Blast in showstar event: ಶೋ ಸ್ಟಾರ್‌ ಈವೆಂಟ್‌ ಸೈಟ್‌ನಲ್ಲಿ ಸ್ಪೋಟ: ತಪ್ಪಿದ ಬಾರೀ ಅನಾಹುತ

ಮಣಿಪುರ: (Blast in showstar event) ಇಂಫಾಲ್‌ ಫ್ಯಾಶನ್‌ ಶೋ ಕಾರ್ಯಕ್ರಮದ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದ್ದು, ಈ ವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಇಂಫಾಲ್‌ ಪೂರ್ವದ ಹಟ್ಟ ಕಂಜೇಲ್‌ ಬಂಗ್‌ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿಲಿಯೋನ್‌ ಭಾಗವಹಿಸಬೇಕಿತ್ತು.

ಇಂಫಾಲ್‌ ಪೂರ್ವದ ಹಟ್ಟ ಕಂಜೇಲ್‌ ಬಂಗ್‌ ಪ್ರದೇಶದಲ್ಲಿ, ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಿಂದ ನೂರು ಮೀಟರ್‌ ದೂರದಲ್ಲಿ ಈ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಚೈನೀಸ್‌ ಗ್ರೆನೈಡ್‌ ರೀತಿ ಸಾಧನ ಸ್ಫೋಟಗೊಂಡಿದ್ದು, ಈ ಕೃತ್ಯದ ತನಿಖೆ ನಡೆಯುತ್ತಿದೆ. ಈ ವರೆಗೂ ಯಾವುದೇ ಭಯೋತ್ಪಾದನಾ ಸಂಘಟನೆಗಳು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.

ಈ ಪ್ರದೇಶದಲ್ಲಿ ನಾಳೆಯ ದಿನ ನಡೆಯುವ ಫ್ಯಾಶನ್‌ ಶೋ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಬೇಕಾದ ತಯಾರಿಗಳನ್ನು ನಡೆಸಿಕೊಳ್ಳಲಾಗುತ್ತಿತ್ತು. ಅಲ್ಲದೇ ನಾಳೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟಿ ಸನ್ನಿಲಿಯೋನ್‌ ಆಗಮಿಸುತ್ತಿದ್ದು, ಬಾರೀ ದುರಂತ ತಪ್ಪಿಹೋಗಿದೆ ಎನ್ನಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೇಕಾದ ತಯಾರಿಗಳನ್ನು ನಡೆಸುತ್ತಿದ್ದ ವೇಳೆ ಈವೆಂಟ್‌ ಸೈಟ್‌ ನಲ್ಲಿ ಸ್ಫೋಟ ಸಂಭವಿಸಿದ್ದು, ಈ ವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಸದ್ಯ ರಕ್ಷಾಣ ತಂಡಗಳು, ಬಾಂಬ್‌ ನಿಷ್ಕ್ರೀಯ ದಳದ ತಂಡಗಳು ಸ್ಥಳದಲ್ಲಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Shahjahanpur Truck bus accident: ದಟ್ಟ ಮಂಜಿನಿಂದಾಗಿ ಟ್ರಕ್‌-ಬಸ್ ಢಿಕ್ಕಿ: 18 ಮಂದಿಗೆ ಗಾಯ

ದಟ್ಟ ಮಂಜಿನಿಂದಾಗಿ ಟ್ರಕ್‌-ಬಸ್ ಢಿಕ್ಕಿ: 18 ಮಂದಿಗೆ ಗಾಯ

ಶಹಜಹಾನ್‌ಪುರ: ರಸ್ತೆಯಲ್ಲ ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಕಾರಣ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕರು ಹಾಗೂ ಬಸ್‌ ನ ಪ್ರಯಾಣಿಕರು ಸೇರಿ 18 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್‌ ಪುರದಲ್ಲಿ ನಡೆದಿದೆ.

ಇದನ್ನೂ ಓದಿ : Mudubidire murder: ಮೂಡುಬಿದಿರೆ: ಟಿಪ್ಪರ್‌ ಚಲಾಯಿಸಿ ವ್ಯಕ್ತಿಯ ಕೊಲೆ

ಇದನ್ನೂ ಓದಿ : Three from Mangalore died: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಮಂಗಳೂರು ಮೂಲದ ಮೂವರು ಸಾವು

Blast in showstar event: Blast in showstar event site: A disaster if missed

Comments are closed.