ಬಿಗ್​ಬಾಸ್​ ಮನೆಗೆ ಬಂದ್ರು ವರ್ತೂರು ಸಂತೋಷ್​ ತಾಯಿ : ಇನ್ನಾದ್ರೂ ಹಳ್ಳಿಕಾರ್​ ಒಡೆಯನ ನಿರ್ಧಾರ ಬದಲಾಗುತ್ತಾ?

ವರ್ತೂರು ಸಂತೋಷ್​ರನ್ನು ಸುದೀಪ್​ ಸೇಫ್​ ಎಂದು ಘೋಷಣೆ ಮಾಡುತ್ತಲೇ ಟ್ವಿಸ್ಟ್​ ಎದುರಾಗಿತ್ತು. ಹೊರಗೆ ನಡೆದ ಘಟನೆಯಿಂದ ನಾನು ತೀವ್ರವಾಗಿ ಮನನನೊಂದಿದ್ದೇನೆ . ದಯಮಾಡಿ ನನ್ನನ್ನು ಮನೆಯಿಂದ ಹೊರಗೆ ಕಳಿಸಿ ಅಂತಾ ವರ್ತೂರು ಮನವಿ ಮಾಡಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರ್ತಿರೋ ಬಿಗ್​ಬಾಸ್​ ಸೀಸನ್​ 10 ವಿವಿಧ ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದೆ. ಹೆಚ್ಚಿನ ಸಂಖ್ಯೆ ವೀವರ್ಸ್ ಸಂಪಾದಿಸುವ ಮೂಲಕ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನಕ್ಕೆ ಏರಿರುವ ಬಿಗ್​ಬಾಸ್​ ಶೋನ (Bigg Boss Kannada) ಈ ಬಾರಿಯ ವೀಕೆಂಡ್​ ಎಪಿಸೋಡ್​ನಲ್ಲಿ ವಿಚಿತ್ರ ಘಟನೆ ನಡೆದಿದೆ.

ವೀಕೆಂಡ್​ನಲ್ಲಿ ಸ್ಪರ್ಧಿಯೊಬ್ಬರನ್ನು ಎಲಿಮಿನೇಟ್​ ಮಾಡಬೇಕಿದ್ದ ಸುದೀಪ್​ ಅವರು ಹುಲಿಯುಗುರಿನ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ರ ಹಠದಿಂದ ಬೇಸರಗೊಂಡು ಎಪಿಸೋಡ್​ ಮಧ್ಯದಿಂದಲೆ ಹೊರನಡೆದಿದ್ದಾರೆ. ಕಳೆದ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿಗಳ ಪೈಕಿ ವರ್ತೂರು ಸಂತೋಷ್​ ಕೂಡ್​ ನಾಮಿನೇಟ್​ ಆಗಿದ್ದರು.

ವರ್ತೂರು ಸಂತೋಷ್​ರನ್ನು ಸುದೀಪ್​ ಸೇಫ್​ ಎಂದು ಘೋಷಣೆ ಮಾಡುತ್ತಲೇ ಟ್ವಿಸ್ಟ್​ ಎದುರಾಗಿತ್ತು. ಹೊರಗೆ ನಡೆದ ಘಟನೆಯಿಂದ ನಾನು ತೀವ್ರವಾಗಿ ಮನನನೊಂದಿದ್ದೇನೆ . ದಯಮಾಡಿ ನನ್ನನ್ನು ಮನೆಯಿಂದ ಹೊರಗೆ ಕಳಿಸಿ ಅಂತಾ ವರ್ತೂರು ಮನವಿ ಮಾಡಿದ್ದರು. ಸುದೀಪ್​ ಜನರ ಮತದ ನಿರ್ಧಾರದ ವಿರುದ್ಧ ನಾನು ಹೋಗಲಾರೆ ಎಂದು ಎಷ್ಟೇ ಹೇಳಿದ್ದರೂ ಸಹ ಕೇಳದೇ ಸಂತೋಷ್​ ಮನೆಯಿಂದ ಹೊರ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ : ರಾಯನ್ ರಾಜ್‌ ಸರ್ಜಾ ರಾಯಲ್ ಬರ್ತಡೇ: ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್‌ ಸರ್ಜಾ

Varthur Santhosh mother entered to Bigg Boss Kannada house, Will Hallikar santosh Change the decision change
Image Credit to Original Source

ಇದಾದ ಬಳಿಕ ಸುದೀಪ್ ವರ್ತೂರು ಸಂತೋಷ್​ರಿಗೆ ನಿಮಗೆ 34 ಲಕ್ಷಕ್ಕೂ ಅಧಿಕ ಮಂದಿ ವೋಟ್​ ಮಾಡಿದ್ದಾರೆ. ಅಲ್ಲದೇ ನಿಮ್ಮ ಕುಟುಂಬದವರಿಗೆ ಏನೂ ತೊಂದರೆಯಾಗಿಲ್ಲ. ನನ್ನ ಮೇಲೆ ನಂಬಿಕೆಯಿಡಿ ಎಂದು ಹೇಳುವ ಮೂಲಕ ಸಂತೋಷ್​ರನ್ನು ಮನೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಹಳ್ಳಿಕಾರ್​ ಒಡೆಯ ವರ್ತೂರು ಸಂತೋಷ್​ ಮಾತ್ರ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಕೊನೆಗೆ ನಟ ಸುದೀಪ್​ ಜನರ ಮತವನ್ನು ಧಿಕ್ಕರಿಸಿ ಬಿಗ್​ಬಾಸ್​ ಮನೆಯಿಂದ ಈವರೆಗೆ ನಾವು ಯಾರನ್ನೂ ಹೊರಹಾಕಿಲ್ಲ. ಮತದಾರರು ನಿಮ್ಮನ್ನು ಸೇವ್​ ಮಾಡಿದ ಮೇಲೆ ನೀವು ಮನೆಯೊಳಗೆ ಇರಲೇಬೇಕು. ಅದೇ ನಿಯಮ. ನಿಮ್ಮ ನಡವಳಿಕೆಯಿಂದ ನನಗೆ ಬೇಸರವಾಗಿದೆ ಎಂದು ಹೇಳಿ ಈ ವಾರಾಂತ್ಯದ ಎಪಿಸೋಡ್​ನಲ್ಲಿ​ ಯಾರನ್ನೂ ಎಲಿಮಿನೇಟ್​ ಮಾಡದೇ ಎಪಿಸೋಡ್​ನಿಂದ ನಿರ್ಗಮಿಸಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಸಂಭ್ರಮದ ದೀಪಾವಳಿ: ಇಲ್ಲಿದೆ ಕಲರ್ ಫುಲ್ ಅಲ್ಬಂ

ಇದಾದ ಬಳಿಕ ಮನೆಯ ಇತರೆ ಸದಸ್ಯರೆಲ್ಲ ಹಳ್ಳಿಕಾರ್​ ಸಂತೋಷ್​ರ ಮನವೊಲಿಸೋಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರ್ತಿರೋ ಭಾಗ್ಯಲಕ್ಷ್ಮೀ ಸೀರಿಯಲ್​ನ ಲೀಡ್​ ರೋಲ್​ನಲ್ಲಿ ನಟಿಸುತ್ತಿರೋ ಸುಷ್ಮಾ ಕೆ ರಾವ್​ ಕೂಡ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಸಂತೋಷ್​ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

Varthur Santhosh mother entered to Bigg Boss Kannada house, Will Hallikar santosh Change the decision change
Image Credit to Original Source

ಈ ಎಲ್ಲದರ ನಡುವೆ ಇದೀಗ ಇನ್ನೊಂದು ಪ್ರೊಮೋ ವೈರಲ್​ ಆಗಿದೆ . ಈ ಪ್ರೊಮೋದಲ್ಲಿ ಸ್ವತಃ ವರ್ತೂರು ಸಂತೋಷ್​ ತಾಯಿ ಬಿಗ್​ಬಾಸ್​ ಮನೆ ಒಳಗೆ ಕಾಲಿರಿಸಿದ್ದಾರೆ. ಬಿಗ್​ಬಾಸ್​ ಮನೆಯ ಸ್ಪರ್ಧಿಗಳಿಗೆಲ್ಲ ಅವರ ಮನೆಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸ್ವೀಟ್​ ಬಂದಿರುತ್ತ. ಸಂತೋಷ್​ ತಮಗೆ ಮಾತ್ರ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಿರುವಾಗಲೇ ಮನೆಯ ಮುಖ್ಯದ್ವಾರದಿಂದ ಸಿಹಿ ತಿನಿಸುಗಳನ್ನು ಹಿಡಿದುಕೊಂಡು ಸಂತೋಷ್​ ತಾಯಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ .

ಇದನ್ನೂ ಓದಿ : ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.

ಮಗನ ಮನವೊಲಿಸುವಲ್ಲಿ ತಾಯಿ ಯಶಸ್ವಿಯಾಗ್ತಾರಾ..? ಸುದೀಪ್​ರಿಗೆ ಬೇಸರವಾಗದಂತೆ ಸಂತೋಷ್​ ನಡೆದುಕೊಳ್ಳಾರಾ…? 34 ಲಕ್ಷಕ್ಕೂ ಅಧಿಕ ಮಂದಿ ಸಂತೋಷ್​ಗೆ ಹಾಕಿರುವ ವೋಟ್​ಗೆ ಬೆಲೆ ಸಿಗುತ್ತಾ..? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಎಪಿಸೋಡ್​ನಲ್ಲಿ ಉತ್ತರ ಸಿಗುವ ನಿರೀಕ್ಷೆ ಖಂಡಿತಾ ಇದೆ.

Varthur Santhosh mother entered to Bigg Boss Kannada house, Will Hallikar santosh Change the decision change

Comments are closed.