ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರಾ ಧ್ರುವಂತ್? ಅಥವಾ ಡಬಲ್ ಎಲಿಮಿನೇಷನ್ ಇದೇನಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಟಿ ಶೋ ಎಲ್ಲರಿಗೂ ಇಷ್ಟ ಆಗಿದೆ. ಅದಕ್ಕೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸದ್ಯ 17 ಸ್ಪರ್ಧಿಗಳಿದ್ದು ಎಲ್ಲರೂ ತಮ್ಮ ಆಟವನ್ನು ಚೆನ್ನಾಗಿ ಆಡುತ್ತಿದ್ದಾರೆ. ಅಲ್ಲದೇ ಈ ಬಾರಿ ಕಳಪೆ ತೆಗೆದುಕೊಂಡು ಧ್ರುವಂತ್ ಜೈಲು ಸೇರಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ಕಾಲೇಜ್ ಆಗಿ ಬದಲಾಗಿತ್ತು. ಎಲ್ಲರೂ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಈ ಬಾರಿ ಧ್ರುವಂತ್ ಮನೆಯಿಂದ ಹೊರ ಹೋಗಬಹುದು ಎಂದು ಜನ ಅಂದಾಜಿಸಿದ್ದಾರೆ.
ಆರಕ್ಕೆ ಏರದ ಮೂರಕ್ಕೆ ಇಳಿಯದ ನಟ
ಧ್ರುವಂತ್ ಬಂದಾಗ ಎಲ್ಲರಿಗೂ ಒಂದು ನಂಬಿಕೆ ಇತ್ತು. ಇವರು ಚೆನ್ನಾಗಿ ಆಡ್ತಾರೆ ಅಂತ. ಅದಕ್ಕೆ ಜನ ಇವರನ್ನು ಒಂಟಿ ಎಂದು ಗುರುತಿಸಿ ಕಳಿಸಿದ್ದರು. ಆದ್ರೆ ಜನರ ನಂಬಿಕೆ ಸುಳ್ಳಾಗಿದೆ. ಧ್ರುವಂತ್ ಅಷ್ಟಾಗಿ ಆಡುತ್ತಿಲ್ಲ. ಅಲ್ಲದೇ ಬೇಗ ಎಮೋಷನಲ್ ಆಗಿ ಅತ್ತು ಬಿಡ್ತಾರೆ. ಅಲ್ಲದೇ ಗೇಮ್ಗಳನ್ನೂ ಅಷ್ಟು ಚೆನ್ನಾಗಿ ಆಡಲ್ಲ.
ಸೋಲು ಒಪ್ಪಿಕೊಳ್ಳುವ ನಟ
ಇನ್ನು ಕಾಲೇಜ್ ಥೀಮ್ನಲ್ಲಿ ಆಟವಾಡಿದ್ದ ಧ್ರುವಂತ್ ಅವರ ಟೀಮ್ಗೆ ಇಬ್ಬರನ್ನು ಡಿಬಾರ್ ಮಾಡಬೇಕು ಎಂದು ಹೇಳ್ತಾರೆ. ಎಲ್ಲರೂ ಸೇರಿ ಧ್ರುವಂತ್ ಮತ್ತು ಚಂದ್ರಪ್ರಭಾ ಅವರನ್ನು ಆಯ್ಕೆ ಮಾಡ್ತಾರೆ. ಇಬ್ಬರೂ ಸಹ ಹೌದು ನಮ್ಮದೇ ತಪ್ಪು ಎಂದು ಸೋಲು ಒಪ್ಪಿಕೊಳ್ತಾರೆ. ಅದಕ್ಕೆ ಮನೆಯವರೆಲ್ಲಾ ಬೇಸರ ಮಾಡಿಕೊಂಡ್ರು.
ಧ್ರುವಂತ್ ಹೋಗ್ತಾರಾ?
ಈ ಬಾರಿ ಧ್ರುವಂತ್ ಅವರು ನಾಮಿನೇಟ್ ಆಗಿದ್ದಾರೆ. ಅದಕ್ಕೆ ಈ ಬಾರಿ ಧ್ರುವಂತ್ ಎಲಿಮಿನೇಷನ್ ಆಗಬಹುದು ಎಂದು ಜನ ಊಹಿಸಿದ್ದಾರೆ. ಜನಗಳ ಪ್ರಕಾರ ಈ ಬಾರಿ ಧ್ರುವಂತ್ ಹೋಗಬಹುದು. ಅದಕ್ಕೆ ನಾವು ಭಾನುವಾರದವರೆಗೆ ಕಾಯಬೇಕು.
ಡಬಲ್ ಎಲಿಮಿನೇಷನ್ ಇದೇನಾ?
ಅಲ್ಲದೇ ಕಳೆದ ವಾರ ದೀಪಾವಳಿ ಗಿಫ್ಟ್ ಎಂದು ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಆದ ಕಾರಣ ಈ ಬಾರಿ ಇಬ್ಬರು ಎಲಿಮಿನೇಷನ್ ಆಗುವ ಸಾಧ್ಯತೆ ಇದೆ. ಸದ್ಯ ಬಿಗ್ ಬಾಸ್ ಪ್ರೇಕ್ಷಕರಿಗೆ ಒಳ್ಳೆ ಮನರಂಜನೆ ನೀಡ್ತಾ ಇದೆ. ಜನ ಸಹ ದಿನ ನೋಡ್ತಾ ಇದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡ್ತಾ ಇದ್ದಾರೆ. ನೋಡೋಣ ಈ ಬಾರಿ ಯಾರು ಹೋಗ್ತಾರೆ ಅಂತ.



