ಧೋನಿ ಬ್ಯಾಟಿಂಗ್ ವೇಳೆ 2.2 ಕೋಟಿ ವೀವ್ಸ್ : ದಾಖಲೆ ಬರೆದ ಕ್ಯಾಪ್ಟನ್ ಕೂಲ್

ಚೆನ್ನೈ: ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿಯಾಗಿ 3 ವರ್ಷಗಳೇ ಕಳೆದಿವೆ. ಆದರೆ ಧೋನಿ ಕ್ರೇಜ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಮುನ್ನಡೆಸುತ್ತಿರುವ ಧೋನಿ, ಬ್ಯಾಟಿಂಗ್ ಮಾಡುವ ವೇಳೆ ಅಭಿಮಾನಿಗಳು ಟಿವಿ ಮುಂದೆ ಕೂತು “ತಲಾ” ಆಟವನ್ನು ವೀಕ್ಷಿಸುತ್ತಾರೆ.

ಬುಧವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (Rajastan Royals) ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 32 ರನ್ ಸಿಡಿಸಿದ್ದರು. ಕೊನೆಯ ಓವರ್’ನಲ್ಲಿ ಗೆಲ್ಲಲು 21 ರನ್’ಗಳು ಬೇಕಿದ್ದಾಗ ಅಬ್ಬರಿಸಿದ್ದ ಧೋನಿ, 20ನೇ ಓವರ್’ನ 2 ಹಾಗೂ 3ನೇ ಎಸೆತಗಳಲ್ಲಿ ಸತತ ಸಿಕ್ಸರ್ ಬಾರಿಸಿದ್ದರು. ಆದರೆ ಕೊನೆಯಲ್ಲಿ ಚೆನ್ನೈ ತಂಡ 3 ರನ್’ಗಳಿಂದ ಪಂದ್ಯ ಸೋತಿತ್ತು.

41 ವರ್ಷದ ಧೋನಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಜಿಯೊ ಸಿನಿಮಾದಲ್ಲಿ 2.2 ಕೋಟಿ views ದಾಖಲಾಗಿದೆ. ಕೊನೆಯ ಓವರ್’ಗೂ ಮುನ್ನ 1.8 ಕೋಟಿ ಇದ್ದ views ಅಂತಿಮ ಓವರ್’ನಲ್ಲಿ ಧೋನಿ ಬ್ಯಾಟಿಂಗ್ ಮಾಡುವ ವೇಳೆ 2.2 ಕೋಟಿ views ದಾಖಲಾಗಿದೆ ಎಂದು ಐಪಿಎಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹಕ್ಕು ಪಡೆದಿರುವ ಜಿಯೊ ಸಿನಿಮಾ (Jio Cinema) ಟ್ವೀಟ್ ಮಾಡಿದೆ.

ಮಾರ್ಚ್ 31ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ 5.6 ಕೋಟಿ views ದಾಖಲಾಗಿತ್ತು ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ತಿಳಿಸಿತ್ತು. ಧೋನಿ ಬ್ಯಾಟಿಂಗ್ ಮಾಡುವ ವೇಳೆಯೇ ಈ views ದಾಖಲಾಗಿತ್ತು.

ಇದನ್ನೂ ಓದಿ : Suryakumar Yadav: 26 ದಿನಗಳಲ್ಲಿ 4 ಗೋಲ್ಡನ್ ಡಕ್, ವೈಟ್ ಬಾಲ್ ಕ್ರಿಕೆಟ್’ನಲ್ಲಿ ಶಾಕ್ ಮೇಲೆ ಶಾಕ್; ಏನಾಗಿದೆ ಸೂರ್ಯನಿಗೆ..?

ಇದನ್ನೂ ಓದಿ : Virat Kohli Gautam Gambhir : 10 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ಕಿತ್ತಾಟ, ಅದೇ ಚಿನ್ನಸ್ವಾಮಿಯಲ್ಲೀಗ ಮುದ್ದಾಟ

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ನಾಯಕ ಧೋನಿ ಅವರ ಅಬ್ಬರದ ಹೊರತಾಗಿಯೂ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಗಿ 3 ರನ್’ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ 2008ರ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.‌

Chennai Super Kings: 2.2 crore views when Dhoni is batting: Captain Cool who wrote the record

Comments are closed.