ಸುಪ್ರೀಂ ಕೋರ್ಟ್ ಆದೇಶದಿಂದ ‘ಕಾಂತಾರ’ ಸಿನಿತಂಡ ನಿರಾಳ

‘ಕಾಂತಾರ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆಯಾದರೂ ಆ ಸಿನಿಮಾದ ‘ವರಾಹ ರೂಪಂ’ ಹಾಡು ವಿವಾದಕ್ಕೆ ಸಿಲುಕಿಕೊಂಡಿದೆ. ಇತ್ತೀಚೆಗಷ್ಟೆ ಕೇರಳ ಹೈಕೋರ್ಟ್ ನೀಡಿದ ಹೊಸ ಆದೇಶದಿಂದ ಮತ್ತೊಮ್ಮೆ ‘ಕಾಂತಾರ’ ಸಿನಿತಂಡವು ‘ವರಾಹ ರೂಪಂ’ (Varaha Rupam Controversy) ಹಾಡನ್ನು ಸಿನಿಮಾದಿಂದ ಹಿಂಪಡೆಯುವಂತಾಗಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ‘ಕಾಂತಾರ’ ತಂಡ ನಿರಾಳವಾಗಿದ್ದು, ಮುಂದಿನ ಆದೇಶ ಬರುವವರೆಗೆ ‘ವರಾಹ ರೂಪಂ’ ಹಾಡನ್ನು ಅದರ ಮೂಲ ಸ್ವರೂಪದಲ್ಲಿಯೇ ಸಿನಿತಂಡವು ಬಳಸಬಹುದಾಗಿದೆ.

“ವರಾಹ ರೂಪಂ” ಹಾಡು ತಮ್ಮ ‘ನವರಸಂ’ ಆಲ್ಬಂನ ಹಾಡಿನಿಂದ ಕದ್ದಿರುವುದು ಎಂದು ಕೇರಳದ ಸಂಗೀತ ತಂಡ ಥೈಕ್ಕುಡಂ ಬ್ರಿಡ್ಜ್ ಹಾಗೂ ‘ನವರಸಂ’ ಆಲ್ಬಂನ ಹಕ್ಕು ಹೊಂದಿರುವ ಮಾತೃಭೂಮಿ ಪ್ರಿಂಟರ್ಸ್‌ನವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಕೇರಳ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಗಳಾಗಿರುವ ‘ಕಾಂತಾರ’ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರುಗಳಿಗೆ ನಿರೀಕ್ಷಣಾ ಜಾಮೀನು ನೀಡಿರುವ ಜೊತೆಗೆ, ‘ವರಾಹ ರೂಪಂ’ ಹಾಡನ್ನು ಬಳಸದಂತೆ ತಡೆ ನೀಡಿತ್ತು.

ಇದನ್ನೂ ಓದಿ : ಬಹುಭಾಷಾ ನಟಿ ಶ್ರೀದೇವಿ ಜೀವನ ಚರಿತ್ರೆ : ಬಯಲಾಗುತ್ತಾ ಖ್ಯಾತ ನಟಿಯ ಸಾವಿನ ರಹಸ್ಯ

ಇದನ್ನೂ ಓದಿ : ವಾಲ್ಮೀಕಿ ಜಾತ್ರೆಗೆ ಸುದೀಪ್ ಗೈರು : “ಸುದೀಪ್ ಅಣ್ಣನದ್ದು ಎಳ್ಳೆ ಕಾಳಷ್ಟು ತಪ್ಪಿಲ್ಲ” ಎಂದ ರಾಜುಗೌಡ್ರು

ಇದನ್ನೂ ಓದಿ : PK Rosie on Google Doodle: ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ನಾಯಕಿಯನ್ನು ನೆನಪಿಸುತ್ತಿರುವ ಗೂಗಲ್‌ ಡೂಡಲ್

ಕೇರಳ ಹೈಕೋರ್ಟ್‌ನ ಈ ಆದೇಶದ ವಿರುದ್ಧ ಸಿನಿತಂಡವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ‘ವರಾಹ ರೂಪಂ’ ಸಿನಿಮಾದ ಹಾಡನ್ನು ಸಿನಿತಂಡ ಬಳಸಬಹುದು ಎಂದಿದೆ. ಅಲ್ಲದೆ, ಪ್ರಕರಣ ಕುರಿತಂತೆ ಪೊಲೀಸರು ನಿರ್ದೇಶಕ, ನಿರ್ಮಾಪಕರನ್ನು ವಿಚಾರಣೆ ನಡೆಸಬಹುದು ಆದರೆ ವಿಚಾರಣೆಗೆ ಹಾಜರಾದಾಗ ಅವರನ್ನು ಬಂಧಿಸುವಂತಿಲ್ಲ’ ಎಂದಿದೆ. ”ಕೃತಿಚೌರ್ಯ ಆಗಿದೆ ಎಂದು ಕೇರಳ ಹೈಕೋರ್ಟ್‌ಗೆ ಅನಿಸಿದ ಮಾತ್ರಕ್ಕೆ ಈ ರೀತಿಯ ಆದೇಶ ನೀಡುವಂತಿಲ್ಲ. ಒಂದೊಮ್ಮೆ ಪ್ರಕರಣದಲ್ಲಿ ನಿರ್ದೇಶಕ, ನಿರ್ಮಾಪಕರನ್ನು ಬಂಧಿಸಿದ್ದರೆ ಅವರನ್ನು ಬಿಡುಗಡೆ ಮಾಡಬೇಕು. ಫೆಬ್ರವರಿ 12, 13 ರಂದು ಅರ್ಜಿದಾರರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು” ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

Varaha Rupam Controversy : ‘Kantara’ film team relieved by Supreme Court order

Comments are closed.