Congress presidential election :  ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ.. ರಾಹುಲ್ ಗಾಂಧಿ ಮತಚಲಾಯಿಸೋದು ಎಲ್ಲಿ..?

ಬಳ್ಳಾರಿ :  Congress presidential election  ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಿರ್ಮಿಸಲಾಗಿರುವ 67 ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದೆ.

22 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೀತಿದ್ದು, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರ ಕ್ಷೇತ್ರದ ಶಶಿ ತರೂರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಎರಡು ದಶಕದ ಬಳಿಕ ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯೋದ್ಯಾರು ಅನ್ನೋ ಕುತೂಹಲ ತೀವ್ರಗೊಂಡಿದೆ. ಬೆಳಗ್ಗೆ 10ಗಂಟೆಯಿಂದಲೇ ಮತದಾನ ಶುರುವಾಗಿದ್ದು ಒಟ್ಟು 9000 ಕ್ಕೂ ಸದಸ್ಯರು ಮತ ಚಲಾಯಿಸಲಿದ್ದಾರೆ. ಸಂಜೆ 4 ಗಂಟೆವರೆಗಗೂ ಮತದಾನ ನಡೆಯಲಿದೆ.

ರಾಹುಲ್ ಎಲ್ಲಿ ಮತ ಚಲಾಯಿಸ್ತಾರೆ : ಅಂದಹಾಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದು. ರಾಹುಲ್ ಗಾಂಧಿ ಎಲ್ಲಿ ಮತಚಲಾವಣೆ ಮಾಡ್ತಾರೆ ಅನ್ನೋ ಪ್ರಶ್ನೆ ಎದ್ದಿತ್ತು. ಆದ್ರೆ ಕೆಪಿಸಿಸಿ ರಾಹುಲ್ ಗಾಂಧಿ ಮತ ಚಲಾಯಿಸೋದಕ್ಕಾಗೇ ತಾವು ಎಲ್ಲಿದ್ದಾರೋ ಅಲ್ಲೇ ಮತಕೇಂದ್ರವನ್ನ ತೆರೆದಿದ್ದಾರೆ. ಅಷ್ಟಕ್ಕೂ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ 40 ದಿನಕ್ಕೆ ಕಾಲಿಟ್ಟಿದ್ದು. ಬಳ್ಳಾರಿ ಸಂಗನ ಕಲ್ಲು ಬಳಿ ಇದೆ. ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಗೆ ಸಂಗನಕಲ್ಲು ಬಳಿ ಬ್ರೇಕ್ ನೀಡಲಾಗಿದೆ. ಇಂದು ಯಾವುದೇ ಯಾತ್ರೆ ಇರುವುದಿಲ್ಲ. ಅಲ್ದೆ, ರಾಹುಲ್ ಗಾಂಧಿ ವೋಟಿಂಗ್ ಸಲುವಾಗಿಯೇ ಸಂಗನಕಲ್ಲು ಬಳಿ ಮತಕೇಂದ್ರವನ್ನೂ ತೆರೆಯಲಾಗಿದೆ. ಇಲ್ಲೇ ರಾಹುಲ್ ಗಾಂಧಿ ಮತ ಚಲಾಯಿಸಲಿದ್ದಾರೆ. ಇನ್ನೊಂದೆಡೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೂ ಮತ ಕೇಂದ್ರ ತೆರೆಯಲಾಗಿದ್ದು ಇಲ್ಲಿನ ಕೈ ಸದಸ್ಯರು ಮತ ಚಲಾಯಿಸಲಿದ್ದಾರೆ. ನಾಡಿದ್ದು ಅಂದ್ರೆ ಅಕ್ಟೊಬರ್ 19 ರಂದು ಫಲಿತಾಂಶ ಹೊರ ಬೀಳಲಿದೆ.

ಇದನ್ನೂ ಓದಿ : Kamegouda No More : ಮನ್  ಕೀ  ಬಾತ್ ನಲ್ಲಿ  ಪ್ರಧಾನಿ ಮೋದಿಯವರ ಮೆಚ್ಚುಗೆ ಪಡೆದಿದ್ದ ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ

ಇದನ್ನೂ ಓದಿ : BJP MOCK RAHUL : ‘ಖತಂ.. ಟಾ ಟಾ ಬೈ ಬೈ’ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಲೇವಡಿ ಮಾಡಿದ್ದು ಹೀಗೆ

Congress presidential election Where will Rahul vote for election?

Comments are closed.