ನಟ ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ

ಸಾಹಸ ಸಿಂಹನ ಅಸಂಖ್ಯಾತ ಅಭಿಮಾನಿಗಳ ಆಸೆ ಈಡೇರುವ ಸಮಯ ಹತ್ತಿರ ಬಂದಿದೆ. ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ (Dr. Vishnuvardhan Memorial) ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 29ರಂದು ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 11 ಕೋಟಿ ವೆಚ್ಚದಲ್ಲಿ ಸುಂದರವಾದ ಸ್ಮಾರಕ ನಿರ್ಮಾಣವಾಗಿದೆ.

ಸುಮಾರು ಎರಡು ಮುಕ್ಕಾಲು ಎಕರೆ ಜಾಗದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ತಲೆ ಎತ್ತಿದೆ. ಈ ಸ್ಮಾರಕದಲ್ಲಿ ನಟ ವಿಷ್ಣುವರ್ಧನ್‌ಗೆ ಸಂಬಂಧಿಸಿದ ಫೋಟೊ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಹೀಗೆ ಹತ್ತು ಹಲವು ವಿಶೇಷಗಳನ್ನು ಒಳಗೊಂಡಿದೆ. ಈಗಾಗಲೇ ಸ್ಮಾರಕ ನಿರ್ಮಾಣದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ತಿಂಗಳೇ ಸ್ಮಾರಕ ಲೋಕಾರ್ಪಣೆ ಆಗಬೇಕಿತ್ತು. ವಿಷ್ಣು ಪುಣ್ಯಸ್ಮರಣೆ ದಿನ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಇದನ್ನೂ ಓದಿ : ಜೂ. ಎನ್‌ಟಿಆರ್‌ ಜೊತೆ ನಟಿಸುವುದನ್ನು ದುನಿಯಾ ವಿಜಯ್‌ ಮಿಸ್‌ ಮಾಡಿಕೊಂಡಿದ್ದೇಕೆ ?

ಇದನ್ನೂ ಓದಿ : ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

ಇದನ್ನೂ ಓದಿ : ಸಂಕ್ರಾಂತಿ ಪ್ರಯುಕ್ತ ಕನ್ನಡ ಸಿನಿಮಾಗಳಿಗೆ ಇಲ್ಲ ಥಿಯೇಟರ್‌ ಭಾಗ್ಯ

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ಆದರೆ ಕಾರಣಾಂತರಗಳಿಂದ ತಡವಾಗಿದೆ. ಅಂತು ಇಂತೂ ಸರಕಾರ ವಿಷ್ಣವರ್ಧನ್ ಸ್ಮಾರಕ ಉದ್ಘಾಟನೆಗೆ ಸಿದ್ಧತೆ ನಡೆಸಿದೆ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆ ಆಗಿದೆ. ಆದರೆ ದಾದಾ ಕುಟುಂಬಸ್ಥರ ಆಸೆಯಂತೆ ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ಸ್ಮಾರಕ ರೂಪ ತಳೆದಿದೆ. ನಟ ವಿಷ್ಣುವರ್ಧನ್‌ ಅಭಿಮಾನಿಗಳ ಬಹುದಿನದ ಕೊರಗೂ ಇದೀಗ ಈಡೇರಿದೆ.

ಇದನ್ನೂ ಓದಿ : 10 ಮಿಲಿಯನ್ ವೀವ್ಸ್ ಸಿಗದೆ ಅಜನೀಶ್ ಲೋಕನಾಥ್‌ಗೆ ಬಿಡುಗಡೆ ಭಾಗ್ಯವಿಲ್ಲ ಎಂದ “ಹಾಸ್ಟೆಲ್ ಹುಡುಗರು”

The time has finally arrived for the dedication of the Actor Dr. Vishnuvardhan Memorial

Comments are closed.