Veronica Horror Movie : ವೆರೋನಿಕಾ ಎಂಬ ಹಾರರ್ ಸಿನಿಮಾ

Veronica Horror Movie : ಚಲನಚಿತ್ರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ. ಅದರಲ್ಲೂ ಈಗಿನ ಕಾಲದ ಯುವಕರು ಹೆಚ್ಚಾಗಿ ಇಷ್ಟ ಪಡುವ ಅಂಶಗಳಲ್ಲಿ ಈ ಚಲನಚಿತ್ರಗಳು ಒಂದು. ಅದರಲ್ಲಿ ಬರುವ ಪಾತ್ರ, ಕಥೆ, ಸ್ಥಳ, ನಾಯಕ, ನಾಯಕಿ, ಸಂಗೀತ, ಹಾಡು ಇವೆಲ್ಲವನ್ನೂ ಅವರು ಇಷ್ಟ ಪಡುತ್ತಾರೆ. ಅಲ್ಲದೇ ಒಬ್ಬೊಬ್ಬರು ಒಂದೊಂದು ಆಯಾಮದಲ್ಲಿ ಚಲನಚಿತ್ರಗಳನ್ನು ನೋಡಲು ಬಯಸುತ್ತಾರೆ. ಕೆಲವರು ತಮ್ಮ ಇಷ್ಟದ ನಾಯಕ, ನಾಯಕಿ, ಖಳನಾಯಕ ಇರುವ  ಕಾರಣಕ್ಕಾಗಿ ಚಲನಚಿತ್ರವನ್ನು ನೋಡಿದರೆ, ಇನ್ನು ಕೆಲವರು ತಮ್ಮ ನೆಚ್ಚಿನ ಹಾಡುಗಳನ್ನು, ಸಂಗೀತವನ್ನು ಕೇಳಲು ಚಲನಚಿತ್ರವನ್ನು ನೋಡುತ್ತಾರೆ, ಇನ್ನು ಕೆಲವರು ಅಲ್ಲಿ ಬರುವ ಕಥೆಗಾಗಿ ಚಲನಚಿತ್ರವನ್ನು ನೋಡುತ್ತಾರೆ.

ಚಲಚಿತ್ರಗಳಲ್ಲಿ ನಾವು ಹಲವಾರು ಪ್ರಕಾರಗಳು ಇರುವುದನ್ನು ನೋಡಬಹುದು. ಕೆಲವರು ಪ್ರೀತಿ,  ಗೆಳೆತನ, ಕುಟುಂಬ ಎಂಬಂತಹ ಸಿನೆಮಾವನ್ನು ನೋಡಲು ಇಷ್ಟಪಟ್ಟರೆ, ಇನ್ನು ಕೆಲವರು ಕ್ರೀಡೆ, ಕ್ರೈಂ, ಇನ್ವೆಸ್ಟಿಗೆಷನ್, ಹಾರರ್ ತರಹದ ಸಿನೆಮಾಗಳನ್ನು ನೋಡಲು ಬಯಸುತ್ತಾರೆ. ಸಿನೆಮಾದ ಒಂದೊಂದು ಪ್ರಕಾರಗಳು ನಮ್ಮಲ್ಲಿ ಸಿನೆಮಾವನ್ನು ಇನ್ನಷ್ಟು ಮತ್ತಷ್ಟು ನೋಡಲು ಪ್ರೆರೇಪಿಸುತ್ತದೆ. ಒಟ್ಟಾರೆ ಚಲನಚಿತ್ರಗಳಲ್ಲಿ ಈ ತರಹದ ಹಲವಾರು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುತ್ತೇವೆ.

ಇತ್ತೀಚಿನ ದಿನಗಳಲ್ಲಿ ಸಿನೆಮಾದಲ್ಲಿಯೂ ಕೆಲವು ಚಾಲೆಂಜ್ ಕೊಡುವುದನ್ನು ನಾವು ಗಮನಿಸಬಹುದು. ಅದರಲ್ಲಿಯೂ ಹಾರರ್ ಸಿನೆಮಾಗಳಲ್ಲಿ ಒಬ್ಬರೇ ಕುಳಿತು ಇಡೀ ಸಿನೆಮಾವನ್ನು ನೋಡಿದರೆ ಇಂತಿಷ್ಟು ಹಣವನ್ನು ಕೊಡುತ್ತೇವೆ ಎಂದು ಹೇಳಲಾಗಿತ್ತು. ಈ ಹಾರರ್ ಸಿನೆಮಾಗಳು ಹೆಚ್ಚು ಫೇಮಸ್ ಅನ್ನು ಪಡೆದಿದ್ದೆ ಈ ರೀತಿಯ ಚಾಲೆಂಜ್ಗಳಿಂದ. ಇವತ್ತು ಕೂಡಾ ಅದೆಷ್ಟೋ ಸಿನೆಮಾ ಪ್ರೇಮಿಗಳು ಅಂದರೆ ಹಾರರ್ ಚಿತ್ರ ನೋಡಲು ಬಯಸುವವರು ಈ ರೀತಿಯ ಚಾಲೆಂಜ್ಗಳನ್ನು ನಿರೀಕ್ಷೆ ಮಾಡುತ್ತಾರೆ.

ಇವತ್ತು ನಾನು ತುಂಬಾ ಕುತೂಹಲ ಕೆರಳಿಸಿದ ಒಂದು ಹಾರಾರ್ ಸಿನೆಮಾದ ಬಗ್ಗೆ ಹೇಳಲು ಬಯಸುತ್ತೇನೆ. 2017 ರಲ್ಲಿ ಬಿಡುಗಡೆಯಾಗಿದ್ದ ಭಯಾನಕ ಹಾರರ್ ಚಲನಚಿತ್ರ “ವೆರೋನಿಕಾ”. ಈ ವೆರೋನಿಕ ಚಲನಚಿತ್ರವನ್ನು 100 ಜನರಲ್ಲಿ ಒಬ್ಬರು ಮಾತ್ರ ಪೂರ್ತಿ ನೋಡಲು ಸಾಧ್ಯವಾಗಿದೆ ಎಂದು ನೆಟ್ ಪ್ಲಿಕ್ಸ್ ವರದಿ ಮಾಡಿದೆ. ಈ ಸಿನೆಮಾವನ್ನು ಎಷ್ಟೇ ಜನರು ನೋಡಲು ಭಯಸಿದರೂ ಭಯದಿಂದ ಪೂರ್ತಿ ಸಿನೆಮಾವನ್ನು ನೋಡಲು ಸಾಧ್ಯವಾಗಲಿಲ್ಲ. ಅಂತಹ ವಿಶೇಷ ಹಾಗೂ ಭಯ ಹುಟ್ಟಿಸುವ ಸಿನೆಮಾ ಇದಾಗಿದೆ. ನೀವೂ ಕೂಡ ಈ ಸಿನೆಮಾವನ್ನು ನೋಡಲು ಪ್ರಯತ್ನಿಸಬಹುದು. 

ಇದನ್ನೂ ಓದಿ: Rohith Sharma sixer injures : ಸಿಕ್ಸರ್ ಬಡಿದು ಗಾಯಗೊಂಡಿದ್ದ ಹುಡುಗಿಯನ್ನು ಸಂತೈಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್​ ವಿಕ್ರಮ ಸಿಂಘೆ ನೇಮಕ

(Veronica the Most Scariest Horror Movie)

Comments are closed.