T20 World Cup 2022 : ಆಟಗಾರರಿಗೆ ಬಿಗ್ ರಿಲೀಫ್, ಕೋವಿಡ್ ಪಾಸಿಟಿವ್ ಬಂದರೂ ವಿಶ್ವಕಪ್‌ನಲ್ಲಿ ಆಡಬಹುದು

ಬ್ರಿಸ್ಬೇನ್: ಟಿ20 ವಿಶ್ವಕಪ್’ನಲ್ಲಿ (T20 World Cup 2022) ಆಡುತ್ತಿರುವ ಆಟಗಾರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಆಟಗಾರರಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡರೂ ಮೈದಾನಕ್ಕೆ ಇಳಿಯ ಬಹುದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council – ICC) ಹಾಗೂ ಆಸ್ಟ್ರೇಲಿಯಾ ಸರ್ಕಾರ ಕೋವಿಡ್ ಕುರಿತಾಗಿ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ಕಡ್ಡಾಯ ಕೋವಿಡ್ ಟೆಸ್ಟ್’ನಂತಹ ಯಾವುದೇ ನಿಯಮಗಳನ್ನು ಜಾರಿಗೊಳಿಸಲಾಗಿಲ್ಲ. ಹೀಗಾಗಿ ಆಟಗಾರನ್ನೊಬ್ಬನಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡರೂ ಆ ಆಟಗಾರ ಪಂದ್ಯದಲ್ಲಿ ಆಡಬಹುದಾಗಿದೆ (Covid positive players cal play in T20 World Cup).

“ಒಬ್ಬ ಆಟಗಾರನಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡರೂ, ಆತನಲ್ಲಿ ಆಡುವ ಸಾಮರ್ಥ್ಯ ಉಳಿದಿದ್ದರೆ ಆತ ಆಡಬಹುದು. ಆದರೆ ಮೈದಾನಕ್ಕಿಳಿಯುವ ಮುನ್ನ ಆತನ ಫಿಟ್ನೆಸ್ ಬಗ್ಗೆ ತಂಡದ ಮೆಡಿಕಲ್ ಟೀಮ್ ನಿರ್ಧರಿಸಬೇಕು. ಆದರೆ ಆ ರೀತಿ ಮೈದಾನಕ್ಕಿಳಿಯುವ ಆಟಗಾರ ಕೆಲ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆತ ಸಂಪೂರ್ಣ ಪಂದ್ಯದಲ್ಲಿ ಮಾಸ್ಕ್ ಧರಿಸಿಯೇ ಆಡಬೇಕು ಮತ್ತು ಸಹ ಆಟಗಾರರಿಂದ ಅಂತರ ಕಾಪಾಡಿಕೊಳ್ಳಬೇಕು” ಎಂದು ಐಸಿಸಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಇಂಗ್ಲೆಂಡ್’ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ್ತಿ ತಹಿಲಾ ಮೆಗ್ರಾತ್’ಗೆ ಕೋವಿಡ್ ಪಾಸಿಟಿವ್ ಕಾಣಸಿಕೊಂಡಿತ್ತು. ಆದರೂ ಭಾರತ ವಿರುದ್ಧದ ಫೈನಲ್’ನಲ್ಲಿ ಮೆಗ್ರಾತ್ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದರು.

ಕೋವಿಡ್ ಸಮಯದಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಕೆಲ ತಿಂಗಳುಗಳ ಹಿಂದೆ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸಿದ ಸರ್ಬಿಯಾದ ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಕ್ ಅವರಿಗೆ ಟೂರ್ನಿಯಲ್ಲಿ ಆಡುವ ಅವಕಾಶವನ್ನೇ ನೀಡಲಾಗಿರಲಿಲ್ಲ. ಆದರೆ ಇದೀಗ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಎಲ್ಲರೂ ವ್ಯಾಕ್ಸಿನ್ ಪಡೆದುಕೊಂಡಿರುವ ಕಾರಣ ಆಸ್ಟ್ರೇಲಿಯಾ ಸರ್ಕಾರ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಿದೆ.

ಐಸಿಸಿ ಟಿ20 ವಿಶ್ವಕಪ್’ನ (T20 World Cup 2022) ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ 55 ರನ್’ಗಳ ಆಘಾತಕಾರಿ ಸೋಲು ಕಂಡಿದೆ.

ಇದನ್ನೂ ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

ಇದನ್ನೂ ಓದಿ : Virat Kohli fitness report : ವಿರಾಟ್ ಕೊಹ್ಲಿ ಫಿಟ್ನೆಸ್ ‘ಕಿಂಗ್’, NCA ವರದಿಯಲ್ಲಿ ಕೊಹ್ಲಿ ಫಿಟ್ನೆಸ್ ಸೀಕ್ರೆಟ್ ರಿವೀಲ್

Covid positive players cal play in T20 World Cup 2022

Comments are closed.