Tanuja Movie Trailer Release : ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಬಿ.ಎಸ್ ಯಡಿಯೂರಪ್ಪ : ಸಚಿವ ಸುಧಾಕರ್‌ ಪಾತ್ರ ಏನು ಗೊತ್ತಾ ?

ಮಹಾ ಮಾರಿ ಕರೋನಾದಿಂದ ಆದ ಅವಾಂತರಗಳು ಒಂದೆರಡಲ್ಲ. ಕರೋನಾದಿಂದ ಸಾಕಷ್ಟು ಮಂದಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದರು. ಈ ವೇಳೆಯಲ್ಲಿ ನಡೆದ ನೈಜ ಘಟನೆ ಆಧರಿಸಿ ಕನ್ನಡದ ಸಿನಿಮಾವೊಂದು ನಿರ್ಮಾಣ (Tanuja Movie ) ಆಗಿದೆ. ಕರೋನಾ ಹಾವಳಿಯ ಸಮಯದಲ್ಲಿ ನೀಟ್‌ ಪರೀಕ್ಷೆ ಬರೆಯಲು ಪರದಾಡಿದ ತನುಜಾ ವಿದ್ಯಾರ್ಥಿಯ ಕಥೆಯೇ “ತನುಜಾ” ಸಿನಿಮಾ.

ಈ ವೇಳೆ ಶಿವಮೊಗ್ಗದ ಕುಗ್ರಾಮವೊಂದರಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆದಿದ್ದರು. ಆ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲು ಅಂದು ನೆರವಾಗಿದ್ದು, ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್. ಇವರೊಂದಿಗೆ ಪತ್ರಕರ್ತ ವಿಶ್ವೇಶ್ವರ್ ಭಟ್ ಹಾಗೂ ಪ್ರದೀಪ್ ಈಶ್ವರ್ ನೆರವು ನೀಡಿದ್ದರು.

ಅದೇ ತನುಜಾ ಅಂದು ನೀಟ್ ಪರೀಕ್ಷೆ ಬರೆದು ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ. ಈ ನೈಜ ಘಟನೆಯನ್ನೇ ಇಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ “ತನುಜಾ” ಸಿನಿಮಾ ಮಾಡಿದ್ದಾರೆ. ಇತ್ತೀಚಿಗೆಷ್ಟೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ವೈದ್ಯಕೀಯ ಸಚಿವರಾದ ಸುಧಾಕರ್ “ತನುಜಾ” ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ತನುಜಾ’ ಸಿನಿಮಾದಲ್ಲಿ ಸಚಿವ ಸುಧಾಕರ್ ಕೂಡ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅವರ ಪಾತ್ರ ಏನು ಅನ್ನುವುದನ್ನು ಸಚಿವ ಸುಧಾಕರ್ ಹೇಳಿದ್ದಾರೆ. “ನಾನು ಸಾಮಾನ್ಯವಾಗಿ ಎಲ್ಲರ ಟ್ವೀಟ್‌ಗಳನ್ನೂ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಅದನ್ನು ಗಮನಿಸಿ ಆ ಹುಡುಗಿ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರ ನೀಡಿದ್ದರು. ಆಮೇಲೆ ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ ತನುಜಾ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ‌ ಎಂದರು. ಹಾಗೇ ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದರು. ಡಾಕ್ಟರ್ ಆಗಿರುವ ನನ್ನನ್ನು ಆಕ್ಟರ್ ಮಾಡಿದರು.” ಎಂದು ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ : Akshay Kumar : ಛತ್ರಪತಿ ಶಿವಾಜಿ ಕಾಲದಲ್ಲಿ ಬಲ್ಬ್‌ ಕಂಡು ಹಿಡಿದಿದ್ಯಾರು ? ಅಕ್ಷಯ್‌ ಕುಮಾರ್‌ ವಿರುದ್ಧ ನೆಟ್ಟಿಗರು ಗರಂ

ಇದನ್ನೂ ಓದಿ : Shah Rukh Khan’s son Aryan : ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್

ಇದನ್ನೂ ಓದಿ : Padavi Poorva Release Date : ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ ಯೋಗರಾಜ್‌ ಭಟ್ ನಿರ್ಮಾಣದ “ಪದವಿ ಪೂರ್ವ” ಸಿನಿಮಾ

“ತನುಜಾ” ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂಪ್ಪ ಅವರು ಸಿಎಂ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕರೋನಾ ವೇಳೆ ವಿದ್ಯಾರ್ಥಿನಿಯೊಬ್ಬರು ಬೆಂಗಳೂರಿಗೆ ಬಂದು ನೀಟ್ ಬರೆದು ಎಂಬಿಬಿಎಸ್ ಸೇರಿದ ಘಟನೆಯನ್ನು ತೆರೆಮೇಲೆ ತರುತ್ತಿದ್ದಾರೆ. ಇದೇ ವೇಳೆ “ತನುಜಾ” ನಿಜಕ್ಕೂ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ” ಎಂದು ನಟಿ ಸಪ್ತ ಪಾವೂರ್ ತಿಳಿಸಿದ್ದಾರೆ.

Tanuja Movie Trailer Release: BS Yeddyurappa entered Sandalwood: Do you know what the role of Minister Sudhakar is?

Comments are closed.