Jhanvikapoor:ಇಟಲಿಯಲ್ಲಿ ಬ್ಯಾಚುಲರ್ ಪಾರ್ಟಿ….! ತಿರುಪತಿಯಲ್ಲಿ ಮದುವೆ….! ಬಾಲಿವುಡ್ ನಟಿಯ ಅದ್ದೂರಿ ಮದುವೆ ಪ್ಲ್ಯಾನ್…!!

ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಬಳಿಕ ಪುತ್ರಿ ಜಾಹ್ನವಿ ಕಪೂರ್ ಹಿಂದಿಚಿತ್ರರಂಗದಲ್ಲಿ ಕೆರಿಯರ್ ಆರಂಭಿಸಿದ್ದಾರೆ. ಸೌಂದರ್ಯದಲ್ಲಿ ತಾಯಿ ಪ್ರತಿರೂಪದಂತಿರೋ 24 ವರ್ಷದ ಜಾಹ್ನವಿ ಕಪೂರ್  ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಮ್ಮ ಮದುವೆ ಹೇಗಿರಬೇಕೆಂಬ ಪ್ಲ್ಯಾನ್ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಜಾಹ್ನವಿ ಕಪೂರ್ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದರೂ ಪರ್ಸನಲ್ ಲೈಫ್ ಬಗ್ಗೆ ಸಾಕಷ್ಟು ಕನಸು ಕಂಡಿರೋ ಜಾಹ್ನವಿ ಮದುವೆ ಹೇಗಿರಬೇಕೆಂಬ ಪ್ಲ್ಯಾನ್ ಮಾಡಿದ್ದಾರಂತೆ.

ಇಟಲಿಯ ಐಲ್ಯಾಂಡ್ ವೊಂದರಲ್ಲಿ ಅದ್ದೂರಿ ಬ್ಯಾಚುಲರ್ ಪಾರ್ಟಿ ಮಾಡೋ ಜಾಹ್ನವಿ ಬಳಿಕ ಚೈನೈನ ತಮ್ಮ ಹಿರಿಯರ ಮನೆಯಲ್ಲಿ ಹಳದಿ ಶಾಸ್ತ್ರ ಮಾಡಿಕೊಳ್ಳುತ್ತಾರಂತೆ. ಬಳಿಕ ತಾಯಿಯ ಆರಾಧ್ಯದೈವ ತಿರುಪತಿಯ ತಿಮ್ಮಪ್ಪನ ಸನ್ನಿಧಾನದಲ್ಲಿ ಸರಳವಾಗಿ ಮದುವೆಯಾಗುತ್ತಾರಂತೆ.

ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿಕಪೂರ್ ತಮ್ಮ ಮದುವೆ ಪ್ಲ್ಯಾನ್ ಹಂಚಿಕೊಂಡಿದ್ದಾರೆ. ಜಾಹ್ನವಿ ತಾಯಿ ನಟಿ ಶ್ರೀದೇವಿ ತಿರುಪತಿ ತಿಮ್ಮಪ್ಪನ ಭಕ್ತೆಯಾಗಿದ್ದು, ತಾಯಿ ನಿಧನದ ಬಳಿಕವೂ ಹಲವು ಭಾರಿ ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿದ್ದಾರೆ.

ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ಜಾಹ್ನವಿಕಪೂರ್ ಸದ್ಯ, ದೋಸ್ತಾನಾ-2, ಗುಡ್ ಲಕ್ ಜೆರ್ರಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮದುವೆ ಹೇಗೆ ಆಗ್ತೇನೆ ಅನ್ನೋದನ್ನು ಹಂಚಿಕೊಂಡ ಜಾಹ್ನವಿ ಯಾರನ್ನು ಮತ್ತೆ ಯಾವಾಗ ಮದುವೆಯಾಗ್ತೇನೆ ಎನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

Comments are closed.