Twist in Ramachari serial:ರಾಮಾಚಾರಿ ಮನೆಯಲ್ಲಿ ಪತ್ತೆಯಾಯ್ತು ಡ್ರಗ್ಸ್​ : ವರ್ಕೌಟ್​ ಆಗುತ್ತಾ ಚಾರು-ಮಾನ್ಯತಾ ಪ್ಲಾನ್​

Twist in Ramachari serial: ಈಗೀಗ ಪ್ರಸಾರವಾಗುತ್ತಿರುವ ಧಾರವಾಹಿಗಳಲ್ಲಿ ಮಹಿಳೆಯರನ್ನೇ ಅತ್ಯಂತ ಪ್ರಧಾನ ಪಾತ್ರದಲ್ಲಿ ತೋರಿಸುವುದು ಕಾಮನ್​ ಆಗಿ ಬಿಟ್ಟಿದೆ. ತವರು ಮನೆಯ ಕಷ್ಟ, ಗಂಡನ ಮನೆಯಲ್ಲಿ ಬರುವ ಅಪವಾದಗಳು, ಖಳನಾಯಕರ ಹುನ್ನಾರ ಹೀಗೆ ಎಲ್ಲಾ ಚಾಲೆಂಜ್​ಗಳನ್ನು ಮೀರಿ ಒಬ್ಬ ಹೆಣ್ಣು ಮಗಳು ಎದ್ದು ನಿಲ್ತಾಳೆ ಅನ್ನೋದೇ ಬಹುತೇಕ ಎಲ್ಲಾ ಸೀರಿಯಲ್​ಗಳ ಸಾರಾಂಶ ಆಗಿಬಿಟ್ಟಿದೆ. ಆದರೆ ಈ ಎಲ್ಲಾ ಧಾರವಾಹಿಗಳಿಗೆ ವಿರೋಧ ಎಂಬಂತೆ ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿಯಲ್ಲಿ ಪುರುಷ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಅಲ್ಲದೇ ಈ ಕತೆಯು ಜನರಿಗೂ ಸಹ ಇಷ್ಟವಾಗಿದೆ.


ಪ್ರೈಮ್​ ಟೈಮ್​ಗೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ಚಾರು ಹಾಗೂ ಆಕೆಯ ತಾಯಿ ಮಾನ್ಯತಾ ನೀಡುವ ಎಲ್ಲಾ ಕಾಟಗಳನ್ನು ರಾಮಾಚಾರಿ ಹೇಗೆ ಸಹಿಸಿಕೊಳ್ತಾನೆ ಅನ್ನೋದನ್ನ ಬಹಳ ಚಂದವಾಗಿ ತೋರಿಸಲಾಗುತ್ತಿದೆ. ಸದ್ಯ ಚಾರುವನ್ನು ಕಂಪನಿ ಸಿಇಓ ಮಾಡಬೇಕು ಅಂದರೆ ರಾಮಾಚಾರಿ ಕೈಯಿಂದ ಪರ್ಫಾಮೆನ್ಸ್​ ಸರ್ಟಿಫಿಕೇಟ್​ ತರಬೇಕೆಂದು ಚಾರು ತಂದೆ ಚಾಲೆಂಜ್​ ಮಾಡಿರುತ್ತಾರೆ. ಪರ್ಫಾಮೆನ್ಸ್​ ಸರ್ಟಿಫಿಕೇಟ್​ ತರಲು ಸಾಕಷ್ಟು ಅಡ್ಡದಾರಿಗಳನ್ನು ಹಿಡಿದ ಚಾರು ತನ್ನ ತಂದೆಯ ಎದುರೇ ತಲೆತಗ್ಗಿಸುವಂತೆ ಮಾಡುತ್ತಾನೆ ರಾಮಾಚಾರಿ.


ನ್ಯಾಯ, ನೀತಿ , ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಎಂಬಂತೆ ಇರುವ ರಾಮಾಚಾರಿ ನಿವಾಸದಲ್ಲಿ ಸಧ್ಯ ಹೊಸ ಸಂಕಷ್ಟವೊಂದು ನಿರ್ಮಾಣವಾಗಿತ್ತು. ರಾಮಚಾರಿ ಅತ್ತಿಗೆ ಅಪರ್ಣಾ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಯ ಖರ್ಚಿಗೆ 42 ಲಕ್ಷ ರೂಪಾಯಿಗಳನ್ನು ಹೊಂದಿಸುವ ಜವಾಬ್ದಾರಿ ರಾಮಾಚಾರಿ ಹೆಗಲೇರಿತ್ತು. ಇದೇ ಪರಿಸ್ಥಿತಿಯ ಲಾಭವನ್ನು ಪಡೆದು ಚಾರು ಹಾಗೂ ಆಕೆಯ ತಾಯಿ ಮಾನ್ಯತಾ ರಾಮಚಾರಿಯನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಸಿದ್ದಾರೆ.


ರಾಮಾಚಾರಿ ಬ್ಯಾಗ್​ನಲ್ಲಿ ತಾವೇ ಡ್ರಗ್ಸ್​ನ್ನಿಟ್ಟು ಜೊತೆಯಲ್ಲಿ ದಾಖಲೆಯಿಲ್ಲದೇ ರಾಮಾಚಾರಿಗೆ 32 ಲಕ್ಷ ರೂಪಾಯಿ ಸಾಲ ಸಿಗುವಂತೆ ಮಾಡಿದ್ದಾರೆ. ಬಳಿಕ ಮಾನ್ಯತಾ ಪೊಲೀಸರಿಗೆ ಕರೆ ಮಾಡಿ ನಾರಾಯಣ ಆಚಾರ್ಯರ ಮನೆಯಲ್ಲಿ ಡ್ರಗ್ಸ್​ ಇದೆ ಎಂದು ದೂರು ನೀಡಿದ್ದಾರೆ. ಮಾಹಿತಿ ಆಧರಿಸಿ ನಾರಾಯಣ ಆಚಾರ್ಯರ ಮನೆಗೆ ಬಂದ ಪೊಲೀಸರಿಗೆ ಡ್ರಗ್ಸ್​ ಕೂಡ ಸಿಕ್ಕಿದೆ. ತಮ್ಮ ಕುಟುಂಬದ ಮೇಲೆ ಬಂದಿರುವ ಈ ಅಪವಾದವನ್ನು ರಾಮಾಚಾರಿ ಹೇಗೆ ಮೆಟ್ಟಿ ನಿಲ್ಲುತ್ತಾನೆ? ಈತ ಹೇಗೆ ಮತ್ತೆ ಮಾನ್ಯತಾ ಹಾಗೂ ಚಾರು ಸೊಕ್ಕನ್ನು ಮುರಿಯುತ್ತಾನೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ.

ಇದನ್ನು ಓದಿ : Jothe Jotheyali Team : ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಅನೂಪ್​ ಭಂಡಾರಿಗೆ ಆಫರ್​​

ಇದನ್ನೂ ಓದಿ : Daali Dhananjay birthday announcement : ಡಾಲಿ ಧನಂಜಯ್ ಹುಟ್ಟುಹಬ್ಬದಂದೇ ಮಹತ್ವದ ಘೋಷಣೆ

Twist in Ramachari serial: Drugs are found in Ramachari’s house

Comments are closed.