ಸೋಮವಾರ, ಏಪ್ರಿಲ್ 28, 2025
HomeCinemaಜೇಬು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ನಟಿಯ ಬಂಧನ

ಜೇಬು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ನಟಿಯ ಬಂಧನ

- Advertisement -

ಕೋಲ್ಕತ್ತಾ : ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳ 2022ದಲ್ಲಿ ಪಿಕ್ ಪಾಕೇಟಿಂಗ್ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ನಟಿ ರೂಪಾ ದತ್ತಾ (Rupa Dutta) ಪೊಲೀಸರು ಬಂಧಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಬೆಂಗಾಲಿ ಟಿವಿ ನಟಿ ರೂಪಾ ದತ್ತಾರನ್ನು (Rupa Dutta) ವಿಚಾರಣೆಗೆ ಒಳಪಡಿಸುವ ಪೊಲೀಸರು ನಟಿಯಿಂದ 75,000 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಕೋಲ್ಕತ್ತಾದ ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕರಾ ಪುಸ್ತಕ ಮೇಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮಹಿಳೆಯೊಬ್ಬರು ಡಸ್ಟ್‌ಬಿನ್‌ಗೆ ಚೀಲವನ್ನು ಎಸೆದಿರುವುದನ್ನು ಗಮನಿಸಿದ್ದಾರೆ. ನಂತರ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಆಕೆಯ ಬ್ಯಾಗ್‌ನಲ್ಲಿ ಹಣವು ಲಭ್ಯವಾಗಿದೆ. ಇದೇ ಕಾರಣಕ್ಕೆ ನಟಿಯನ್ನು ಪಿಕ್‌ ಪಾಕೆಟಿಂಗ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ನಟಿಯಿಂದ ಸುಮಾರು 75,000 ರೂಪಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಇದೀಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್‌ ವಿರುದ್ದ ಇದೇ ನಟಿ ರೂಪಾ ದತ್ತ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು.

2020 ರಲ್ಲಿ ನಟಿ ರೂಪಾ ದತ್ತಾ ಫೇಸ್‌ಬುಕ್‌ನಲ್ಲಿ ಅನುಚಿತ ಸಂದೇಶಗಳನ್ನು ಕಳುಹಿಸಿದ ಕಾರಣಕ್ಕೆ ನಿರ್ದೇಶಕ ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನು ತಪ್ಪಾಗಿ ಆರೋಪಿಸಿದರು. ರೂಪಾ ಅನುರಾಗ್ ಹೆಸರಿನ ಮೊದಲ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು ಎಂದು ತಿಳಿದುಬಂದಿದೆ. ಟ್ವೀಟ್‌ನಲ್ಲಿ ರೂಪಾ ತಮ್ಮ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ರೂಪಾ ಅವರ ಟ್ವಿಟರ್ ಬಯೋ ಪ್ರಕಾರ ಅವರು ಜೈ ಮಾ ವೈಷ್ಣೋದೇವಿಯಂತಹ ಟಿವಿ ಶೋಗಳ ಭಾಗವಾಗಿದ್ದಾರೆ.

ಇದನ್ನೂ ಓದಿ : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : ಜೇಮ್ಸ್ ಜೊತೆಗೆ ತೆರೆಗೆ ಬರ್ತಾನೆ ಭೈರಾಗಿ : ಶಿವಕುಮಾರ್‌, ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ

(Top Actress Rupa Dutta arrested for alleged pick pocketing at Book Fair 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular