ಸೋಮವಾರ, ಜೂನ್ 16, 2025
HomeCinemaVaishali Takkar Suicide : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ : ಡೆತ್...

Vaishali Takkar Suicide : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ : ಡೆತ್ ನೋಟ್ ನಲ್ಲಿದೆ ಸಾವಿನ ಅಸಲಿ ಕಾರಣ

- Advertisement -

ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ (Vaishali Takkar Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವೈಶಾಲಿ ಟಕ್ಕರ್ (Yeh Rishta Kya Kehlata Hai) ಸಾವಿನ ಬೆನ್ನಲ್ಲೇ ಆಕೆಯ ಡೆತ್ ನೋಟ್ ಪತ್ತೆಯಾಗಿದ್ದು, ಆಕೆಯ ತನ್ನ ಸಾವಿನ ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ಅಷ್ಟಕ್ಕೂ ಆಕೆಯ ಸಾವಿನ ಕಾರಣ ಏನು ಅನ್ನೋ ಮಾಹಿತಿ ಇಲ್ಲಿದೆ.

ವೈಶಾಲಿ ಟಕ್ಕರ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಸಸುರಲ್ ಸಿಮಾರ್ ಕಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. 29 ವರ್ಷದ ವೈಶಾಲಿ ಟಕ್ಕರ್ ಮೃತದೇಹ ಇಂದೋರ್ ನಲ್ಲಿ ಇರುವ ಆಕೆ ಮನೆಯಲ್ಲಿ ಮತ್ತೆಯಾಗಿತ್ತು. ಅಲ್ಲದೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಈ ಕುರಿತು ಇಂದೋರ್ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಎಂ ರೆಹಮಾನ್ ಅವರು ವೈಶಾಲಿ ಸಾವಿನ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ನಟಿಯ ಆತ್ಮಹತ್ಯೆ ಪತ್ರದಲ್ಲಿ ಆಕೆಯ ಮಾಜಿ ಗೆಳೆಯನ ಬಗ್ಗೆ ಉಲ್ಲೇಖಿಸಲಾಗಿದೆ. ತನ್ನ ಮಾಜಿ ಗೆಳೆಯನಿಂದ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದ ಎಂದು ನಟಿ ಆರೋಪಿಸಿದ್ದಾಳೆ. ಆಕೆಯ ನೆರೆ ಹೊರೆಯವರು ಕೂಡ ತಲೆ ಮರೆಯಿಸಿಕೊಂಡಿದ್ದು, ಪೊಲೀಸರು ಅವರ ಹುಡುಕಾಟಕ್ಕೆ ಮುಂದಾಗಿದ್ದಾರೆ.ವೈಶಾಲಿ ತನ್ನ ತಂದೆ ಮತ್ತು ಸಹೋದರನೊಂದಿಗೆ ಇಂದೋರ್ ನಿವಾಸದಲ್ಲಿ ವಾಸಿಸುತ್ತಿದ್ದಳು. ಆದರೆ ಆಕೆ ಒತ್ತಡದಲ್ಲಿ ಇದ್ದಳು ಎನ್ನುವುದು ನಮಗೆ ತಿಳಿದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ವೈಶಾಲಿ ಟಕ್ಕರ್ ಕಳೆದ ಐದು ದಿನಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ತಮಾಷೆಯಾಗಿ ನಡೆದು ಕೊಂಡಿದ್ದಾಳೆ. ಇನ್ನೊಂದು ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಆ ವಿಡಿಯೋದಲ್ಲಿವೈಶಾಲಿ ತನ್ನ ಸೀಲಿಂಗ್ ಫ್ಯಾನ್ ಅನ್ನು ಕ್ಲಿಕ್ ಮಾಡಿ “ಜಿಸ್ಕಾ ಬಂದ/ ಬಂದಿ ನಾ ಹೋ ವೋ ಪಂಖಾ ಘುಮಯೆ 🤓 #reels #shakalakaboomboom #funnyvideos #sunday (sic).” ಎಂದು ಬರೆದುಕೊಂಡಿದ್ದಳು.

ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ವೈಶಾಲಿ ಟಕ್ಕರ್ ಕೂಡ ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆಗೆ ಕೆಲಸ ಮಾಡಿದ್ದಳು. ಅಲ್ಲದೇ ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಈಕೆ ಸುಶಾಂತ್ ಸಿಂಗ್ ನನ್ನು ಕೊಲೆ ಮಾಡಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಆಕೆ ಒತ್ತಾಯಿಸಿದ್ದಳು. ಆದ್ರೀಗ ವೈಶಾಲಿ ಕೂಡ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆ.

ವೈಶಾಲಿ ಟಕ್ಕರ್ ಕಳೆದ ಒಂದು ವರ್ಷದ ಹಿಂದೆ ವೈದ್ಯರೊಬ್ಬರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಂತರ ಇಬ್ಬರೂ ಕೂಡ ಮದುವೆಯನ್ನು ಮುರಿದುಕೊಂಡಿದ್ದರು. ಇದೀಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೈಶಾಲಿ, ತಂದೆ ಹಾಗೂ ಸ್ನೇಹಿತರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ : Nayanthara: 4 ತಿಂಗಳ ಹಿಂದಲ್ಲ.. 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದೇವೆ.. ಏನಿದು ನಯನತಾರಾ ಅವಳಿ ಮಕ್ಕಳ ವಿವಾದಕ್ಕೆ ಟ್ವಿಸ್ಟ್

ಇದನ್ನೂ ಓದಿ : Vaishali Takkar : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

Yeh Rishta Kya Kehlata Hai Actress Vaishali Takkar Suicide Reason Revel

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular