ಇನ್ ಸ್ಟಾಗ್ರಾಂ ಪಾಲೋವರ್ಸ್ ಗಾಗಿ ಹಾಟ್ ಪೋಟೋ ಶೂಟ್ : ನಟಿ ವೈಷ್ಣವಿ ಕೌಂಡಿನ್ಯ ಅವತಾರಕ್ಕೆ ನೆಟ್ಟಿಗರು ಗರಂ

Vaishnavi Koundinya photoshoot : ಸಿನಿಮಾ ಹಾಗೂ ಸೀರಿಯಲ್ ನಟಿಯರು ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳೋದು ಹೊಸತೇನಲ್ಲ. ಆದರೆ ಮಾದಕವಾಗಿ ಪೋಸ್ ಕೊಟ್ಟರೂ ಕೊಂಚ ಸಭ್ಯವಾಗಿರಬೇಕು ಅನ್ನೋದು ಸೋಷಿಯಲ್ ಮೀಡಿಯಾ ಮಂದಿಯ ಅಂಬೋಣ.
ಆದರೆ ಬೋಲ್ಡ್ ಎನ್ನಿಸಿಕೊಳ್ಳೋ ಭರದಲ್ಲಿ ನಟಿ ವೈಷ್ಣವಿ ಕೌಂಡಿನ್ಯ ಈಗ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಜನ ನೀನು ಸೀರಿಯಲ್ ಗೆ ಹಿಂಗಾಡತೀಯಾ ತಾಯಿ ಇನ್ನು ಸಿನಿಮಾಗೆ ಬಂದರೆ ಏನು ಗತಿ ಅಂತ ಕಮೆಂಟ್ ಮಾಡ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ, ಲವ್ ಯೂ ಮುದ್ದು ಸಿನಿಮಾದ ಪ್ರಿಮಿಯರ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಡೀಪ್ ನೆಕ್ ಗ್ರೀನ್ ಗೌನ್ ನಲ್ಲಿ ವೈಷ್ಣವಿ ಸಖತ್ ಮಿಂಚಿದ್ದರು.
ಇದನ್ನೂ ಓದಿ : Devil New Song: ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಡೆವಿಲ್ ಹೊಸ ಸಾಂಗ್ ರಿಲೀಸ್
ಅದರಲ್ಲೂ ಪ್ರಂಟ್ ವಿ ಕಟ್ ಗೌನ್ ಅಗತ್ಯಕ್ಕಿಂತ ಜಾಸ್ತಿನೇ ಒಫನ್ ಆಗಿದ್ದು ನೋಡುಗರಿಗೆ ಕೊಂಚ ಕಿರಿ ಕಿರಿ ತಂದಿದ್ದು ಸುಳ್ಳಲ್ಲ. ಈ ಪೋಟೋಸ್ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಪರ ಮತ್ತು ವಿರುದ್ಧ ಕಮೆಂಟ್ ಗಳ ಸುರಿಮಳೆಯೇ ಸುರಿದಿದೆ.
ಕೆಲವರು ವಾವ್, ಹಾಟ್ ಎಂದೆಲ್ಲ ಕಮೆಂಟ್ ಮಾಡ್ತಿದ್ದರೇ, ಇನ್ನು ಕೆಲವರು ಇಂಥ ಬಟ್ಟೆಯೆಲ್ಲ ಬೇಕಾ…? ಗೌರವವಾಗಿ ಇರೋಕ್ಕಾಗಲ್ವಾ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ಈ ಪೋಟೋ ವೈರಲ್ ಆಗ್ತಿದ್ದಂತೆ ಇದ್ದಕ್ಕಿದ್ದಂತೆ ವೈಷ್ಣವಿ ಜನಪ್ರಿಯತೆ ಕೂಡ ಹೆಚ್ಚಿದೆ. ಈ ಪೋಟೋ ದಲ್ಲಿ ಮಿಂಚಿದ ವೈಷ್ಣವಿ ಇನ್ ಸ್ಟಾಗ್ರಾಂ ಪಾಲೋವರ್ಸ್ ಸಂಖ್ಯೆ ಇದುವರೆಗೂ 85.7 ಕೆ ರಷ್ಟಿತ್ತು. ಈ ಪೋಟೋ ವೈರಲ್ ಆದ ಎರಡೇ ದಿನದಲ್ಲಿ ಈ ಸಂಖ್ಯೆ 111 K ದಾಟಿದೆ.
ಇದನ್ನೂ ಓದಿ : ಸುದೀಪ್ ಕೋಪ ನೆತ್ತಿಗೇರಿಸಿದ್ರಾ ರಕ್ಷಿತಾ, ಏನು ಗೊತ್ತಿಲ್ಲದವರ ತರ ಮಾಡ್ತಾ ಇದ್ದಾರಾ ನಾಟಕ?
ಹೀಗಾಗಿ ವೈಷ್ಣವಿ ಪಾಲೋವರ್ದ್ ಸಂಖ್ಯೆ ಹೆಚ್ಚಿಸಲು ಇಂಥಹದೊಂದು ಬಟ್ಟೆ ಧರಿಸಿದ್ರಾ ಅನ್ನೋ ಕಮೆಂಟ್ ಕೂಡ ಕೇಳಿಬರ್ತಿದೆ. ಹಾಗೇ ನೋಡಿದರೇ ವೈಷ್ಣವಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಸಾಕಷ್ಟು ಹಾಟ್ ಹಾಟ್ ಪೋಸ್ ಗಳ ಪೋಟೋಸ್ ಹಂಚಿಕೊಂಡಿದ್ದಾರೆ.
ಬ್ಯಾಕ್ ಲೆಸ್ ಗೌನ್, ಬ್ಲೌಸ್ ಲೆಸ್ ಸೀರೆ, ಮಂಡಿವರೆಗೆ ಏರಿದ ಸೀರೆ, ಶಾರ್ಟ್ಸ್, ಡೀಪ್ ನೆಕ್ ಪೋಟೋಗಳು ಸಾಕಷ್ಟಿದೆ. ಕಲರ್ಸ್‌ಕನ್ನಡ ವಾಹಿನಿಯ ಧಾರಾವಾಹಿ ಮಿಥುನ ರಾಶಿಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ, ಈಗ ಪ್ರೇಮ ಕಾವ್ಯ ಸೀರಿಯಲ್ ನಲ್ಲಿ ಕಾವ್ಯ ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ವೈಷ್ಣವಿ ಕೌಂಡಿನ್ಯ ಹಾಟ್ ಪೋಟೋದ ಜೊತೆ Too Hot To Handle ಎಂದು ಬರೆದುಕೊಂಡಿದ್ದರು.
Vaishnavi Koundinya photoshoot Vedio Viral



