Gujarath crime: 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಜೋಡಿ

ಗುಜರಾತ್:‌ (Gujarath crime) ಯುವ ಜೋಡಿಯೊಂದು ರಸ್ತೆಬದಿಯಲ್ಲಿ ಭ್ರೂಣ ಎಸೆದ ಪರಾರಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ. ಮೂರು ತಿಂಗಳ ಭ್ರೂಣವನ್ನು ರಸ್ತೆಯಲ್ಲಿ ಎಸೆದು ಹೋಗಿರುವ ದೃಶ್ಯ ಆ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಗೋದಾರಾ ಪ್ರದೇಶದ ಲಕ್ಷ್ಮೀನಾರಾಯಣ ಸೊಸೈಟಿಯ ಗೇಟ್‌ ಬಳಿ ಭ್ರೂಣ (Gujarath crime) ಬಿದ್ದಿರುವ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ಪೊಲೀಸರು ಭ್ರೂಣವನ್ನು ವಶಪಡಿಸಿಕೊಂಡು ಅಮೀಪದ ಸಮೀರ್‌ ಆಸ್ಪತ್ರೆಗೆ ರವಾನಿಸಿದ್ದಾರೆ. ಸೊಸೈಟಿಯ ಗೇಟ್‌ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಯುವಕ ಯುವತಿ ಕತ್ತಲಲ್ಲಿ ಭ್ರೂಣ ಎಸೆದು ಪರಾರಿಯಾಗಿರುವುದು ತಿಳಿದುಬಂದಿದೆ.

ಯುವಕ ಕೈಯಲ್ಲಿ ಫೈಲ್‌ ಹಿಡಿದು ನಿಂತಿದ್ದರೆ, ಯುವತಿ ಭ್ರೂಣವನ್ನು ರಸ್ತೆಬದಿ ಎಸೆಯುತ್ತಿದ್ದು, ಸಿಸಿಟಿವಿ ದೃಶ್ಯದಲ್ಲಿ ಇಬ್ಬರ ಮುಖಗಳು ಸ್ಪಷ್ಟವಾಗಿ ಗೋಚರಿಸದಿದ್ದರೂ ಕೂಡ ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರ ಆಧಾರದ ಮೇಲೆ ಅವರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈಗಿನ ಕಾಲದಲ್ಲಿ ಪ್ರೀತಿ ವಾತ್ಸಲ್ಯ ಕರುಳು ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಒಂದು ತಪ್ಪು ಮಾಡಿ ತೊಂದರೆಗೆ ಸಿಲುಕಿ ಅದರಿಂದ ತಪ್ಪಿಸಿಕೊಳ್ಳಲು ಸಾವಿರ ತಪ್ಪು ಮಾಡುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಸದ್ಯ ಇಂತಹ ಹೀನಾಯ ಘಟನೆಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದು, ಜನರು ಪ್ರಾಣಿಗಳಿಗಿಂತ ಕ್ರೂರಿಯಾಗಿದ್ದಾರೆ. ಇಂತಹವರಿಗೆ ಸರಿಯಾದ ಶಿಕ್ಚೆ ಒದಗಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Gaya railway accident: ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಮಹಿಳೆ : ಮುಂದೆ ಏನಾಯ್ತು?

ಇದನ್ನೂ ಓದಿ : Davanagere bike accident: ಅಪರಿಚಿತ ವಾಹನಕ್ಕೆ ಬೈಕ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಇದನ್ನೂ ಓದಿ : PU Student died: ಆಸೆಯಿಂದ ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ಅಂತ್ಯ

Gujarat crime: Couple absconded after throwing 3-month-old fetus on the road

Comments are closed.