Venkat Bharadwaj : ವೆಂಕಟ್ ಭಾರದ್ವಾಜ್ ನಿರ್ದೇಶನ ನಗುವಿನ ಹೂಗಳ ಮೇಲೆ ಸಿನಿಮಾದ ಮೊದಲ ಹಾಡು ರಿಲೀಸ್

‘ಆಮ್ಲೆಟ್’, ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ (Venkat Bharadwaj) ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ “ನಗುವಿನ ಹೂಗಳ ಮೇಲೆ”. ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿದಾಸ್, ಶರಣ್ಯ ಶೆಟ್ಟಿ ಅಭಿನಯಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರೆದುರು ಬರಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಇದೀಗ ಸಿನಿಮಾ ತಂಡ ಸಿನಿಮಾದ ಮೊದಲ ಹಾಡನ್ನು ಜೀ ಮ್ಯೂಸಿಕ್‌ನಲ್ಲಿ ಬಿಡುಗಡೆ ಮಾಡಿದೆ.

ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ ಅರಳಿರುವ “ಇರಲಿ ಬಿಡು ಈ ಜೀವ ನಿನಗಾಗಿ” ರೋಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ತಜೇಂಧರ್ ಸಿಂಗ್, ನಿಹಾರಿಕ ನಾಥ್ ‘ಇರಲಿ ಬಿಡು ಈ ಜೀವ ನಿನಗಾಗಿ’ ಹಾಡಿಗೆ ದನಿಯಾಗಿದ್ದು, ಲವ್ ಪ್ರಾನ್ ಮೆಹತಾ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಹಾಗಾಗಿ ಈ ಮೂಲಕ ಸಿನಿಮಾ ಪ್ರಚಾರ ಕಾರ್ಯವನ್ನು ಸಿನಿತಂಡ ಆರಂಭಿಸಿದೆ. ಸೆನ್ಸಾರ್ ಗೆ ರೆಡಿಯಾಗಿರುವ ಸಿನಿಮಾ ಏಪ್ರಿಲ್‌ನಲ್ಲಿ ಬೆಳ್ಳಿ ಪರದೆ ಮೇಲೆ ಬರಲಿದ್ದು, ಸಿನಿರಸಿಕರನ್ನು ಮನರಂಜಿಸಲಿದೆ.

ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಒಳಗೊಂಡ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ದೊಡ್ಡ ಕಲಾವಿದರ ಬಳಗ ಸಿನಿಮಾದಲ್ಲಿದೆ. ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ : Vani Jayaram passed away : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಇದನ್ನೂ ಓದಿ : ಮತ್ತೆ ತೆರೆಗೆ ಬರಲಿದೆ ದಿಗಂತ್ – ಪವನ್ ಕುಮಾರ್ ಕಾಂಬಿನೇಶನ್‌ನ ‘ಲೈಫು ಇಷ್ಟೇನೆ’ ಸಿನಿಮಾ

ಇದನ್ನೂ ಓದಿ : ದೊಡ್ಮನೆ ಹುಡ್ಗ ಯುವರಾಜ್‌ ಕುಮಾರ್‌ ಜೊತೆ ಪಠಾಣ್ ಸಕ್ಸಸ್ ಆಚರಿಸಿದ ಶಾರುಖ್ ಫ್ಯಾನ್ಸ್

ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಈ ಸಿನಿಮಾಕ್ಕೆ ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ನೀಡಿದ್ದಾರೆ. ಈ ಸಿನಿಮಾದ ದೃಶ್ಯವಾಳಿಗಳನ್ನು ಪ್ರಮೋದ್ ಭಾರತಿಯ ಛಾಯಾಗ್ರಹಣದ ಮೂಲಕ ಸೆರೆ ಹಿಡಿದಿದ್ದಾರೆ. ಇನ್ನು ಈ ಸಿನಿಮಾಕ್ಕೆ ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೈಗರ್ ಶಿವು ಅವರ ಸಾಹಸ ಸಿನಿಮಾಕ್ಕಿದೆ.

The first song release of Naguvina Hoogala Mele directed by Venkat Bharadwaj

Comments are closed.