Namanne Yuvarani serial :ನಮ್ಮನೆ ಯುವರಾಣಿ ಸೀರಿಯಲ್​​ಗೆ ಮರಳಿ ಬರಲಿದ್ದಾರಾ ಅನಿಕೇತ್​ -ಮೀರಾ : ಇಲ್ಲಿದೆ ಬಿಗ್​ ಅಪ್​ಡೇಟ್ಸ್​

Namanne Yuvarani serial : ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರವಾಹಿ ಕೊನೆಯ ಹಂತದಲ್ಲಿದೆ. ಇನ್ನೇನು ಬಿಗ್​ ಬಾಸ್​ ಸೀಸನ್​ 9 ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲರ್ಸ್​ ಕನ್ನಡದ ಸಾಕಷ್ಟು ಧಾರವಾಹಿಗಳು ಕೊನೆಯಾಗುತ್ತಿದೆ. ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಹಾಗೂ ನನ್ನರಸಿ ರಾಧೆ ಧಾರವಾಹಿಗಳನ್ನು ಮುಗಿಸಲು ಕಲರ್ಸ್ ಕನ್ನಡ ಟೀಂ ನಿರ್ಧರಿಸಿದೆ ಎನ್ನಲಾಗಿದ್ದು ಈ ಧಾರವಾಹಿಗಳ ಕೊನೆಯ ಹಂತದ ಶೂಟಿಂಗ್​​ಗಳು ಭರದಿಂದ ಸಾಗಿದೆ.


ನಮ್ಮನೆ ಯುವರಾಣಿ ಎಂಬ ಧಾರವಾಹಿ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗೋದೇ ಅನಿಕೇತ್​ ಹಾಗೂ ಮೀರಾ ಜೋಡಿ. ಈ ಜೋಡಿ ಎಷ್ಟರ ಮಟ್ಟಿಗೆ ಫೇಮಸ್​ ಆಗಿತ್ತು ಅಂದರೆ ಸೋಶಿಯಲ್​ ಮೀಡಿಯಾದ ಅನೀರಾ ಎಂಬ ಫ್ಯಾನ್ಸ್​​ಗಳು ಹುಟ್ಟಿಕೊಂಡಿದ್ದಾರೆ. ಆದರೆ ಕಾರಣಾಂತರಗಳಿಂದ ಈ ಧಾರವಾಹಿಯಲ್ಲಿ ಕಳೆದ ಅನೇಕ ದಿನಗಳಿಂದ ಅನಿಕೇತ್​ ಹಾಗೂ ಮೀರಾ ಪಾತ್ರಧಾರಿಗಳು ಕಾಣಿಸಿಕೊಳ್ತಿರಲಿಲ್ಲ. ಧಾರವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್​ಗಳನ್ನು ತರುವ ಮೂಲಕ ಅನಿಕೇತ್​ ಹಾಗೂ ಮೀರಾನನ್ನು ಕಿಡ್ನಾಪ್​ ಮಾಡಲಾಗಿದೆ ಎಂದು ಹೇಳಲಾಗಿತ್ತು.


ನಮ್ಮನೆ ಯುವರಾಣಿ ಧಾರವಾಹಿಗೆ ಎಷ್ಟೇ ಟ್ವಿಸ್ಟ್​ಗಳನ್ನು ತಂದರೂ ಸಹ ಜನರು ಮಾತ್ರ ನಮಗೆ ಅನಿಕೇತ್​ ಮೀರಾ ವಾಪಸ್​ ಬೇಕು ಎಂದು ಹೇಳ್ತಿದ್ದಾರೆ. ಸಾಕೇತ್​ – ಅಹಲ್ಯಾ, ಗಂಗಾ – ಪ್ರಣಮ್​ ಜೋಡಿಯನ್ನು ಮುಂದಿಟ್ಟು ಧಾರವಾಹಿಯನ್ನು ನಡೆಸಲಾಗುತ್ತಿದೆಯಾದರೂ ನಮ್ಮನೆ ಯುವರಾಣಿ ವೀಕ್ಷಕರ ಅನಿರಾ ಬೇಕೆಂಬ ಬೇಡಿಕೆ ಮಾತ್ರ ಕಡಿಮೆಯಾಗಲೇ ಇಲ್ಲ.


ಇದೀಗ ಧಾರವಾಹಿಯು ಕೊನೆಯ ಹಂತದಲ್ಲಿದ್ದು ಗಂಹಾ ಅಹಲ್ಯಾಳ ನಿಜ ಬಣ್ಣವನ್ನು ಬಯಲು ಮಾಡುವ ಪ್ರಯತ್ನದಲ್ಲಿದ್ದಾಳೆ. ಅಲ್ಲದೇ ಅನಿಕೇತ್​ ಹಾಗೂ ಮೀರಾ ಮಗು ಕೂಡ ರಾಜ್​ಗುರು ಕುಟುಂಬವನ್ನು ಸೇರಿಕೊಂಡಿದೆ. ಧಾರವಾಹಿ ಕ್ಲೈಮಾಕ್ಸ್​ ಸೀನ್​ನಲ್ಲಿ ಅನಿಕೇತ್​ ಹಾಗೂ ಮೀರಾರನ್ನು ಕರೆತರುವ ನಿರ್ಧಾರಕ್ಕೆ ಧಾರವಾಹಿ ತಂಡ ಬಂದಿದ್ದು ಈ ಮೂಲಕ ಅನಿರಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡುವ ತಯಾರಿಯಲ್ಲಿದೆ. ಮೀರಾ ಪಾತ್ರಧಾರಿ ಅಂಕಿತಾ ಅಮರ್​ ಈಗಾಗಲೇ ಸೀರಿಯಲ್ ಸೆಟ್​ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಅನಿಕೇತ್​ ಪಾತ್ರಧಾರಿಯಾಗಿರುವ ದೀಪಕ್​ ಮಾತ್ರ ಇನ್ನೂ ಧಾರವಾಹಿ ತಂಡಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : Auto that fell into the canal :ಕಾಲುವೆಗೆ ಪಲ್ಟಿಯಾಗಿ ಬಿದ್ದ ಆಟೋ: ಮೂವರ ಶವ ಪತ್ತೆ, ಮೂವರು ಮಿಸ್ಸಿಂಗ್, ನಾಲ್ವರ ರಕ್ಷಣೆ

ಇದನ್ನೂ ಓದಿ : Hindi Divas celebration :ಹಿಂದಿ ದಿವಸ್​ ಆಚರಣೆಗೆ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್​ ವಿರೋಧ : ನಮ್ಮ ನೆಲದಲ್ಲಿ ಬಿಜೆಪಿ ಕುತಂತ್ರಕ್ಕೆ ನಡೆಯಲ್ಲವೆಂದು ಟಾಂಗ್​

Will Aniket-Meera come back to Namanne Yuvarani serial: Here are the big updates.

Comments are closed.