Tiger Nageshwar Rao Movie : ಟೈಗರ್ ನಾಗೇಶ್ವರ್ ರಾವ್ ಟೀಸರ್ ರಿಲೀಸ್ : ಮಾಸ್ ಅವತಾರದಲ್ಲಿ ದರ್ಶನ ಕೊಟ್ಟ ರವಿತೇಜ

ತೆಲುಗಿನ ಮಾಸ್ ಮಹಾರಾಜ ರವಿತೇಜ ನಟನೆಯ ಬಹುನಿರೀಕ್ಷಿತ ಟೈಗರ್ ನಾಗೇಶ್ವರ್ ರಾವ್ ಸಿನಿಮಾದ (Tiger Nageshwar Rao Movie) ಟೀಸರ್ ರಿಲೀಸ್ ಆಗಿದೆ. ಟೈಗರ್ ಇನ್ವೆಷನ್ ಎಂಬ ಟೈಟಲ್ ನಡಿ ಅನಾವರಣಗೊಂಡಿರುವ ಝಲಕ್ ನಲ್ಲಿ, ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ ಕಳ್ಳನಿಗಾಗಿ ಹುಡುಗಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ತೆರೆದುಕೊಳ್ಳುತ್ತದೆ.

ಮುರಳಿ ಶರ್ಮಾ ಹಾಗೂ ಅನುಪಮ್ ಖೇರ್ ಗುಪ್ತಚಾರ ಇಲಾಖೆಯ ಅಧಿಕಾರಿಗಳಾಗಿ ನಟಿಸಿದ್ದಾರೆ. ನಾಗೇಶ್ವರ್ ರಾವ್ ಕುಖ್ಯಾತ ಕಳ್ಳ ಯಾಕೆ ಆಗ್ತಾನೆ ಅನ್ನೋದನ್ನು ಮುರಳಿ ಶರ್ಮಾ ವಿವರಿಸ್ತಾರೆ. ಸಖತ್ ಮಾಸ್ ಅವತಾರದಲ್ಲಿ ರವಿತೇಜ ದರ್ಶನ ಕೊಟ್ಟಿದ್ದಾರೆ. ಹಿಂದಿನ ಸಿನಿಮಾಗಳಿಂತ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಸಿನಿಮಾಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಇದನ್ನೂ ಓದಿ : Supplier Shankara movie : ಸಪ್ಲೈಯರ್ ಶಂಕರ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಇದನ್ನೂ ಓದಿ : Kirik Kirti : ಅಧಿಕೃತವಾಗಿ ವಿಚ್ಛೇದನ ಘೋಷಿಸಿದ ನಟ, ನಿರೂಪಕ ಕಿರಿಕ್‌ ಕೀರ್ತಿ

ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲಾಗ್ತಿದೆ.

Tiger Nageshwar Rao Movie : Tiger Nageshwar Rao Teaser Release : Ravi Teja seen in Mass Avatar

Comments are closed.