ಭಾನುವಾರ, ಏಪ್ರಿಲ್ 27, 2025
HomeCinemaವಿಶ್ವಕಪ್‌ 2023, ಭಾರತ - ಆಸ್ಟ್ರೇಲಿಯಾ ಪಂದ್ಯ : ವೀಕ್ಷಕ ವಿವರಣೆ ಹೇಳ್ತಾರೆ ಡಿಬಾಸ್‌ ದರ್ಶನ್‌...

ವಿಶ್ವಕಪ್‌ 2023, ಭಾರತ – ಆಸ್ಟ್ರೇಲಿಯಾ ಪಂದ್ಯ : ವೀಕ್ಷಕ ವಿವರಣೆ ಹೇಳ್ತಾರೆ ಡಿಬಾಸ್‌ ದರ್ಶನ್‌ ತೂಗುದೀಪ್‌

- Advertisement -

World Cup 2023 Final India Vs Australia : ವಿಶ್ವಕಪ್‌ 2023 ಫೈನಲ್‌ ಪಂದ್ಯಕ್ಕಾಗಿ ವಿಶ್ವವೇ ಕಾತರವಾಗಿದೆ. ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ವಿರುದ್ದದ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಡಿಬಾಸ್‌ ದರ್ಶನ್‌ ತೂಗುದೀಪ್‌ (D Boss Darshan Toogudeep) ಕಾಣಿಸಿಕೊಳ್ಳಲಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಭಾರತ ಮೂರನೇ ಬಾರಿಗೆ ವಿಶ್ವಕಪ್‌ ಗಲ್ಲುವ ಎಲ್ಲಾ ಅವಕಾಶಗಳನ್ನು ಪಡೆದುಕೊಂಡಿದೆ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ರೋಹಿತ್‌ ಪಡೆ ವಿಶ್ವದಾಖಲೆಯನ್ನು ಬರೆಯಲಿದೆ.

World Cup 2023 India vs Australia Match Spectator Commentary by D Boss Darshan Thoogudeepa
Image Credit to Original Source

೨೦ ವರ್ಷಗಳ ಹಿಂದೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯಾವಳಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಗೆದ್ದಿತ್ತು. ಆದ್ರೆ ಇದೀಗ ಭಾರತಕ್ಕೆ ಹಿಂದಿನ ಸೇಡನ್ನು ತೀರಿಸಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್‌ ಫೈನಲ್‌ ? ನಿವೃತ್ತಿ ಪಡೆಯುತ್ತಾರಾ ರೋಹಿತ್‌ ಶರ್ಮಾ

ಈ ನಡುವಲ್ಲೇ ಸ್ಟಾರ್‌ ಸ್ಪೋರ್ಟ್‌ ಕನ್ನಡ ವೀಕ್ಷಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸ್ಯಾಂಡಲ್‌ವುಡ್‌ನ ಖ್ಯಾತನಟ ಡಿಬಾಸ್‌ ದರ್ಶನ್‌ ತೂಗುದೀಪ್‌ ಒಂದು ಸ್ಟಾರ್‌ ಸ್ಪೋರ್ಟ್‌ ಕನ್ನಡ ವಾಹಿನಿಯ ಮೂಲಕ ವೀಕ್ಷಕ ವಿವರಣೆಯನ್ನು ನೀಡಲಿದ್ದಾರೆ. ಈ ಕುರಿತು ಸ್ಟಾರ್‌ಸ್ಪೋರ್ಟ್‌ ಕನ್ನಡ ವಾಹಿನಿ ಟ್ವೀಟ್‌ ಮಾಡಿದೆ.

ಇದನ್ನೂ ಓದಿ : ವಿಶ್ವಕಪ್ 2023 ಫೈನಲ್: ಭಾರತ Vs ಆಸ್ಟ್ರೇಲಿಯಾ ಪಂದ್ಯ, ಬೆಳಗ್ಗೆ 7 ಗಂಟೆಯಿಂದ ನೇರಪ್ರಸಾರ

ಈ ಬಾರಿಯ ವಿಶ್ವಕಪ್‌ ಭಾರತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಟಾರ್‌ಸ್ಪೋರ್ಟ್‌ ವಿಭಿನ್ನವಾಗಿ ವೀಕ್ಷಕ ವಿವರಣೆಯನ್ನು ನೀಡುತ್ತಿದೆ. ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಶಿವರಾಜ್‌ ಕುಮಾರ್‌ ವೀಕ್ಷಕರ ವಿವರಣೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ದರ್ಶನ್‌ ತೂಗುದೀಪ್‌ ಕಾಣಿಸಿಕೊಳ್ಳುತ್ತಿದ್ದಾರೆ.

World Cup 2023 India vs Australia Match Spectator Commentary by D Boss Darshan Thoogudeepa
Image Credit to Original Source

ಸ್ಟಾರ್‌ಸ್ಪೋರ್ಟ್‌ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ದರ್ಶನ್‌ ತೂಗುದೀಪ್‌ ಅವರಿಗೆ ಡಿ ಬಾಸ್‌ ಎಂದು ಬರೆದಿರುವ ಟೀ ಶರ್ಟ್‌ ನೀಡಲಾಗಿದೆ. ಭಾರತ ತಂಡದ ಜೆರ್ಸಿಯಂತಿರುವ ಟೀ ಶರ್ಟ್‌ ಧರಿಸಿ ದರ್ಶನ್‌ ತೂಗುದೀಪ್‌ ಇಂದು ವೀಕ್ಷಕ ವಿವರಣೆ ನೀಡಲಿದ್ದಾರೆ. ಈ ಮೂಲಕ ಅವರು ಭಾರತ ತಂಡದ ಗೆಲುವಿಗೆ ಚಿಯರ್‌ ಅಪ್‌ ಮಾಡಲಿದ್ದಾರೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಶತಕ ವಿಶ್ವದಾಖಲೆ : ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೀಗೆ ಹೇಳಿದ್ಯಾಕೆ ?

ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ದೇಶದಾದ್ಯಂತ ದೇವಸ್ಥಾನಗಳಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇನ್ನು ವಿಶ್ವಕಪ್ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಹಲವು ಕಡೆಗಳಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಲಾಗುತ್ತಿದೆ.

World Cup 2023 India vs Australia Match Spectator Commentary by D Boss Darshan Thoogudeepa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular