ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಧಾರವಾಡದ ಸ್ವತಿಷ್ಠ ಕೃಷ್ಣನ್

ನಿರ್ದೇಶಕ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ನೂತನ ಸಿನಿಮಾಕ್ಕೆ ನಾಯಕಿ ಆಯ್ಕೆ ಆಗಿದ್ದಾರೆ. ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಮೂಲಕ ‘ವಿಕ್ರಮ್’ ಸಿನಿಮಾದಲ್ಲಿ ನಟಿಸಿರುವ ಸ್ವತಿಷ್ಠ ಕೃಷ್ಣನ್ (Swatishtha Krishnan) ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾಕ್ಕಾಗಿ ನಾಯಕಿ ಹುಡುಕಾಟದಲ್ಲಿದ್ದ ಸಿಂಪಲ್ ಸುನಿ ಧಾರವಾಡ ಮೂಲದ ಕನ್ನಡತಿ ನಟಿ ಸ್ವತಿಷ್ಠ ಕೃಷ್ಣನ್ ಅವರನ್ನು ಕನ್ನಡ ಸಿನಿರಂಗಕ್ಕೆ ಕರೆ ತಂದಿದ್ದಾರೆ. ತಮಿಳು ಸಿನಿರಂಗದಲ್ಲಿ ಸಕ್ರಿಯರಾಗಿರುವ ಸ್ವತಿಷ್ಠ ಕೃಷ್ಣನ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ವಿನಯ್ ರಾಜ್ ಕುಮಾರ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸಿಂಪಲ್ ಸುನಿ ನನಗೆ ಕನ್ನಡದ ಹುಡುಗಿಯೇ ನಾಯಕಿಯಾಗಿ ಬೇಕಿತ್ತು. ನನ್ನ ಎಲ್ಲಾ ಸಿನಿಮಾಗಳಲ್ಲೂ ಅದು ಮೊದಲ ಆದ್ಯತೆಯಾಗಿರುತ್ತೆ ವಿಕ್ರಮ್ ಸಿನಿಮಾದಲ್ಲಿ ಸ್ವತಿಷ್ಠ ಪಾತ್ರ ನೋಡಿ ಇಷ್ಟವಾಗಿತ್ತು. ಸ್ವತಿಷ್ಠ ಮೂಲತಃ ಉತ್ತರ ಕರ್ನಾಟಕದವರು. ನಮ್ಮ ಸಿನಿಮಾ ಪಾತ್ರಕ್ಕೆ ಅವರು ಸೂಕ್ತ ಎನಿಸಿತು ಅವರು ಕೂಡ ಕಥೆ ಕೇಳಿ ಓಕೆ ಮಾಡಿ ನಮ್ಮ ಸಿನಿತಂಡ ಸೇರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ರೇಣು ಮಹಾರಾಜನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಕೆಜಿಎಫ್‌ ಗ್ಯಾಂಗ್‌ ಸ್ಟಾರ್‌ ತಾರಕ್‌ ಪೊನ್ನಪ್ಪ

ಇದನ್ನೂ ಓದಿ : ‘ರೋಲೆಕ್ಸ್ ಕೋಮಲ್’ಗೆ ನಾಯಕಿಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ

ಇದನ್ನೂ ಓದಿ : ಆಸ್ಕರ್ ನಾಮಿನೇಷನ್ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ : ಆರ್‌ಆರ್‌ಆರ್‌ಗೆ ಲಭಿಸುತ್ತಾ ಪ್ರಶಸ್ತಿ?

ಈ ಸಿನಿಮಾಕ್ಕೆ ಪ್ರಸನ್ನ ಉತ್ತಮ ಕಥೆ ನೀಡಿದ್ದಾರೆ. ಇನ್ನು ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಸಿನಿಮಾ ತಾರಾಬಳಗ ಎಲ್ಲದರ ಬಗ್ಗೆ ಅಧೀಕೃತ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಸಿನಿಮಾಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದಾರೆ. ವೀರ್ ಸಮರ್ಥ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಇನ್ನು ಸಭಾ ಅವರ ಛಾಯಾಗ್ರಾಹಣ ಈ ಸಿನಿಮಾಕ್ಕಿದೆ.

ಇದನ್ನೂ ಓದಿ : Actress Prema : ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ

ಇದನ್ನೂ ಓದಿ : ಮಾಲಾಶ್ರೀ, ಭೂಮಿ ಶೆಟ್ಟಿ ನಟನೆಯ ಕೆಂಡದ ಸೆರಗು ಟೀಸರ್ ರಿಲೀಸ್

‘Vikram’ Bedagi Swatishtha Krishnan of Dharwad entered Sandalwood

Comments are closed.