Cruiser collided with a lorry: ಭೀಕರ ರಸ್ತೆ ಅಪಘಾತ : 9 ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು, 11 ಜನರ ಸ್ಥಿತಿ ಗಂಭೀರ

ತುಮಕೂರು : Cruiser collided with a lorry: ಲಾರಿಗೆ ಕ್ರೂಸರ್​​ ಡಿಕ್ಕಿ ಹೊಡದ ಪರಿಣಾಮ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಬರೋಬ್ಬರಿ 9 ಮಂದಿ ಮೃತ ಪಟ್ಟ ದಾರುಣ ಘಟನೆಯು ತುಮಕೂರು ಜಿಲ್ಲೆ ಶಿರಾ ಸಮೀಪದ ಕಳ್ಳಂಬೆಳ್ಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳಯಗಳನ್ನು ಶಿರಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ. ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ಕೂಲಿ ಕಾರ್ಮಿಕರು ಅಪಘಾತಕ್ಕೆ ಒಳಗಾಗಿರುವ ಕ್ರೂಸರ್​ನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಕಡೆಗೆ ಕ್ರೂಸರ್​ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಶಿರಾ ಬಳಿ ತೆರಳುತ್ತಿದ್ದ ಲಾರಿಯನ್ನು ಓವರ್​ಟೇಕ್​ ಮಾಡಲು ಕ್ರೂಸರ್​ ಚಾಲಕ ನಿರ್ಧರಿಸಿದ್ದಾನೆ. ಆದರೆ ಓವರ್​ ಟೇಕ್​ ಮಾಡುವ ಭರದಲ್ಲಿ ಚಾಲಕನಿಗೆ ಕ್ರೂಸರ್​ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ನಡೆದ ಈ ಅಪಘಾತದಲ್ಲಿ 20 ಮಂದಿ ಬಡ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಎಲ್ಲರೂ ರಾಯಚೂರು ಜಿಲ್ಲೆಯ ವಿವಿಧ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆಯೇ 9 ಮಂದಿ ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಪುರುಷರು. ಇಬ್ಬರು ಮಕ್ಕಳು ಹಾಗೂ ಮೂವರು ಮಹಿಳೆಯರು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 11 ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ತಾಜಾ, ನೈಜ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : Daali Dhananjay birthday announcement : ಡಾಲಿ ಧನಂಜಯ್ ಹುಟ್ಟುಹಬ್ಬದಂದೇ ಮಹತ್ವದ ಘೋಷಣೆ

ಇದನ್ನೂ ಓದಿ : Heavy Rainfall alert: ಮುಂದಿನ 3 ದಿನ ಭಾರಿ ಮಳೆ ಎಚ್ಚರಿಕೆ: ಶಾಲೆಗಳಿಗೆ ರಜೆ

Cruiser collided with a lorry: 9 people died on the spot, 11 people were seriously injured

Comments are closed.