Puneeth Rajkumar : ಟ್ವೀಟರ್ ನಿಂದ ಪುನೀತ್‌ ರಾಜ್‌ಕುಮಾರ್‌ಗೆ ಅವಮಾನ,ಅಭಿಮಾನಿಗಳ ಆಕ್ಷೇಪ : ಅಂತಹದ್ದೇನಾಯ್ತು ಗೊತ್ತಾ ?

ಕರುನಾಡಿನ ಮನೆಮಗ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳು ಇನ್ನೂ ಮರುಗುತ್ತಲೇ ಇದ್ದಾರೆ. ಅಕ್ಟೋಬರ್ 29 ಕ್ಕೆ ಪುನೀತ್ ರಾಜ್ ಕುಮಾರ್ (Puneeth Rajkumar ) ನಿಧನಕ್ಕೆ ಒಂದು ವರ್ಷವಾಗಲಿದೆ. ಇನ್ನೂ ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಈ ದುಃಖದಿಂದ ಹೊರಬಂದಿಲ್ಲ. ಈ ಮಧ್ಯೆ ಪುನೀತ್ ಸೋಷಿಯಲ್ ಮೀಡಿಯಾ (Shame on Puneeth Rajkumar by Twitter) ನೋಡಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ಒಂದು ಶಾಕ್ ಎದುರಾಗಿದೆ. ಹೌದು ಪುನೀತ್ ಟ್ವೀಟರ್ ಅಕೌಂಟ್ ನಿಷ್ಕ್ರಿಯಗೊಂಡಿದೆ.

ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿದ್ದರು. ತಮ್ಮ ಸಿನಿಮಾ ಪ್ರಮೋಶನ್, ಹೊಸಬರ ಸಿನಿಮಾಗಳ ಟ್ರೇಲರ್, ಸಾಂಗ್ ರಿಲೀಸ್, ತಾವು ಭೇಟಿ ನೀಡಿದ ಸ್ಥಳಗಳು ಹೀಗೆ ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿ ಅಪ್ಡೇಟ್ ನೀಡುತ್ತಿದ್ದರು. ಆದರೆ ಈಗ ಪುನೀತ್ ನಿಧನದ ಬಳಿಕ ಪುನೀತ್ ಸೋಷಿಯಲ್ ಮೀಡಿಯಾ ಅಕೌಂಟ್ ನಿಷ್ಕ್ರಿಯಗೊಂಡಿತ್ತು. ಯಾವುದೇ ಪೋಸ್ಟ್, ಅಪ್ಡೇಟ್ ಗಳು ಶೇರ್ ಆಗಿರಲಿಲ್ಲ. ಆದರೂ ಅಪ್ಪು ಅಭಿಮಾನಿಗಳು ಅಪ್ಪು ಟ್ವೀಟರ್ ಹಾಗೂ ಇನ್ ಸ್ಟಾಗ್ರಾಂ ನೋಡಿ ಸಮಾಧಾನ ಪಡುತ್ತಿದ್ದರು.

ಆದರೆ ಈಗ ಪುನೀತ್ ರಾಜ್ ಕುಮಾರ್ ಅಧಿಕೃತ ಟ್ವಿಟರ್ ಅಕೌಂಟ್ ನಿಂದ ಬ್ಲೂ ಟಿಕ್ ನ್ನು ಹಿಂಪಡೆದುಕೊಂಡಿದೆ. ಟ್ವೀಟರ್ ನ ಈ ಕ್ರಮಕ್ಕೆ ಪುನೀತ್ ಅಭಿಮಾನಿಗಳಿಂದ ಅಸಮಧಾನ ವ್ಯಕ್ತವಾಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ರೂಲ್ಸ್ ಗಳನ್ನು ಹೊಂದಿರೋ ಟ್ವೀಟರ್ ಸಂಸ್ಥೆ ಸದಾಕಾಲ ಟ್ವೀಟರ್ ಖಾತೆಗಳನ್ನು ಪರಿಶೀಲಿಸುತ್ತ ಇರುತ್ತದೆ. ಇದರಲ್ಲಿ ಸಕ್ರಿಯವಾಗಿಲ್ಲದ ಅಕೌಂಟ್ ಗಳನ್ನು ಟ್ವೀಟರ್ ರದ್ದು ಪಡಿಸುತ್ತದೆ. ಅಲ್ಲದೇ ಸೆಲೆಬ್ರೆಟಿಗಳಿಗೆ ವೆರಿಫಿಕೇಶನ್ ಬಳಿಕ ಬ್ಲೂ ಟಿಕ್ ನೀಡುತ್ತದೆ.

ಈಗ ಪುನೀತ್ ನಿಧನವಾಗಿ ೯ ತಿಂಗಳ ಬಳಿಕ ಪುನೀತ್ ಖಾತೆ ನಿಷ್ಕ್ರಿಯವಾಗಿಯೇ ಉಳಿದಿರೋದರಿಂದ ಟ್ವೀಟರ್ ಸಂಸ್ಥೆ ಪುನೀತ್ ಖಾತೆಯ ಬ್ಲೂ ಟಿಕ್ ರದ್ದುಗೊಳಿಸಿದೆ. ಈ ಹಿಂದೆ ಎಂ.ಎಸ್.ದೋನಿ ಟ್ವೀಟರ್ ಅಕೌಂಟ್ ಗೂ ಬ್ಲೂ ಟಿಕ್ ರದ್ದಾಗಿತ್ತು. ಬಳಿಕ ಟ್ವೀಟರ್ ಕಂಪನಿ ಈ ಅಚಾತುರ್ಯಕ್ಕೆ ಕ್ಷಮೆಯಾಚಿಸಿತ್ತು. .ಈಗ ಪುನೀತ್ ಅಕೌಂಟ್ ಗೆ ಟ್ವೀಟರ್ ನಿರ್ಧರಿಸಿರೋದು ಪುನೀತ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ನಮ್ಮ ಪವರ್ ಸ್ಟಾರ್ ನೆನಪಿಗಾಗಿ ಅಕೌಂಟ್ ಹಾಗೇ ಇರಬೇಕು ಅನ್ನೋ ಮನವಿ ಮಾಡ್ತಿದ್ದಾರೆ.

ಇದನ್ನೂ ಓದಿ : Veronica Horror Movie : ವೆರೋನಿಕಾ ಎಂಬ ಹಾರರ್ ಸಿನಿಮಾ

ಇದನ್ನೂ ಓದಿ : manoranjan ravichandran : ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರನಿಗೆ ಕಂಕಣ ಭಾಗ್ಯ : ಮುಂದಿನ ತಿಂಗಳು ಮನೋರಂಜನ್​ ಮದುವೆ

Shame on Puneeth Rajkumar by Twitter, The fans are outraged, After all you know what happened

Comments are closed.