Warrior heart attack death: ತಾಯಿಯ ವರ್ಷದ ಕಾರ್ಯಕ್ಕೆ ಹುಟ್ಟೂರಿಗೆ ಬರುತ್ತಿದ್ದ ಯೋಧ ಹೃದಯಾಘಾತದಿಂದ ಸಾವು

ಮಂಗಳೂರು: (Warrior heart attack death) ಭೋಪಾಲ್‌ ನಲ್ಲಿ ಸಶಸ್ತ್ರ ಸೀಮ್‌ ಬಸ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ತನ್ನ ತಾಯಿಯ ವರ್ಷದ ಕಾರ್ಯಕ್ಕೆ ಊರಿಗೆ ಬರುತ್ತಿರುವ ವೇಳೆ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಮುರುಳಿಧರ್‌ ರೈ (37 ವರ್ಷ) ಮೃತ ಯೋಧ.

ಮುರುಳಿಧರ್‌ ರೈ ಮಂಗಳೂರು ಮೂಲದವರಾಗಿದ್ದು, ಭೋಪಾಲ್‌ ನಲ್ಲಿ ಸಶಸ್ತ್ರ ಸೀಮ್‌ ಬಸ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಫೆ. 5 ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರಗಳ ಕಾಲ ರಜೆಯನ್ನು ಪಡೆದು ಮಂಗಳವಾರ ಭೋಪಾಲ್‌ ನಿಂದ ಹೊರಟು ಬರುವವರಿದ್ದರು. ಆದರೆ ವಿಧಿ ಲೀಲೆಯೇ ಬೇರೆಯಾಗಿತ್ತು.

ಊರಿಗೆ ಮರಳುವ ಖುಷಿಯಲ್ಲಿ ಮಲಗಿದ್ದ ಯೋಧ ಮುರುಳಿಧರ್‌ ಮಲಗಿದ್ದಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಬುಧವಾರವೆಂದರೇ ಅವರು ಮಂಗಳೂರಿಗೆ ಬರುವವರಿದ್ದರು. ಮುರುಳಿಧರ್‌ ಅವರು ತಮ್ಮ ಪತ್ನಿ ಹಾಗೂ ಹುಟ್ಟಿದಾಗಿಂದ ಮುಖವನ್ನೇ ಕಾಣದ ಏಳು ತಿಂಗಳ ಕಂದಮ್ಮನನ್ನು ಅಗಲಿದ್ದಾರೆ.

2007 ರಲ್ಲಿ ಕಾನ್ಸ್‌ ಟೇಬಲ್‌ ಆಗಿ ಸಶಸ್ತ್ರ ಸೀಮ್‌ ಬಲ್‌ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದ ಮುರುಳಿಧರ್‌ ರೈ, ಹವಾಲ್ದಾರ್‌ ಆಗಿ ಭೋಪಾಲ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಮೃತ ಯೋಧ ಮುರುಳಿಧರ್‌ ಅವರ ಪಾರ್ಥೀವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು.

ಜಿಲ್ಲಾಧಿಕಾರಿ ರವಿಕುಮಾರ್‌ ಎಂ. ಆರ್‌ ಸೇರಿದಂತೆ ಅನೇಕ ಅಧಿಕಾರಿಗಳು ಸೇರಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಿದ್ದಾರೆ. ನಂತರದಲ್ಲಿ ಎಜೆ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿ, ನಾಳೆ ಶಕ್ತಿನಗರದ ಯೋಧನ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ಇದನ್ನೂ ಓದಿ : Cement container accident: ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್‌ ಕಂಟೈನರ್‌ ಪಲ್ಟಿ: ಕಾರು ಜಖಂ

ಇದನ್ನೂ ಓದಿ : ಆನ್‌ಲೈನ್‌ ಕೆಲಸ ನೀಡುವುದಾಗಿ ಬ್ರಹ್ಮಾವರದ ಯುವಕನಿಗೆ ಗೂಗಲ್ ಪೇ ಮೂಲಕ 1.40 ಲಕ್ಷ ರೂ. ವಂಚನೆ

ಇದನ್ನೂ ಓದಿ : Praveen Nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‌ಐ ನಂಟು ಹೊಂದಿರುವ 20 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

Warrior heart attack death: A warrior who was coming to his hometown for Mother’s Day work died of a heart attack

Comments are closed.