Jacqueline Fernandez : ಐಟಂ ಸಾಂಗ್ ಗೆ ಬಂದವರು ಸಿನಿಮಾಗೆ ಕೊಟ್ರು ಸ್ಪೆಷಲ್ ಎಂಟ್ರಿ…! ಜಾಕ್ವಲಿನ್ ಬಗ್ಗೆ ಅನೂಪ್ ಭಂಡಾರಿ ಹೇಳಿದ್ದೇನು ಗೊತ್ತಾ..?!

ಐಟಂ ಸಾಂಗ್ ಗಾಗಿ ಸೊಂಟ ಬಳುಕಿಸಲು ಬಂದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಇದಕ್ಕಾಗಿ ಸಿದ್ಧತೆ ನಡೆದಿದೆ. ಸಿನಿಮಾದ ಐಟಂ ಸಾಂಗ್ ವೊಂದಕ್ಕಾಗಿ ಶ್ರೀ ಲಂಕಾ ಬೆಡಗಿ ಜಾಕ್ವಲಿನ್ ಹೆಜ್ಜೆ ಹಾಕಲು ಸ್ಯಾಂಡಲ್ ವುಡ್ ಗೆ ಆಗಮಿಸಿದ್ದಾರೆ.


ಐಟಂ ಸಾಂಗ್ ಗಾಗಿ ಬಂದ ಜಾಕ್ವಲಿನ್, ವಿಕ್ರಾಂತ್ ರೋಣಾ ಮೇಕಿಂಗ್‌ ನೋಡಿ ಫುಲ್ ಖುಷಿಯಾಗಿದ್ದಾರೆ. ಇಷ್ಟೇ ಇಲ್ಲ ಈ ಸಿನಿಮಾದಲ್ಲಿ ಜಾಕ್ವಲಿನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಇದನ್ನೂ ಓದಿ : ಚಿಯರ್ ಗರ್ಲ್ಸ್ ಗಳನ್ನು ಮಾಂಸದ ತುಂಡಿನಂತೆ ಬಳಸುತ್ತಾರೆ…! ಹೊರಬಿತ್ತು ಐಪಿಎಲ್ ಪಾರ್ಟಿಗಳ ಕರಾಳ ಸತ್ಯ…!!

ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಚಂದನವನಕ್ಕೆ ಸ್ವಾಗತ ಜಾಕ್ವಲಿನ್ ಫರ್ನಾಂಡಿಸ್. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ. ಶೀಘ್ರದಲ್ಲಿ ನಿಮ್ಮ ಪಾತ್ರದ ಹೆಸರು ಫರ್ಸ್ಟ್ ಲುಕ್ ರಿಲೀಸ್ ಮಾಡುತ್ತೇವೆ. ನಾಳೆ ಡಬ್ಬಿಂಗ್ ನಲ್ಲಿ ಸಿಗೋಣ ಎಂದಿದ್ದಾರೆ.

ವಿಕ್ರಾಂತ್ ರೋಣಾದ ಸ್ಪೆಶಲ್ ಪಾತ್ರದಲ್ಲಿ ಕಾಣಿಸಿಕೊಂಡ ಜಾಕ್ವಲಿನ್ ತಮ್ಮ ಪಾತ್ರಕ್ಕೆ ತಾವೇ ಸ್ವತಃ ಡಬ್ಬಿಂಗ್ ಮಾಡಲಿದ್ದು ಇದಕ್ಕಾಗಿ ಕನ್ನಡ ಕೂಡ ಕಲಿತಿದ್ದಾರಂತೆ.

ಇನ್ನು ಸುದೀಪ್ ಕೂಡ ಜಾಕ್ವಲಿನ್ ನಟನೆಗೆ,ಡ್ಯಾನ್ಸ್ ಮೆಚ್ಚಿಕೊಂಡಿದ್ದು ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದಕ್ಕೆ ಧನ್ಯವಾದ ಜಾಕ್ವಲಿನ್ ಫರ್ನಾಂಡಿಸ್. ನಿಮ್ಮ ನೃತ್ಯ ನನಗೂ ಒಂದೆರಡು ಸ್ಟೆಪ್ ಹಾಕಲು ಪ್ರೇರೇಪಿಸಿತು ಎಂದಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ವಿಕ್ರಾಂತ್ ರೋಣ ಮೇಕಿಂಗ್ ಸಖತ್ ಸದ್ದು ಮಾಡ್ತಿದ್ದು ರಿಲೀಸ್ ಗೆ ಕಾಯ್ತಿರೋ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

Comments are closed.