World Father’s Day‌ : ವಿಶ್ವ ಅಪ್ಪಂದಿರ ದಿನದಂದು ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್‌ (World Father’s Day‌ ) ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದಲೋಕದಿಂದ ದೂರ ಉಳಿದಿದ್ದಾರೆ. ಇನ್ನು ತಮ್ಮ ಮಕ್ಕಳು ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಸಿನಿರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ನಟಿ ರಾಧಿಕಾ ವರ್ಡ್‌ ಫಾದರ್‌ ಡೇ ದಿನದಂದು ತಮ್ಮ ತಂದೆ ಬಗ್ಗೆ ಇರುವ ಪ್ರೀತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ನಾನು ಯಾವಾಗಲೂ ಅಪ್ಪನ ಹುಡುಗಿ, ಯಾವಾಗಲೂ ಎಲ್ಲದಕ್ಕೂ ಅವರ ಬಳಿಗೆ ಓಡುತ್ತೇನೆ.. (ಅಮ್ಮನಿಂದ ಅನುಮತಿ ನಿರಾಕರಿಸಬಹುದು , ಸಲಹೆಗಾಗಿ, ಕೆಲವೊಮ್ಮೆ ಸರಳವಾಗಿ ಮಾತನಾಡಲು) ಅವನು ನನ್ನ ಮಾರ್ಗದರ್ಶಿ, ನನ್ನ ಆಧಾರಸ್ತಂಭ, ನನ್ನ ನಾಯಕ !! ಆಯ್ರಾ ಮತ್ತು ಯಥರ್ವ್ ನನ್ನ ಪಪ್ಪಾ ಜೊತೆಗಿನ ಬಾಂಧವ್ಯವನ್ನು ಹಂಚಿಕೊಳ್ಳುವುದನ್ನು ನೋಡಲು ತುಂಬಾ ಸಂತೋಷವಾಗಿದೆ, ಅವರ ದಾದಾ ಜೊತೆಗೆ ಅಲ್ಲಿರುವ ಎಲ್ಲಾ ಅತ್ಯುತ್ತಮ ಅಪ್ಪಂದಿರಿಗೆ ತಂದೆಯ ದಿನದ ಶುಭಾಶಯಗಳು !!” ಎಂದು ವಿಶೇಷ ಸಾಲುಗಳ ಮೂಲಕ ತಂದೆ, ಮಕ್ಕಳು ಹಾಗೂ ಪತಿ ಯಶ್‌ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Geetha Govindam Team : ಗೀತಾ ಗೋವಿಂದ ನಿರ್ದೇಶಕನ ಜೊತೆ ಮತ್ತೆ ಕೈ ಜೋಡಿಸಿದ ವಿಜಯ್ ದೇವರಕೊಂಡ

ಇನ್ನು ಯಶ್‌ ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಕೆಜಿಎಫ್‌ 2 ಯಶಸ್ಸಿನ ನಂತರ ನಟ ಯಶ್‌ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್‌ ಸಿಗದೇ ಬೇಸರಗೊಂಡಿದ್ದಾರೆ. ಹಾಗೆಯೇ ತಮ್ಮ ಮೆಚ್ಚಿನ ನಟಿ ರಾಧಿಕಾ ಪಂಡಿತ್‌ ಸಿನಿಲೋಕಕ್ಕೆ ಯಾವಾಗ ರೀ ಎಂಟ್ರಿ ಕೋಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

World Father’s Day: Radhika Pandit shared a special photo on World Father’s Day

Comments are closed.