Karnataka AAP : ನೀರು, ವಿದ್ಯುತ್, ಶಿಕ್ಷಣ ಉಚಿತ : ಕರ್ನಾಟಕದಲ್ಲಿ ಆಧಿಕಾರಕ್ಕೇರಲು ಆಪ್ ಪ್ರಣಾಳಿಕೆ

ಬೆಂಗಳೂರು : ಈಗಾಗಲೇ ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿರೋ ಕರ್ನಾಟಕಕ್ಕೆ ಮತ್ತೊಂದು ಪಕ್ಷ ಎಂಟ್ರಿ ಕೊಡೋದು ಬಹುತೇಕ ಫಿಕ್ಸ್‌ ಎನ್ನಲಾಗಿದ್ದು, ದೆಹಲಿ, ಪಂಜಾಬ್ ಬಳಿಕ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯೋಕೆ ಆಪ್ ಪಕ್ಷ ( Karnataka AAP). ಮಾಸ್ಟರ್ ಪ್ಲ್ಯಾನ್ ಮಾಡಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿಯೋ ಸಿದ್ಧತೆಯಲ್ಲಿರೋ ಆಪ್ ಅದಕ್ಕಾಗಿ ಈಗಲೇ ಸಿಎಂ ಅಭ್ಯರ್ಥಿಯನ್ನು ಫೈನಲ್ ಮಾಡಿದೆಯಂತೆ.

ರಾಜಕೀಯ ಅನ್ನೋದು ಯಾವಾಗ ಹೇಗೆ ಬದಲಾಗುತ್ತೇ ಅನ್ನೋದನ್ನು ಹೇಳೋದೇ ಕಷ್ಟ. ಬೆರಳಣಿಕೆಯಷ್ಟು ವರ್ಷಗಳ ಹಿಂದೆ ಆರಂಭವಾದ ಆಪ್ ಪಕ್ಷ ಈಗ ಎರಡು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಈಗ ಈ ಪಕ್ಷದ ಮುಂದಿನ ಗುರಿ ಕರ್ನಾಟಕದಲ್ಲಿ ಅಧಿಕಾರ ಸ್ಥಾಪನೆ ಎನ್ನಲಾಗ್ತಿದ್ದು ಇದಕ್ಕಾಗಿ ಆಪ್ ಪಕ್ಷ ತಳಮಟ್ಟದಿಂದ ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಹೀಗಿರುವಾಗಲೇ ಆಪ್ ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿದ್ದು ಅಧಿಕಾರ ಹಿಡಿಯೋ ಕಸರತ್ತು ನಡೆಸಿದೆ.

ಕಳೆದ ಸಪ್ಟೆಂಬರ್ ನಿಂದಲೇ ರಾಜ್ಯದಲ್ಲಿ ಸರ್ವೇ ಮೂಲಕ ಜನರ ನಾಡಿಮಿಡಿತ ಅರಿಯುವ ಕೆಲಸ ಮಾಡ್ತಿರೋ ಆಪ್ ಜನರ ನೀರಿಕ್ಷೆ ಗೆ ತಕ್ಕಂತೆ ಪ್ರಣಾಳಿಕೆ ರೂಪಿಸಿಕೊಂಡು ಚುನಾವಣೆಯ ರಣಾಂಗಣಕ್ಕೆ ಧುಮುಕಲು ಸಜ್ಜಾಗಿದೆ. ಈಗಾಗಲೇ ಆಪ್ ಪಕ್ಷ ಕರ್ನಾಟಕಕ್ಕೆ ಲಿಂಗಾಯತ್ ಹಿರಿಯ ನಾಯಕರೊಬ್ಬರನ್ನು ಸಿಎಂ ಕ್ಯಾಂಡಿಡೇಟ್ ಎಂದು ಫೈನಲ್ ಮಾಡಿದ್ದು, ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ರಣತಂತ್ರ ಸಿದ್ಧಮಾಡಿದೆ.

ಚುನಾವಣೆಗಾಗಿ ಜನರನ್ನು ಹತ್ತಿರದಿಂದ ತಲುಪುವಂತ ಪ್ರಣಾಳಿಕೆಯನ್ನು ಅಪ್ ಸಿದ್ಧಪಡಿಸಿದೆ. ದೆಹಲಿ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಆಪ್ ಘೋಷಿಸಲಿದೆ ಎನ್ನಲಾಗ್ತಿದೆ. ಆಪ್ ಕರ್ನಾಟಕದಲ್ಲಿ ರೂಪಿಸಿದ ಪ್ರಣಾಳಿಕೆಯಲ್ಲಿ ಏನಿದೆ ಅನ್ನೋದನ್ನು ನೋಡೋದಾದರೇ,ಪ್ರತಿ ಮನೆಗೆ ಅದರಲ್ಲೂ ಮಧ್ಯಮ ವರ್ಗದ ಮನೆಗಳಿಗೆ 300 ಯೂನಿಟ್ ವಿದ್ಯುತ್ ಫ್ರೀ. ಪ್ರತಿ ಕುಟುಂಬಕ್ಕೆ 20 ಸಾವಿರ ಲೀಟರ್ ನೀರನ್ನು ಉಚಿತವಾಗಿ ವಿತರಿಸಲು ಆಪ್ ನಿರ್ಧರಿಸಿದೆ ‌. ಬೆಂಗಳೂರಿನಂತಹ ಶಹರದಲ್ಲಿ ಜನರು ಪ್ರತಿ ತಿಂಗಳು 300-500 ರೂಪಾಯಿ ವಾಟರ್ ಬಿಲ್ ಪಾವತಿಸಬೇಕಾದ ಸ್ಥಿತಿ ಇದೆ.

ಎಲ್ಲಾ ಮಕ್ಕಳಿಗೆ ಫ್ರೀ ಹೈ ಟೆಕ್ ಶಿಕ್ಷಣ ನೀಡುವುದಾಗಿ ಆಪ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ .ಇನ್ನು ಆರೋಗ್ಯದ ವಿಚಾರಕ್ಕೆ ಬರೋದಾದರೇ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಸರ್ಜರಿ ಗಳನ್ನು ಮಾಡಿಸಿಕೊಳ್ಳಲು ಅವಕಾಶ ನೀಡೋದಾಗಿ ಆಪ್ ಭರವಸೆ ನೀಡಿದೆ. ಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಸ್ವಚ್ಛ ಸರ್ಕಾರಿ ಸೇವೆ ನೀಡುವುದಾಗಿ ಆಪ್ ಭರವಸೆ ನೀಡಿದೆ. ಇದಲ್ಲದೇ ಇನ್ನು ಹಲವು ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಜೊತೆ ಆಪ್ ಕರ್ನಾಟಕದ ಮತದಾರರ ಮನಗೆಲ್ಲಲು ಮುಂದಾಗಿದ್ದು ಮತದಾರರು ಹೊಸ ಪಕ್ಷವನ್ನು ಹೇಗೆ ಸ್ವಾಗತಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : 2023 ರ ಚುನಾವಣೆಗೆ ಕ್ಷೇತ್ರ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

( Water, electricity, education free in Karnataka AAP Party manifesto for Next Election)

Comments are closed.