“ಕೊರೋನಾ ಮುಕ್ತ ಭಾರತ” ಘೋಷಣೆ ಯಾವಾಗ ? : ಉಪೇಂದ್ರ ಪ್ರಶ್ನೆ

0

ಬೆಂಗಳೂರು : ದೇಶದಾದ್ಯಂತ ಕೋರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಎಪ್ರೀಲ್ 14ರಂದು ಲಾಕ್ ಡೌನ್ ಅವಧಿ ಮುಗಿಯಲಿದೆ. ಆದರೆ ಕೊರೊನಾ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಜನನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಾಕ್ ಡೌನ್ ವಿಚಾರವಾಗಿ ಟ್ವೀಟ್ ಮಾಡಿರೋ ಉಪೇಂದ್ರ, ಕೊರೊನಾ ಮುಕ್ತ ಭಾರತವೆಂದು ಯಾವಾಗ ಘೋಷಣೆ ಮಾಡುವಿರಿ ? ನೂರಾ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ ? ಅಲ್ಲಿಯವರೆಗೂ ಲಾಕ್ ಡೌನ್ ಮುಂದುವರಿಯುವುದೇ ? ಅದಕ್ಕೆ ಮುಂಚೆ ತೆರವು ಮಾಡಿದ್ರೆ ಪ್ರಜೆಗಳಿಗೆ ಅಪಾಯವಲ್ಲವೇ ? ಹೀಗಂತಾ ಉಪೇಂದ್ರ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ದೇಶದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಕೂಡ ಕೊರೊನಾ ಸಂಪೂರ್ಣವಾಗಿ ಹತೋಟಿಗೆ ಬರುತ್ತಿಲ್ಲ. ದಿನ ನಿತ್ಯ ನೂರಕ್ಕೂ ಅಧಿಕ ಮಂದಿ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಉಪ್ಪಿ ಮಾಡಿರೋ ಟ್ವೀಟ್ ಇದೀಗ ಕುತೂಹಲ ಮೂಡಿಸಿದೆ.

Leave A Reply

Your email address will not be published.