The Delhi Files : ದಿ ಕಾಶ್ಮೀರಿ ಫೈಲ್ಸ್ ಬಳಿಕ ದಿ ದೆಹಲಿ ಫೈಲ್ಸ್ : ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ

ಕಳೆದ ಒಂದು ತಿಂಗಳಿನಿಂದ ದೇಶದಾದ್ಯಂತ ಸದ್ದು ಮಾಡಿದ್ದು ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ. 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯವನ್ನು ತೆರೆಗೆ ತಂದ ಈ ಸಿನಿಮಾ ತೀವ್ರ ಸಂಚಲನ ಮೂಡಿಸಿತ್ತು. ಮಾತ್ರವಲ್ಲ ಬಿಜೆಪಿ ಸಿನಿಮಾದ ಪರ ಹಾಗೂ ಕಾಂಗ್ರೆಸ್ ಸಿನಿಮಾದ ವಿರುದ್ಧ ನಿಂತು ರಾಜಕೀಯ ಚರ್ಚೆಯೂ ನಡೆದಿತ್ತು. ಹೀಗೆ ಸಿನಿಮಾದ ಮೂಲಕವೇ ಸಂಚಲನ ಮೂಡಿಸಿದ ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ಯಾವುದಿರಬಹುದು ಎಂಬ ಚರ್ಚೆಗೆ ತೆರೆ ಎಳೆದಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಮುಂದಿನ ನಿಲ್ದಾಣ ದೆಹಲಿ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ದಿ ದೆಹಲಿ ಫೈಲ್ಸ್ ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ಎಂದು ಟ್ವೀಟರ್ ನಲ್ಲಿ ಘೋಷಿಸಿದ್ದಾರೆ. ಅಲ್ಲದೇ ತಮ್ಮ ಈಗಿನ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ ಗಾಗಿ ನಾಲ್ಕು ವರ್ಷಗಳ ತಮ್ಮೊಂದಿಗೆ ಶ್ರಮಿಸಿದವರಿಗೆ ವಿವೇಕ್ ಅಗ್ನಿಹೋತ್ರಿ ಧನ್ಯವಾದ ಹೇಳಿದ್ದಾರೆ.

ಅಲ್ಲದೇ ಕಾಶ್ಮೀರಿ ಹಿಂದೂಗಳಿಗೆ ಆಗಿರುವ ಅನ್ಯಾಯದ ಕುರಿತು ಜನರಿಗೆ ತಿಳಿಸುವುದು ಕೂಡ ಅತಿ ಅಗತ್ಯವಾಗಿತ್ತು ಎಂದು ವಿವೇಕ್ ಅಗ್ನಿಹೋತ್ರಿ ಮಾಹಿತಿ ನೀಡಿದ್ದಾರೆ. ಆದರೆ ತಮ್ಮ ಮುಂದಿನ ಸಿನಿಮಾ ದಿ ದೆಹಲಿ ಫೈಲ್ಸ್ ಸಿನಿಮಾ ಯಾವ ಕತೆಯನ್ನು ಆಧರಿಸಿದೆ ಎಂಬ ಮಾಹಿತಿಯನ್ನು ವಿವೇಕ್ ಬಿಟ್ಟುಕೊಟ್ಟಿಲ್ಲ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾರ್ಚ್ 11 ರಂದು ತೆರೆಕಂಡಿದ್ದು, ಬಳಿಕ ಸಂಚಲನ ಮೂಡಿಸಿತ್ತು. ಅಲ್ಲದೇ ಈ ಸಿನಿಮಾಗಳಿಗೆ ಬಿಜೆಪಿ ಆಡಳಿತವಿರೋ ರಾಜ್ಯಗಳು ತೆರಿಗೆ ವಿನಾಯ್ತಿ ಘೋಷಿಸಿದ್ದವು. ಇದು ಕೂಡ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಅನುಪಮ್ ಖೇರ್, ಪಲ್ಲವಿ ಜೋಶಿ,ಮಿಥುನ್ ಚಕ್ರವರ್ತಿ ಹಾಗೂ ದರ್ಶನ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ತೀವ್ರ ಚರ್ಚೆ, ಟೀಕೆ ಗುರಿಯಾಗಿದ್ದರೂ ಒಟ್ಟು ಸಿನಿಮಾ 330 ಕೋಟಿ ಗಳಿಸಿ ಸದ್ದು ಮಾಡಿತ್ತು. ದಿ ಕಾಶ್ಮೀರಿ ಫೈಲ್ಸ್ ಗೂ ಮುನ್ನ ವಿವೇಕ್ ಅಗ್ನಿಹೋತ್ರಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ನಿಗೂಢ ಸಾವಿನ ಕುರಿತು ದಿ ತಾಷ್ಕೆಂಟ್ ಫೈಲ್ಸ್ ಚಿತ್ರ ನಿರ್ಮಿಸಿದ್ದರು.

ಇದನ್ನೂ ಓದಿ : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್

ಇದನ್ನೂ ಓದಿ : ಬಾಲಿವುಡ್ ನಲ್ಲೂ ಕೆಜಿಎಫ್-2 ಹೊಸ ದಾಖಲೆ : ಮೊದಲ ದಿನವೇ 125 ಕೋಟಿ ಬಾಚಿದ ರಾಕಿಬಾಯ್‌

The Delhi Files : Vivek Agnihotri’s New Cinema After The Kashmiri Files

Comments are closed.