ಹಿರಿಯ ನಟಿ, ಬರಹಗಾರ್ತಿ ಭಾರ್ಗವಿ ನಾರಾಯಣ್ ಅವರು (Bhargavi Narayan) ಸೋಮವಾರ, ಫೆಬ್ರವರಿ 14 ರಂದು ಇಹಲೋಕ ತ್ಯಜಿಸಿದ್ದಾರೆ. ಪ್ರಮುಖ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದ ಅವರು, ರಂಗಭೂಮಿ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿ ಜನಪ್ರಿಯವಾಗಿದ್ದರು. ಚಂದನವನದ ಹಲವು ಗಣ್ಯರು ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 84 ವರ್ಷದ ಅವರು ವಯೋಸಜಹ ಕಾಯಿಲೆಗಳಿಂದ ಬಳಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರ್ಗವಿ ನಾರಾಯಣ್ ಅವರು 1960 ರ ಆಸುಪಾಸಿನಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಮಕ್ಕಳು ಸಲ ಕನ್ನಡ ಚಿತ್ರರಂಗ, ರಂಗಭೂಮಿಯಲ್ಲಿ ಅತ್ಯಂತ ಸಕ್ರಿಯರಾಗಿದ್ದು ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಅವರು ಮನ್ನಣೆ ಪಡೆದ ಕಲಾವಿದರಾಗಿದ್ದಾರೆ. . ‘ಪ್ರೊ. ಹುಚ್ಚುರಾಯ’ಎಂಬ ಚಲನಚಿತ್ರದಲ್ಲಿ ನಿರ್ವಹಿಸಿದ ಪಾತ್ರಕ್ಕೆ ಭಾರ್ಗವಿ ನಾರಾಯಣ್ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನೂ ಸಹ ಪ್ರದಾನ ಮಾಡಲಾಗಿತ್ತು. ಬರಹಗಾರರಾಗಿಯೂ ಗುರುತಿಸಿಕೊಂಡಿದ್ದ ಭಾರ್ಗವಿ ನಾರಾಯಣ್ ಅವರು 2012ರಲ್ಲಿ ‘ನಾನು, ಭಾರ್ಗವಿ’ಎಂಬ ಹೆಸರಿನ ಆತ್ಮಕಥನ ಬರೆದಿದ್ದರು. ಈ ಆತ್ಮಕಥನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು.
ಹಿರಿಯ ನಟಿ, ರಂಗಭೂಮಿ ಕಲಾವಿದೆ ಶ್ರೀಮತಿ ಭಾರ್ಗವಿ ನಾರಾಯಣ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಕಿರುತರೆಗೆ ತುಂಬಲಾರದ ನಷ್ಟವಾಗಿದೆ. ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಪಾಲಿನ ಪ್ರೀತಿಯ ಅಜ್ಜಿಯಾಗಿದ್ದ ಶ್ರೀಮತಿ ಭಾರ್ಗವಿ ನಾರಾಯಣ್ ಅವರು ಟಿ.ಎನ್.ಸೀತಾರಾಮ್ ಅವರ ಮುಕ್ತ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದ ಮೂಲಕ ಮನೆ ಮಾತಾಗಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂ ಮಾಡಿ ಸಂತಾಪ ಸೂಚಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮ ಅದ್ಭುತ ಪ್ರತಿಭೆಯಿಂದ ಛಾಪು ಮೂಡಿಸಿದ ಹಿರಿಯ ರಂಗ ಕಲಾವಿದರು, ನಮ್ಮ ಕನ್ನಡದ ಹೆಮ್ಮೆ ಭಾರ್ಗವಿ ನಾರಾಯಣ್ ಅವರ ಅಗಲಿಕೆಯ ಸುದ್ದಿ ನೋವು ತಂದಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ-ಹಿತೈಷಿವರ್ಗ, ಕಲಾವಿದ ವೃಂದಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಮ್ಮ ಪ್ರಾರ್ಥನೆ. ಓಂ ಶಾಂತಿ. ಎಂದು ಹೊಂಬಾಳೆ ಫಿಲ್ಮ್ಸ್ ಕೂ ಮಾಡಿ ಸಂತಾಪ ಸೂಚಿಸಿದೆ.
’ಎರಡು ಕನಸು’ ಖ್ಯಾತಿಯ ಹಿರಿಯ ಸ್ಯಾಂಡಲ್ ವುಡ್ ನಟಿ ’ಭಾರ್ಗವಿ ನಾರಾಯಣ್’ ಇನ್ನಿಲ್ಲ! ಕರ್ನಾಟಕ ರಾಜ್ಯ ನಾಟಕ ಆಕ್ಯಾಡಮಿ ಸದಸ್ಯರಾಗಿ,ಅನೇಕ ನಾಟಕಗಳನ್ನ ರಚಿಸಿ ನಿರ್ದೇಶಿಸಿ,ಅಭಿನಯಿಸಿ..ಒಟ್ಟಾರೆ ಸಾಹಿತ್ಯ,ಕಲೆಯೊಂದಿಗೆ ರಂಗಭೂಮಿಯಲ್ಲಿ ಬೆಳ್ಳಿತೆರೆ(ಸಿನೆಮಾ) ಕಿರುತೆರೆಗಳ ಮೂಲಕ ಕಲಾ ಸೇವೆ ಗೈದು ತಮ್ಮ ಇಡೀ ಪರಿವಾರವನ್ನೇ ಕಲೆಗೆ ಸಮರ್ಪಿಸಿದ್ದ ಹಿರಿಯ ಕಲಾವಿದೆಗೆ ”ಭಾವಪೂರ್ಣ ನಮನಗಳು!” ಎಂದು ಸಿ.ಪಿ.ಕುಲಕರ್ಣಿ ಎಂಬುವವರು ಕೂ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2
(Writer Actress Bhargavi Narayan Dies at 84 Sandalwood)