ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.

.Sharma Shakti Yojana : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಈಗಾಗಲೇ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಡುವಲ್ಲೇ ರಾಜ್ಯ ಸರಕಾರ ಮಹಿಳೆಯರಿಗೆ ಉಚಿತವಾಗಿ 50 ಸಾವಿರ ರೂಪಾಯಿ ನೀಡಲು ಮುಂದಾಗಿದೆ.

.Sharma Shakti Yojana : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಗ್ಯಾರಂಟಿ (Congress Gurantee Scheme) ಯೋಜನೆಯನ್ನು ಜಾರಿಗೆ ತರುತ್ತಿದೆ. ಈಗಾಗಲೇ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಡುವಲ್ಲೇ ರಾಜ್ಯ ಸರಕಾರ ಮಹಿಳೆಯರಿಗೆ ಉಚಿತವಾಗಿ 50 ಸಾವಿರ ರೂಪಾಯಿ ನೀಡಲು ಮುಂದಾಗಿದೆ. ಅಷ್ಟಕ್ಕೂ ಯಾವುದೀ ಯೋಜನೆ ಅಂದ್ರಾ ಈ ಸ್ಟೋರಿ ನೋಡಿ.

Sharma Shakti Yojana get 50000 rs free for Karnataka women After Gruha Lakshmi Yojana
Image Credit to Original Source

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಸರಕಾರಿ ಬಸ್ಸುಗಳನ್ನು ಉಚಿತವಾಗಿ ಸಂಚಾರ ನಡೆಸುತ್ತಿದ್ದಾರೆ. ಜೊತೆಗೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ತಿಂಗಳು 2,000 ರೂಪಾಯಿಯನ್ನು ಗೃಹಿಣಿಯರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಕರ್ನಾಟಕ ರಾಜ್ಯದ ಕೋಟಿಗೂ ಅಧಿಕ ಮಹಿಳೆಯರು ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ.  ಅಲ್ಲದೇ ಅನ್ನಭಾಗ್ಯ ಯೋಜನೆಯ ಮೂಲಕವು ಮನೆಯ ಯಜಮಾನಿಯರ ಖಾತೆಗೆ 5 ಕೆಜಿ ಅಕ್ಕಿಯ ಹಣವವು ವರ್ಗಾವಣೆ ಆಗಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ಸಾಧ್ಯವಾಗದ ಎಲ್ಲರಿಗೂ ಈ ಯೋಜನೆಯ ಲಾಭ ಪಡೆಯಬಹುದು ಎಂದು ಸರಕಾರ ಹೇಳಿದೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

ಮಹಿಳೆಯರ ಆರ್ಥಿಕ ಸಲಬಲೀಕರಣಕ್ಕಾಗಿ ರಾಜ್ಯ ಸರಕಾರ ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಅದುವೇ ಶ್ರಮಶಕ್ತಿ ಯೋಜನೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ 50,000 ರೂಪಾಯಿ ಸಾಲ ಸೌಲಭ್ಯವನ್ನು ನೀಡಲಿದೆ. ಇದರಲ್ಲಿ ಶೇ.50 ರಷ್ಟು ಹಣವನ್ನು ರಾಜ್ಯ ಸರಕಾರವೇ ಸಹಾಯಧನ ನೀಡಲಿದೆ.

Sharma Shakti Yojana get 50000 rs free for Karnataka women After Gruha Lakshmi Yojana
Image Credit to Original Source

ಶ್ರಮಶಕ್ತಿ ಯೋಜನೆಯ ಮೂಲಕ 50 ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ 25,000 ರೂಪಾಯಿಯನ್ನು ಮರು ಪಾವತಿ ಮಾಡಿದ್ರೆ, ಉಳಿದ 25,000 ರೂಪಾಯಿ ಸಹಾಯಧನವನ್ನು ಸರಕಾರವೇ ನೀಡುತ್ತದೆ. ಈ ಯೋಜನೆಯ ಮೂಲಕ ಸ್ವತಃ ಉದ್ಯೋಗವನ್ನು ಮಾಡಲು ಸಹಕಾರಿಯಾಗಲಿದೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ರಾಜ್ಯ ಸರಕಾರ ಶ್ರಮಶಕ್ತಿ ಯೋಜನೆಯ ಲಾಭವನ್ನು ಪಡೆಯಲು, www.kmdcoonline.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರು ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳನ್ನು ನೀಡುವ ಮೂಲಕ ತಾವು ಶ್ರಮಶಕ್ತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಕರ್ನಾಕಟ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಶ್ರಮಶಕ್ತಿ ಯೋಜನೆಗೆ 2023-24ನೇ ಸಾಲಿನಲ್ಲಿ ಮುಸ್ಲೀಂ, ಕ್ರೈಸ್ತ, ಜೈನ್‌, ಬೌದ್ದ, ಸಿಖ್‌, ಆಂಗ್ಲೋ ಇಂಡಿಯನ್‌ ಮತ್ತು ಪಾರ್ಸಿ ಜನಾಂಗದ ಮಹಿಳೆಯರಿಗೆ ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದ್ರಲ್ಲೂ ಮಹಿಳೆಯರು ಹಾಗೂ ವಿಚ್ಚೇಧಿತ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್‌ : ಸರಕಾರದಿಂದ ಹೊಸ ರೂಲ್ಸ್‌ ಜಾರಿ

Sharma Shakti Yojana get 5000 rs free for Karnataka women After Gruha Lakshmi Yojana

Comments are closed.