ತತ್ಸಮ ತದ್ಭವ ಸಿನಿಮಾ : ನಟ ಪ್ರಜ್ವಲ್‌ ದೇವರಾಜ್‌ ಹೊಸ ಪೋಸ್ಟರ್‌ ಹಂಚಿಕೊಂಡ ನಟಿ ಮೇಘನಾ ಸರ್ಜಾ

ನಟಿ ಮೇಘನಾ ಸರ್ಜಾ ತಮ್ಮ ಪತಿ ಚಿರಂಜೀವಿ ಸರ್ಜಾ ಅಗಲಿಕೆ ನೋವಿನಿಂದ ಸ್ವಲ್ಪ ಸ್ವಲ್ಪವಾಗಿಯೇ ಹೊರ ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ಮಗ ರಾಯನ್‌ ಸರ್ಜಾ ಜೊತೆ ಸಂಪೂರ್ಣವಾಗಿ ತಾಯ್ತನವನ್ನು ಅನುಭವನ್ನು ಪಡೆಯುತ್ತಿದ್ದಾರೆ. ಸದ್ಯ ತತ್ಸಮ ತದ್ಭವ ಸಿನಿಮಾದ (Tatsama Tadbhava movie) ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಮರಳಲಿದ್ದಾರೆ. ಹೀಗಾಗಿ ತಮ್ಮ‌ ನೆಚ್ಚಿನ ನಟಿಯನ್ನು ಮತ್ತೆ ಬೆಳ್ಳಿ ತೆರೆ ಮೇಲೆ ನೋಡಲು ಕಾತುರದಿಂದ ಕಾದಿದ್ದಾರೆ. ಈ ಸಿನಿಮಾವನ್ನು ಚಿರು ಸ್ನೇಹಿತರು ಸೇರಿಕೊಂಡು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ ಕೂಡ ನಟಿ ಮೇಘನಾಕ್ಕೆ ಜೊತೆಯಾಗಲಿದ್ದಾರೆ. ಸದ್ಯ ನಟಿ ಮೇಘನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್‌ ದೇವರಾಜ್‌ ಹೊಸ ಲುಕ್‌ನ್ನು ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ.

ನಟಿ ಮೇಘನಾ ರಾಜ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ದೆವ್ವವು ವಿವರಗಳಲ್ಲಿದೆ. ಆ ವಿವರಗಳನ್ನು ಪಡೆಯಲು, ನಿಮಗೆ ಇನ್ನೊಂದು ದೆವ್ವದ ಅಗತ್ಯವಿದೆ!” ತತ್ಸಮ ತದ್ಭವದ ಬಹು ನಿರೀಕ್ಷಿತ ಎರಡನೇ ನೋಟ ಇಲ್ಲಿದೆ ಮತ್ತು ಪ್ರಜ್ವಲ್‌ ದೇವರಾಜ್‌ ಎಲ್‌ಐಟಿಯಂತೆ ಕಾಣುತ್ತಿದೆ” ಎಂದು ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ನಟಿ ಮೇಘನಾ ಸರ್ಜಾ ಪತಿ ಚಿರು ಸರ್ಜಾ ನಿಧನದ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದು, ಈಗ ನಟನೆ ಕಡೆ ಗಮನ ನೀಡುತ್ತಿದ್ದಾರೆ.

ಇದನ್ನೂ ಓದಿ : ಕೆಡಿ ಸೆಟ್‌ನಲ್ಲಿ ನಟ ಸಂಜಯ್‌ ದತ್‌ಗೆ ಗಾಯ : ಸುಳ್ಳು ಸುದ್ದಿ ಎಂದ ನಿರ್ದೇಶಕ ಪ್ರೇಮ್

ಇದನ್ನೂ ಓದಿ : ಮಗನಿಗಾಗಿ ಏನೆಲ್ಲ ಪ್ಲ್ಯಾನ್ ಮಾಡಿದ್ದಾರೆ ಮಮ್ಮಿ : ಇಲ್ಲಿದೆ ಮೇಘನಾ ರಾಜ್ ಸರ್ಜಾ Exclusive Talk

ಮಹಿಳಾ ಪ್ರಧಾನ ನಿಮಾದ ಮೂಲಕ ವಿಭಿನ್ನ ಕಥೆಯನ್ನು ತೆರೆಯ ಮೇಲೆ ಹೇಳಲು ಸಜ್ಜಾಗಿದ್ದಾರೆ. ತತ್ಸಮ ತದ್ಭವ ಸಿನಿಮಾಕ್ಕೆ ವಿಶಾಲ್‌ ಅಥ್ರೇಯಾ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಪನ್ನಗ ಭರಣ ಈ ಸಿನಿಮಾದ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಈ ಸಿನಿಮಾವು ಶೋಷಣೆಗೆ ಒಳಗಾದ ಯುವತಿಯ ಕಥೆ ಹಂದರವನ್ನು ಒಳಗೊಂಡಿದೆ. ಮೇಘನಾ ರಾಜ್ ಜೊತೆ ಇದೀಗ ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರುತಿ ಸುಮನಳಾಗಿ ಕಾಣಿಸಿಕೊಳ್ತಿದ್ದಾರೆ.

Tatsama Tadbhava Movie: Actor Prajwal Devaraj Shares New Poster Actress Meghana Sarja

Comments are closed.