ರೋಹಿತ್‌ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್‌ ಫೈನಲ್‌ ? ನಿವೃತ್ತಿ ಪಡೆಯುತ್ತಾರಾ ರೋಹಿತ್‌ ಶರ್ಮಾ

ವಿರಾಟ್‌ ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕನಾಗಿರುವ ರೋಹಿತ್‌ ಶರ್ಮಾಗೆ (Rohit Sharma) ವಿಶ್ವಕಪ್‌ ಕಪ್‌ ಫೈನಲ್‌ ಕೊನೆಯ ಐಸಿಸಿ ಪಂದ್ಯಾವಳಿಯಾಗುವ ಸಾಧ್ಯತೆಯಿದೆ. ಹಾಗಾದ್ರೆ ರೋಹಿತ್‌ ಶರ್ಮಾ ಮುಂದಿನ ಭವಿಷ್ಯವೇನು ಅನ್ನೋ ಪ್ರಶ್ನೆ ಎದುರಾಗಿದೆ.

World Cup 2023 Final : ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅತೀ ಹೆಚ್ಚು ಪ್ರಶಸ್ತಿಯನ್ನು ಗೆಲ್ಲಿಸಿ ಕೊಟ್ಟ ನಾಯಕ ರೋಹಿತ್‌ ಶರ್ಮಾ (Rohit Sharma) . ವಿರಾಟ್‌ ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕನಾಗಿರುವ ರೋಹಿತ್‌ ಶರ್ಮಾಗೆ ವಿಶ್ವಕಪ್‌ ಕಪ್‌ ಫೈನಲ್‌ ಕೊನೆಯ ಐಸಿಸಿ ಪಂದ್ಯಾವಳಿಯಾಗುವ ಸಾಧ್ಯತೆಯಿದೆ. ಹಾಗಾದ್ರೆ ರೋಹಿತ್‌ ಶರ್ಮಾ ಮುಂದಿನ ಭವಿಷ್ಯವೇನು ಅನ್ನೋ ಪ್ರಶ್ನೆ ಎದುರಾಗಿದೆ.

ರೋಹಿತ್‌ ಶರ್ಮಾ. ಸದ್ಯ ಟೀಂ ಇಂಡಿಯಾದ ನಾಯಕ. ಪ್ರಮುಖ ಐಸಿಸಿ ಟ್ರೋಫಿಯನ್ನು ಗೆಲ್ಲುವುದಕ್ಕೆ ಸಾಧ್ಯವಾಗದೇ ಇದ್ರೂ ಕೂಡ ಭಾರತ ತಂಡವನ್ನು ರೋಹಿತ್‌ ಶರ್ಮಾ ಸಮರ್ಥವಾಗಿ ಮುನ್ನೆಡೆಸಿದ್ದಾರೆ. ಸದ್ಯ ಭಾರತ ತಂಡ ವಿಶ್ವಕಪ್‌ ಫೈನಲ್‌ಗೆ ಏರಲು ರೋಹಿತ್‌ ಶರ್ಮಾ ಕೊಡುಗೆಯೂ ಇದೆ. ಆದರೆ ವಿಶ್ವಕಪ್‌ ಫೈನಲ್‌ ಹೊತ್ತಲ್ಲೇ ರೋಹಿತ್‌ ಶರ್ಮಾ ನಿವೃತ್ತಿಯ ಮಾತು ಕೇಳಿಬಂದಿದೆ.

Rohit Sharma last ICC tournament will be the World Cup 2023 final Will Rohit Sharma retire
Image Credit to Original Source

ರೋಹಿತ್‌ ಶರ್ಮಾ ಅವರು ಸುದೀರ್ಘ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಲು ಅವರಿಗೆ ವಯಸ್ಸು ತೊಂದರೆಯನ್ನು ನೀಡುತ್ತಿದೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ಸರಣಿಗೂ ಮೊದಲೇ ರೋಗಿತ್‌ ಶರ್ಮಾ ಅವರ ಭವಿಷ್ಯದ ಕುರಿತು ಬಿಸಿಸಿಐ ಚರ್ಚೆ ನಡೆಸಲಿದೆ ಎಂದು ಇನ್‌ಸೈಡ್‌ ಸ್ಪೋರ್ಟ್ಸ್‌ ವರದಿ ಮಾಡಿದೆ ಅಲ್ಲದೇ 2024 ಎ T20 ವಿಶ್ವಕಪ್ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಭವಿಷ್ಯದ ನಿರ್ಧಾರ ಮಹತ್ವದ್ದಾಗಿದೆ.

ಇದನ್ನೂ ಓದಿ : ಐಪಿಎಲ್ 2024 : ನಿವೃತ್ತಿ ಘೋಷಿಸಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರ

ಏಕದಿನ ವಿಶ್ವಕಪ್‌ ಫೈನಲ್‌ಗೂ ಮೊದಲೇ ರೋಹಿತ್‌ ಶರ್ಮಾ ಅವರು ಸುದ್ದಿಗೋಷ್ಠಿಯನ್ನು ನಡೆಸಿ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ರೋಹಿತ್‌ ಶರ್ಮಾ ಯಾವುದೇ ಒತ್ತಡದಲ್ಲಿ ಇಲ್ಲದಂತೆ ಕಂಡು ಬಂದಿದ್ದಾರ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರೂ ಕೂಡ 2024 ರ ಟಿ ಟಿ 20 ವಿಶ್ವಕಪ್‌ನಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಾರಾ ಅನ್ನೋದಕ್ಕೆ ಸ್ಪಷ್ಟನೆಯನ್ನು ಕೊಟ್ಟಿಲ್ಲ.

ಭಾರತ ತಂಡ ಸದ್ಯ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಅಲ್ಲದೇ T20 ವಿಶ್ವಕಪ್ 2024 ಮತ್ತು ICC ಚಾಂಪಿಯನ್ಸ್ ಟ್ರೋಫಿ 2025ಗೆ ತಂಡವನ್ನು ಸಿದ್ದಪಡಿಸಬೇಕಾಗಿದೆ. ಸದ್ಯ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಭಾರತೀಯ ತಂಡದಲ್ಲಿನ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಒಂದು ವರ್ಷದ ಅವಧಿಯಲ್ಲಿ ಟಿ೨೦ ಫಾರ್ಮೆಟ್‌ಗೆ ತಂಡ ಸಿದ್ದವಾಗಬೇಕಾಗಿದೆ.

ಇದನ್ನೂ ಓದಿ : ವಿಶ್ವಕಪ್ 2023 ತಂಡ ಪ್ರಕಟ : ವಿರಾಟ್ ಕೊಹ್ಲಿ ನಾಯಕ, ರೋಹಿತ್‌ ಶರ್ಮಾಗಿಲ್ಲ ಸ್ಥಾನ

ರೋಹಿತ್‌ ಶರ್ಮಾ ಅವರ ವಯಸ್ಸು 37 ದಾಟಿದೆ. ಕ್ರಿಕೆಟ್‌ನಲ್ಲಿ ಕನಿಷ್ಟ 3 ವರ್ಷಗಳ ಕಾಲ ಮುಂದುವರಿಯಬಹುದು. ಆದರೆ ಭಾರತ ತಂಡಕ್ಕೆ ಹೊಸ ನಾಯಕನ ಆಯ್ಕೆ ಅನಿವಾರ್ಯ. ಮುಂದಿನ ಮೂರು ವರ್ಷಗಳ ಕಾಲ ರೋಹಿತ್‌ ಶರ್ಮಾ ಮುಂದುವರಿಯೋದಕ್ಕೆ ಅವರ ಫಾರ್ಮ್‌ ಕೊರತೆ ಕೂಡ ಎದ್ದು ಕಾಣುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ರೋಹಿತ್‌ ಶರ್ಮಾ ಟೆಸ್ಟ್‌ ಆಡುವುದನ್ನು ಮುಂದುವರಿಸುವ ಸಾಧ್ಯತೆ ತೀರಾ ಕಡಿಮೆ.

Rohit Sharma last ICC tournament will be the World Cup 2023 final Will Rohit Sharma retire
Image Credit to Original Source

ಅಲ್ಲದೇ ಏಕದಿನ ಪಂದ್ಯಾವಳಿಯಿಂದ ದೂರ ಉಳಿದ ಟಿ20 ಪಂದ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ. ಈ ಹಿಂದೆ ಮಹೇಂದ್ರ ಸಿಂಗ್‌ ಧೋನಿ ಅವರು ಕೂಡ 2 ವಿಶ್ವಕಪ್‌ ಗೆದ್ದ ಬೆನ್ನಲ್ಲೇ ನಾಯಕತ್ವವನ್ನು ತ್ಯೆಜಿಸಿದ್ದರು. ಇದೇ ಹಾದಿಯನ್ನೇ ರೋಹಿತ್‌ ಶರ್ಮಾ ಕೂಡ ಅನುಸರಿಸುವ ಸಾಧ್ಯತೆಯಿದೆ.

ರೋಹಿತ್‌ ಶರ್ಮಾಗೆ ಕೊನೆಯ ಅವಕಾಶ ?

2024ರ T20 ವಿಶ್ವಕಪ್‌ಗೂ ಮೊದಲೇ ಅವರು ಭಾರತ ತಂಡ ನಾಯಕತ್ವದಿಂದ ಕೆಳಗೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ವಿಶ್ವಕಪ್‌ ಫೈನಲ್‌ ರೋಹಿತ್‌ ಶರ್ಮಾ ಅವರಿಗೆ ಕೊನೆಯ ಐಸಿಸಿ ಪಂದ್ಯಾವಳಿ ಆಗುವ ಸಾಧ್ಯತೆಯಿದೆ. ರೋಹಿತ್‌ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗ್ತಾರಾ ? ಇಲ್ಲ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರಾ ಅನ್ನೋ ಇನ್ನೂ ನಿರ್ಧಾರವಾಗಿಲ್ಲ.

ವಿಶ್ವಕಪ್‌ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಜೊತೆಗೆ ಚರ್ಚಿಸುವ ಆಲೋಚನೆ ಇದೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಈ ಹಿಂದೆ ಹೇಳಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದಲೂ ರೋಹಿತ್‌ ಶರ್ಮಾ ಸತತವಾಗಿ ಗಾಯದ ಸಮಸ್ಯೆಯನ್ನು ಎದುರಿಸಿದ್ದರು. ಇದೇ ಕಾರಣದಿಂದಾಗಿಯೇ ಅವರು ತಂಡದಿಂದ ದೂರ ಉಳಿಯಬಹುದು.

ಇದನ್ನೂ ಓದಿ : ವಿಶ್ವಕಪ್ 2023 ಫೈನಲ್: ಭಾರತ Vs ಆಸ್ಟ್ರೇಲಿಯಾ ಪಂದ್ಯ, ಬೆಳಗ್ಗೆ 7 ಗಂಟೆಯಿಂದ ನೇರಪ್ರಸಾರ

ಪ್ರಸ್ತುತ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. 10 ಪಂದ್ಯಗಳನ್ನು ಆಡಿರುವ ರೋಹಿತ್‌ ಶರ್ಮಾ 55 ಸರಾಸರಿ ಮತ್ತು 124.15 ಸ್ಟ್ರೈಕ್ ರೇಟ್‌ನಲ್ಲಿ 550 ರನ್ ಗಳಿಸಿದ್ದಾರೆ. 2023ರಲ್ಲಿ ರೋಹಿತ್‌ ಶರ್ಮಾ 33 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 16 ಐಪಿಎಲ್ ಪಂದ್ಯಗಳನ್ನ ಆಡಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಫಿಟ್‌ ಆಗಿದ್ದೇನೆ ಎಂದು ಹೇಳಿದ್ದಾರೆ ಶರ್ಮಾ.

ಕಳೆದ 2 ವರ್ಷಗಳಲ್ಲಿ ರೋಹಿತ್ ಶರ್ಮಾ ಟಿ20ಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ರೋಹಿತ್‌ ಶರ್ಮಾ ಕಳೆದ 2  ವರ್ಷಗಳಲ್ಲ 31 ಟಿ 20 ಪಂದ್ಯಗಳನ್ನು ಆಡಿದ್ದು 767 ರನ್‌ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಒಳಗೊಂಡಿದೆ. ಇನ್ನು 2022ರ ಐಪಿಎಲ್‌ ಪಂದ್ಯಾವಳಿಯಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ್ದು, 268ರನ್‌ ಗಳಿಸಿದ್ರೆ, 2023ರ ಐಪಿಎಲ್‌ನಲ್ಲಿ ಒಟ್ಟು  16 ಪಂದ್ಯಗಳ ಪೈಕಿ 332ರನ್‌ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಒಳಗೊಂಡಿದೆ.

Rohit Sharma last ICC tournament will be the World Cup 2023 final Will Rohit Sharma retire
Image Credit to Original Source

ಆದರೆ ರೋಹಿತ್‌ ಶರ್ಮಾ ಫಾರ್ಮ್‌ ನೋಡಿದ್ರೆ ಅವರು ಟಿ೨೦ ತಂಡಕ್ಕೆ ಮರಳುವುದು ಅನುಮಾನ. ಅದ್ರಲ್ಲೂ ಐಪಿಎಲ್‌ ನಲ್ಲಿಯೂ ಹೇಳಿಕೊಳ್ಳುವಂತಹ ಬ್ಯಾಟಿಂಗ್‌ ಪ್ರದರ್ಶನ ನೀಡಿಲ್ಲ. T20I ಪಂದ್ಯಗಳನ್ನು ಆಡುವುದನ್ನು ಮುಂದುರಿಸಲಿದ್ದಾರೆಯೇ ಅನ್ನೋದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮೊದಲೇ ನಿರ್ಧಾರವಾಗಲಿದೆ.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡುತ್ತಿರುವ ಬಹುತೇಕ ಆಟಗಾರರಿಗೆ ಆಸ್ಟ್ರೇಲಿಯಾ ಪ್ರವಾಸದಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ರೋಹಿತ್‌ ಶರ್ಮಾ ದೂರ ಉಳಿಯುವ ಸಾಧ್ಯತೆಯಿದೆ. ಆದರೆ ದಕ್ಷಿಣ ಆಫ್ರಿಕಾ ಸರಣಿಯ ವೇಳೆಯಲ್ಲಿ ರೋಹಿತ್‌ ಶರ್ಮಾ ಭವಿಷ್ಯ ನಿರ್ಧಾರವಾಗಲಿದೆ.

ಒಂದೊಮ್ಮೆ ರೋಹಿತ್‌ ಶರ್ಮಾ ನಾಯಕತ್ವದಿಂದ ಕೆಳಗಿಳಿದ್ರೆ ಭಾರತ ತಂಡದ ನಾಯಕ ಯಾರು ಅನ್ನೋ ಪ್ರಶ್ನೆಯೂ ಎದ್ದಿದೆ. ಸದ್ಯ ಟಿ೨೦ ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಮುನ್ನೆಡೆಸುತ್ತಿದ್ದಾರೆ. ಆದರೆ ಪಾಂಡ್ಯ ಗಾಯದ ಸಮಸ್ಯೆಯ ಕಾರನಕ್ಕೆ ಕೆಎಲ್‌ ರಾಹುಲ್‌ ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾದ ಉಪನಾಯಕನಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಎಲ್‌ ರಾಹುಲ್‌ ಮೂರು ಮಾದರಿಯ ಕ್ರಿಕೆಟ್‌ಗೆ ನಾಯಕನಾಗುವ ಸಾಧ್ಯತೆಯಿದೆ.

Rohit Sharma last ICC tournament will be the World Cup 2023 final? Will Rohit Sharma retire ?

Comments are closed.