Urvashi Rautela : ಕಾಂತಾರ 2 ಸಿನಿಮಾದಲ್ಲಿ ಐರಾವತ ನಟಿ : ವೈರಲ್ ಆಯ್ತು ರಿಷಬ್ ಜೊತೆಗಿನ ಪೋಟೋ

ಕಳೆದ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಲೂಟಿ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಬೃಹತ್ ಬಜೆಟ್, ದೊಡ್ಡ ದೊಡ್ಡ ಹೀರೊಗಳು, ವೈಭವದ ಸೆಟ್‌ಗಳ ಅಗತ್ಯವೇನಿಲ್ಲ, ಕೇವಲ ಸಿನಿಮಾದ ಕಂಟೆಂಟ್ ಚೆನ್ನಾಗಿದ್ದರೆ ಸಾಕು ಎಂಬುದನ್ನು ಸಾಬೀತುಪಡಿಸಿದ ಕಾಂತಾರ ಸಿನಿಮಾದ ಎರಡನೇ ಭಾಗದ ಮೇಲೆ ಇದೀಗ ಕನ್ನಡ ಸಿನಿ ರಸಿಕರು ಮಾತ್ರವಲ್ಲದೇ ಪರಭಾಷಾ ಸಿನಿ ರಸಿಕರ ಗಮನವೂ ಸಹ ನೆಟ್ಟಿದೆ. ಹೌದು, ಕಾಂತಾರ ಸಿನಿಮಾದ ಎರಡನೇ ಭಾಗ ‘ಕಾಂತಾರ 2’ ಬರಲಿದೆಯಂತೆ ಎಂದು ಅಂತೆಕಂತೆಗಳ ಮೂಲಕ ಶುರುವಾದ ಈ ಸುದ್ದಿ ಇದೀಗ ನಿಜವಾಗಿದೆ. ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ 2 ಬರಲಿದೆ, ಸಿದ್ಧತೆಗಳು ನಡೆಯುತ್ತಿವೆ ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸದ್ಯ ರಿಷಬ್‌ ಜೊತೆ ಐರಾವತ ನಟಿ (Urvashi Rautela) ಫೋಟೋ ನೋಡಿ ಗುಸು ಗುಸು ಪ್ರಾರಂಭವಾಗಿದೆ.

ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾದ ಕಥೆ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್ ನಂತರ ಶೂಟಿಂಗ್ ಆರಂಭವಾಗಲಿದೆ ಎಂಬ ಸುದ್ದಿ ಇದೆ. ಇನ್ನು ಕಾಂತಾರ ಶತದಿನೋತ್ಸವದ ಕಾರ್ಯಕ್ರಮದಲ್ಲಿ ಕಾಂತಾರ 2 ಸಿನಿಮಾವು ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಿರಲಿದೆ ಎಂಬುದನ್ನು ತಿಳಿಸಿದ್ದರು. ಅಂದರೆ ಕಾಂತಾರ ಸಿನಿಮಾದಲ್ಲಿನ ಕಥೆಗೂ ಹಿಂದೆ ಏನಾಗಿತ್ತು ಎಂಬುದನ್ನು ಈ ಸಿನಿಮಾ ತಿಳಿಸಲಿದೆ ಎಂಬುದನ್ನು ರಿಷಬ್ ಶೆಟ್ಟಿ ತಿಳಿಸಿ ಕುತೂಹಲ ಹೆಚ್ಚಾಗುವಂತೆ ಮಾಡಿದ್ದರು. ಇನ್ನು ಈ ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಮಾಹಿತಿಯನ್ನು ಸಿನಿತಂಡ ಬಿಟ್ಟುಕೊಡದಿದ್ದರೂ ಯಾವ ಪಾತ್ರಗಳು ಇರಬಹುದು ಎಂಬುದನ್ನು ಸಿನಿ ರಸಿಕರು ಊಹಿಸತೊಡಗಿದ್ದರು. ಹೀಗಿರುವಾಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ರಿಷಬ್ ಶೆಟ್ಟಿ ಜತೆಗೆ ಫೋಟೊ ಹಂಚಿಕೊಳ್ಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ.

ಬಾಲಿವುಡ್‌ ನಟಿ ಊರ್ವಶಿ ರೌಟೆಲಾ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ರಿಷಬ್ ಶೆಟ್ಟಿ ಜತೆಗಿ ಪೋಟೊ ಹಂಚಿಕೊಂಡು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಖಾತೆಗಳನ್ನು ಟ್ಯಾಗ್ ಮಾಡಿ ‘ಕಾಂತಾರ 2 ಲೋಡಿಂಗ್’ ಎಂದು ಬರೆದುಕೊಂಡಿದ್ದಾರೆ. ಸದ್ಯ ನಟಿ ಬರೆದುಕೊಂಡಿರುವ ಈ ಸಾಲುಗಳನ್ನು ನೋಡಿ ಸಿನಿ ರಸಿಕರು ಊರ್ವಶಿ ರೌಟೆಲಾ ಏಕೆ ಕಾಂತಾರ 2 ಬಗ್ಗೆ ಬರೆದುಕೊಂಡಿದ್ದಾರೆ. ಸಿನಿಮಾದಲ್ಲಿ ಈಕೆ ಪಾತ್ರವನ್ನೇನಾದರೂ ನಿರ್ವಹಿಸುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಊರ್ವಶಿ ರೌಟೆಲಾ ಸಾಮಾಜಿಕ ಜಾಲತಾಣದಲ್ಲಿ ಇಂತಹ ಗಿಮಿಕ್ ಪೋಸ್ಟ್‌ಗಳನ್ನು ಹಂಚಿಕೊಂಡು ನೆಟ್ಟಿಗರ ತಲೆಗೆ ಹುಳಬಿಡುವುದು ಹೊಸದೇನಲ್ಲ. ಈ ಹಿಂದೆಯೂ ಕ್ರಿಕೆಟಿಗ ರಿಷಬ್ ಪಂತ್ ವಿಚಾರದಲ್ಲಿ ಆತನ ಹೆಸರನ್ನು ಎಲ್ಲೂ ಉಲ್ಲೇಖಸದೇ ಪೋಸ್ಟ್ ಮಾಡಿ ಕಾಲೆಳೆದಿದ್ದರು ಹಾಗೂ ಇದು ದೊಡ್ಡ ಮಟ್ಟದ ವಿವಾದಕ್ಕೂ ಸಹ ಕಾರಣವಾಗಿತ್ತು. ಹೀಗಾಗಿ ಕೆಲವರು ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ಫೋಟೊಗೆ ಗೊಂದಲ ಹುಟ್ಟಿಸುವ ಬರಹವನ್ನು ಊರ್ವಶಿ ರೌಟೆಲಾ ಬರೆದುಕೊಂಡಿರುತ್ತಾರೆ ಅಷ್ಟೇ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ : Gowli Movie : ಸ್ಯಾಂಡಲ್‌ವುಟ್‌ ನಟ ಶ್ರೀನಗರ ಕಿಟ್ಟಿ “ಗೌಳಿ” ಬಿಡುಗಡೆ ಡೇಟ್‌ ಫಿಕ್ಸ್

ಇದನ್ನೂ ಓದಿ : D56 Movie : ನಟ ದರ್ಶನ್‌ ಅಭಿನಯದ ‘D56’ ಸಿನಿಮಾದಲ್ಲಿ ಯಾರಾರು ನಟಿಸಲಿದ್ದಾರೆ ಗೊತ್ತಾ ?

ಇದನ್ನೂ ಓದಿ : ನಟ ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟು : ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದಿದ್ರು ಪವರ್ ಸ್ಟಾರ್!

2013ರಲ್ಲಿ ತೆರೆಕಂಡ ಸಿಂಗ್ ಸಾಬ್ ದ ಗ್ರೇಟ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ್ದ ನಟಿ ಊರ್ವಶಿ ರೌಟೆಲಾ 2015ರಲ್ಲಿ ತೆರೆಕಂಡ ದರ್ಶನ್ ನಟನೆಯ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದರು. ಇದು ಈಕೆ ವೃತ್ತಿ ಜೀವನದ ಎರಡನೇ ಸಿನಿಮಾವಾಗಿದ್ದು, ಬಳಿಕ ಏಳೆಂಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ತೆರೆಕಂಡ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ಊರ್ವಶಿ ರೌಟೆಲಾ ಮತ್ತೆ ದಕ್ಷಿಣ ಇಂಡಸ್ಟ್ರಿಗಳತ್ತ ಮುಖ ಮಾಡಿದ್ದು, ಮತ್ತೆರಡು ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.

Urvashi Rautela: Irawat actress in Kantara 2: Photo with Rishabh went viral

Comments are closed.