ನಟ ಧನುಷ್‌ಗೆ ಮೂವರು ಹೀರೋಯಿನ್..! 44ನೇ ಸಿನಿಮಾದ ಟೈಟಲ್‌ ಏನು ಗೊತ್ತಾ

  • ಸುಶ್ಮಿತಾ ಸುಬ್ರಹ್ಮಣ್ಯ

ಧನುಷ್ ಎಂಥಹಾ ಪ್ರತಿಭಾನ್ವಿತ ನಟ ಎಂಬುದು ಎಲ್ಲರಿಗೂ ಗೊತ್ತೇ ಇದೆ. “ಕರ್ಣನ್”, “ಅಸುರನ್” ನಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಟ್ಟಿರುವ ಧನುಷ್ ಇದೀಗ ತಮ್ಮ ಅಭಿಮಾನಿ ಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಕೊಡೋದಕ್ಕೆ ರೆಡಿಯಾಗಿದ್ದಾರೆ.

ಟಾಲಿವುಡ್‌ನಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಧನುಷ್ ತಮ್ಮ ಸಿನಿಮಾದ ಮೂಲಕ ಒಂದಿಲ್ಲೊಂದು ಮೆಸೆಜ್‌ನ್ನು ಜನರಿಗೆ ತಲುಪಿಸೋ ಕಾರ್ಯವನ್ನು ಮಾಡುತ್ತಿದ್ದಾರೆ. ಭರ್ಜರಿ ಮನರಂಜನೆಯನ್ನು ಒದಗಿಸುವ ಧನುಷ್‌ ಸಿನಿಮಾ ಅಂದ್ರೆ ಸಾಕು ಒಂತರಾ ಕಾತರ. ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಧನುಷ್‌ ಸಿನಿಮಾದ ಡೇಟ್ಸ್‌ಗಳು ರಿವೀಲ್‌ ಆಗ್ತಿದೆ.

ಧನುಷ್ ತನ್ನ ಅಭಿನಯದ 44ನೇ ಚಿತ್ರದಲ್ಲಿ ಮೂವರು ಹೀರೋಯಿನ್ ಗಳು ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಧನುಷ್‌ ಮುಂದಿನ ಚಿತ್ರಕ್ಕೆ ಡಿ44 ಎಂದು ಕರೆಯಾಗುತ್ತಿದೆ. ಆಗಸ್ಟ್ 5 ರಂದು ಚಿತ್ರದ ಶೀರ್ಷಿಕೆ ಘೋಷಣೆ ಆಗಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಧನುಷ್‌ ಮುಂದಿನ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಇಂದು ಸಂಜೆ 6 ಗಂಟೆಗೆ ಟೈಟಲ್ ಲಾಂಚ್ ಮಾಡಲಾಗುವುದು ಎಂದು ಸನ್ ಪಿಕ್ಚರ್ಸ್ ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ನೀಡಿದೆ. ಪ್ರಕಾಶ್ ರೈ ಮತ್ತು ಭಾರತಿರಾಜ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಖ್ಯಾತ ನಿರ್ದೇಶಕ ಮಿತ್ರನ್ ಜವಹಾರ್ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಆಗಸ್ಟ್ 6 ರಂದು ಮುಹೂರ್ತ ನೆರವೇರಲಿದ್ದು, ಇದೇ ತಿಂಗಳಲ್ಲಿ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ. ಸದ್ಯ ಮಾರನ್ ಸಿನಿಮಾ ಚಿತ್ರೀಕರಣದಲ್ಲಿ ಧನುಷ್ ಬ್ಯುಸಿ ಆಗಿದ್ದಾರೆ.

Comments are closed.