China lockdown : ಚೀನಾದಲ್ಲಿ ಕೊರೊನಾ ಆರ್ಭಟ : ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್‌

ಬೀಜಿಂಗ್‌ : ಕೋವಿಡ್‌ ವೈರಸ್‌ ಸೋಂಕನ್ನು ವಿಶ್ವಕ್ಕೆ ನೀಡಿದ್ದ ಚೀನಾದಲ್ಲೀಗ ಮತ್ತೆ ಕೊರೊನಾ ವೈರಸ್‌ ಆರ್ಭಟ ಹೆಚ್ಚಾಗಿದೆ. ಅದ್ರಲ್ಲೂ ಚೀನಾದ ದೊಡ್ಡ ದೊಡ್ಡ ನಗರಗಳಲ್ಲಿಯೇ ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ನಗರವಾದ ಶೆನ್‌ಜೆನ್‌ನ 17.5 ಮಿಲಿಯನ್ ನಿವಾಸಿಗಳನ್ನು ಮನೆಯೊಳಗೆ ಬಂಧಿಯಾಗಿಸಿದೆ. ಹೆಚ್ಚುತ್ತಿರುವ ಕೋವಿಡ್‌ -19 ಸೋಂಕನ್ನು ನಿಯಂತ್ರಿಸುವ ಸಲುವಾಗಿ ‌ಚೀನಾದಲ್ಲಿ ಮತ್ತೆ ಲಾಕ್‌ಡೌನ್‌ (China lockdown) ಘೋಷಿಸಿದೆ.

ಚೀನಾದಾದ್ಯಂತ ಕೊರೊನಾ ಪ್ರಕರಣಗಳು ಸುಮಾರು 3,400 ಕ್ಕೆ ದ್ವಿಗುಣಗೊಂಡ ನಂತರ ಲಾಕ್‌ಡೌನ್ (lockdown), ಚೀನಾ ಸರಕಾರ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜನರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಶೆನ್‌ಜೆನ್‌ ನ ಪ್ರಮುಖ ವ್ಯಾಪಾರ ಕೇಂದ್ರಗಳನ್ನು ಕೂಡ ಬಂದ್‌ ಮಾಡಲಾಗಿದೆ. ಜೊತೆಗೆ ಸಾರ್ವಜನಿಕ ಸಂಪರ್ಕ ಸೇವೆಗಳಾದ ಬಸ್ ಹಾಗೂ ಸುರಂಗ ಮಾರ್ಗಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಸಂಪೂರ್ಣವಾಗಿ ಬಂದ್‌ ಆಗಿವೆ.

ಇನ್ನು ಸರಕಾರಿ ಹಾಗೂ ಖಾಸಗಿ ಕಂಪೆನಿಗಳ ನೌಕರರಿಗೆ ವರ್ಕ್‌ ಫ್ರಂ ಹೋಂನಲ್ಲಿಯೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ದೈತ್ಯ ಹುವಾವೇ ಟೆಕ್ನಾಲಜೀಸ್ ಕಂ ಮತ್ತು ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಚೀನಾದ ಅತ್ಯಂತ ಜನನಿಬಿಡ ಬಂದರುಗಳಲ್ಲಿ ಒಂದಾದ ಶೆನ್‌ಜೆನ್ ಮನೆಯಿಂದ ನಿವಾಸಿಗಳು ಹೊರಡುವುದನ್ನು ನಿರ್ಬಂಧಿಸಲಾಗಿದೆ. ನಗರದಲ್ಲಿನ ಸೋಂಕುಗಳ ಉಲ್ಬಣದಿಂದಾಗಿ ಹಾಂಗ್ ಕಾಂಗ್‌ನಲ್ಲಿ 3,00,000 ಜನರು ಪ್ರಸ್ತುತ ಹೋಮ್‌ ಕ್ವಾರಂಟೈನ್‌ ಹಾಗೂ ಐಸೋಲೇಷನ್‌ಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ : ಚೀನಾಕ್ಕೆ ಕೊರೊನಾ ಶಾಕ್‌ : ಮನೆಯಿಂದ ಹೊರಬಂದ್ರೆ ಕ್ರಿಮಿನಲ್‌ ಕೇಸ್‌

ಇನ್ನು ಶಾಂಘೈನಲ್ಲಿ ಕೋವಿಡ್ -19 ಉಲ್ಬಣವು ಹೆಚ್ಚಳದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಆನ್‌ ಲೈನ್‌ ಕಲಿಕೆಗೆ ಸೂಚನೆಯನ್ನು ನೀಡಲಾಗಿದೆ. ಜೊತೆಗೆ ನಗರ ಪ್ರದೇಶಕ್ಕೆ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಬಸ್‌ ಸೇರಿದಂತೆ ಸಾರ್ವಜನಿಕ ಸೇವೆ ಬಂದ್‌ ಆಗಿದ್ದು, ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸುವ ಕುರಿತು ಈಗಾಗಲೇ ಸರಕಾರ ವಿಮಾನಯಾನ ಸಂಸ್ಥೆಗಳ ಜೊತೆಗೆ ಚರ್ಚೆ ನಡೆಸುತ್ತಿದೆ ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ಚೀನಾದ ದೊಡ್ಡ ನಗರಗಳಲ್ಲಿ ಲಾಕ್‌ಡೌನ್‌ (lockdown) ಹೇರಿಕೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗಿದೆ. ಓಮಿಕ್ರಾನ್‌ ತೀವ್ರವಾಗಿ ಹರಡದಂತೆ ಎಚ್ಚರಿಕೆ ವಹಿಸುವ ಸಲುವಾಗಿಯೇ ಹಲವು ಕಾರ್ಯತಂತ್ರಗಳನ್ನು ಚೀನಾ ಕೈಗೊಂಡಿದೆ. ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಜನವರಿಯಲ್ಲಿ ಟಿಯಾಂಜಿನ್‌ನಲ್ಲಿ ಬಹು ಸುತ್ತಿನ ಸಾಮೂಹಿಕ ಪರೀಕ್ಷೆಗಳು ಟೊಯೊಟಾ ಮೋಟಾರ್ ಕಾರ್ಪೊರೇಷನ್ ಸ್ಥಾವರ ಮತ್ತು ಇತರ ಕಾರ್ಖಾನೆಗಳಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಿದವು.

ಚೀನಾದ ಈಶಾನ್ಯದಲ್ಲಿ ಸುಮಾರು 9 ಮಿಲಿಯನ್ ಜನರಿರುವ ಚಾಂಗ್‌ಚುನ್ ನಗರವನ್ನು ಶುಕ್ರವಾರ ಲಾಕ್‌ಡೌನ್ (China lockdown) ಮಾಡಲಾಗಿದೆ, ಅಲ್ಲಿನ ನಿವಾಸಿಗಳನ್ನು ಸಹ ಸಾಮೂಹಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ವುಹಾನ್‌ನಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌ ಸೋಂಕಿನ ರೀತಿಯಲ್ಲಿಯೇ ಇದೀಗ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಿಂಗ್‌ಡಾವೋ ನಗರದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.

ಇದನ್ನೂ ಓದಿ : China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(China Lockdown again after Covid-19 cases rises in country)

Comments are closed.