ಸ್ಯಾಂಡಲ್ ವುಡ್ ನಲ್ಲಿ ಸದ್ದು‌ ಮಾಡಿದ ಬ್ಯಾಚುಲರ್ ಪಾರ್ಟಿ….! ಇದು ನಿಧಿಮಾ ಸ್ಪೆಶಲ್…!!

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಚಿತ್ರ ಲವ್ ಮಾಕ್ಟೆಲ್. ವಿಭಿನ್ನ ಕಥಾಹಂದರ ಹಾಗೂ ಹೊಸಬಗೆಯ ನಿರೂಪಣೆಯಿಂದ ಗೆದ್ದ ಈ ಚಿತ್ರದ ಜೋಡಿ ಮಿಲನಾ‌ ನಾಗರಾಜ್‌ ಹಾಗೂ ಡಾರ್ಲಿಂಗ್ ಕೃಷ್ಣಚಿತ್ರದ ಯಶಸ್ಸಿನ ಜೊತೆ ತಮ್ಮ ಪ್ರೀತಿಯನ್ನು ಹಂಚಿಕೊಂಡು ಕನ್ನಡಿಗರ ಮನಸ್ಸು ಗೆದ್ದಿದ್ದರು.

ಇಷ್ಟೊತ್ತಿಗಾಗಲೇ ಹೊಸ ಬದುಕಿಗೆ ಕಾಲಿಡಬೇಕಿದ್ದ ಈ ಜೋಡಿ ಕೊರೋನಾ ಹಿನ್ನೆಲೆಯಲ್ಲಿ ಮದುವೆಯನ್ನು ಹೊಸ ವರ್ಷಕ್ಕೆ ಮುಂದೂಡಿತ್ತು. ಚಿತ್ರದಷ್ಟೇ ವಿಭಿನ್ನವಾಗಿ ಮದುವೆಯ ದಿನಾಂಕ‌ ಅನೌನ್ಸ್ ಮಾಡಿದ್ದ ಈ ಜೋಡಿ 2021 ರ ಪ್ರೇಮಿಗಳ ದಿನಾಚರಣೆ ಅಂದ್ರೇ ಫೆ.೧೪ ರಂದೇ ಹೊಸ ಬದುಕಿಗೆ ಕಾಲಿಡೋದಾಗಿ ಹೇಳಿತ್ತು.

ಇಷ್ಟೊತ್ತಿಗಾಗಲೇ ಹೊಸ ಬದುಕಿಗೆ ಕಾಲಿಡಬೇಕಿದ್ದ ಈ ಜೋಡಿ ಕೊರೋನಾ ಹಿನ್ನೆಲೆಯಲ್ಲಿ ಮದುವೆಯನ್ನು ಹೊಸ ವರ್ಷಕ್ಕೆ ಮುಂದೂಡಿತ್ತು. ಚಿತ್ರದಷ್ಟೇ ವಿಭಿನ್ನವಾಗಿ ಮದುವೆಯ ದಿನಾಂಕ‌ ಅನೌನ್ಸ್ ಮಾಡಿದ್ದ ಈ ಜೋಡಿ 2021 ರ ಪ್ರೇಮಿಗಳ ದಿನಾಚರಣೆ ಅಂದ್ರೇ ಫೆ.14 ರಂದೇ ಹೊಸ ಬದುಕಿಗೆ ಕಾಲಿಡೋದಾಗಿ ಹೇಳಿತ್ತು.

ಸದ್ಯ ಕಂಚಿಯಲ್ಲಿ ಮದುವೆ ಶಾಪಿಂಗ್ ಮುಗಿಸಿರೋ ಈ ಜೋಡಿ ಮದುವೆಯ ಸಿದ್ಧತೆಯಲ್ಲಿದೆ.`

ಈ‌ ಮಧ್ಯೆ ನಿಧಿಮಾ ಖ್ಯಾತಿಯ ಮಿಲನಾ ನಾಗರಾಜ್ ತನ್ನ ಸ್ನೇಹಿತೆಯರಿಗೆ ಬ್ಯಾಚುಲರ್ ಪಾರ್ಟಿ ಕೊಟ್ಟಿದ್ದು ರೆಸಾರ್ಟ್ ಒಂದರಲ್ಲಿ ಅದ್ದೂರಿ ಯಾಗಿ ನಡೆದ ಈ ಬ್ಯಾಚುಲರ್ ಪಾರ್ಟಿ ಪೋಟೋಸ್ ಗಳನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹಂಚಿಕೊಂಡಿದ್ದಾರೆ.

ಪ್ಲವರ್ ಡೆಕೋರೇಶನ್ , ಸುಂದರ ಕೇಕ್ ಸೇರಿದಂತೆ ಹಲವು ಸ್ಪೆಷಲ್ ವಸ್ತುಗಳ ಜೊತೆ ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ ನಡೆದಿದ್ದು ಮಿಲನಾ ಹಾಗೂ ಅವರ ಸ್ನೇಹಿತರು ಸಖತ್ ಎಂಜಾಯ್ ಮಾಡಿದ್ದಾರೆ.

ಸಧ್ಯ ಫೆ.14 ಕ್ಕೆ ಮದುವೆ ನಡೆಯಲಿದೆ ಎಂದಿರುವ ಈ ಜೋಡಿ ಮದುವೆ ಎಲ್ಲಿ ನಡೆಯುತ್ತೇ ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೇ ಈಗ ಬ್ಯಾಚುಲರ್ ಪಾರ್ಟಿ ಅದ್ದೂರಿತನ ನೋಡಿದ ಅಭಿಮಾನಿಗಳು ಮದುವೆ ಇನ್ನೆಷ್ಟೂ ಅದ್ದೂರಿಯಾಗಿ ನಡೆಯಬಹುದು ಅಂತ ಖುಷಿಯಾಗಿದ್ದಾರೆ‌.

ಕಳೆದ‌ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಲವ್ ಮಾಕ್ಟೆಲ್ ಚಿತ್ರದ ಯಶಸ್ಸಿನ ಬಳಿಕ ತಮ್ಮ ಲವ್ ಸ್ಟೋರಿ ಹಂಚಿಕೊಂಡಿತ್ತು.

ಸಧ್ಯ ಮಿಲನಾ ನಾಗರಾಜ್, ದಿಯಾ ಚಿತ್ರದ ನಾಯಕ ಪ್ರಥ್ವಿ ಅಂಬಾರ್ ಜೊತೆ ಫಾರ್ ರಜಿಸ್ಟ್ರೇಶನ್ ಹಾಗೂ ಚತುಷ್ಪಥ ಚಿತ್ರದಲ್ಲಿ ನಟಿಸುತ್ತಿ ದ್ದು, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೆಲ್-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಮತ್ತೊಂದು ಅದ್ದೂರಿ ವಿವಾಹಕ್ಕೆ ಸ್ಯಾಂಡಲ್ ವುಡ್ ಸಾಕ್ಷಿಯಾಗಲಿದ್ದು ಮತ್ತೊಂದು ತಾರಾ ಜೋಡಿ ಹಸಮಣೆ ಏರಲಿದೆ.

Comments are closed.