಳು ಬಿಗ್ ಬಾಸ್ ಆರಂಭವಾಗಲಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಶೋ ಪ್ರಸಾರವಾಗಲಿದೆ. ಶೋ ಗೂ ಮುನ್ನ ಸ್ಪರ್ಧಿಗಳಿಗೆ ಕ್ವಾರಂಟೈನ್ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಅನುಸರಿಸಲು ಬಿಗ್ ಬಾಸ್ ಆಯೋಜಕರು ನಿರ್ಧರಿಸಿದ್ದಾರೆ.

ತಮಿಳು ಬಿಗ್ ಬಾಸ್ ಸೀಸನ್ 5 ರಲ್ಲಿ 16 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು 100 ದಿನಗಳ ಕಾಲ ಶೋ ನಡೆಯಲಿದೆ. ಬಿಗ್ ಬಾಸ್ ಶೋ ದ ಜೊತೆಗೆ ಕಮಲ ಹಾಸನ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದು ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಮಲಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಕಮಲ ಹಾಸನ್ ಜೊತೆ ನಟರಾದ ವಿಜಯ್ ಸೇತುಪತಿ, ಮಲಯಾಳಂ ನಟ ಫಹಾದ್ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನ ಚೊಚ್ಚಲ ಸಿನಿಮಾ ಬಗ್ಗೆ ಮನಬಿಚ್ಚಿದ ಕೊಡಗಿನ ಕುವರಿ: ಮಿಶನ್ ಮಜ್ನು ಬಗ್ಗೆ ರಶ್ಮಿಕಾ ಕಮೆಂಟ್

ಇದನ್ನೂ ಓದಿ : ಮತ್ತು ಬರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ:ಮುಂಬೈಪ್ರೊಡಕ್ಷನ್ ಹೌಸ್ ವಿರುದ್ಧ ಮಿಸ್ ಇಂಡಿಯಾ ಯೂನಿವರ್ಸ್ ಆರೋಪ

(Tamil News : Bigg Boss Tamil promo Release )

Comments are closed.