“ಯುವ” ಟೈಟಲ್‌ ನೋಡಿ ಭಾವುಕರಾದ ಅಪ್ಪು ಫ್ಯಾನ್ಸ್ : ಶೀರ್ಷಿಕೆಯಲ್ಲೇನಿದೆ ಗೊತ್ತಾ ?

ನಗುಮುಖದ ಸರದಾರ ಎಂದೇ ಪ್ರಖ್ಯಾತಿ ಪಡೆದಿರುವ ನಟ ಪುನೀತ್‌ ರಾಜ್‌ಕುಮಾರ್‌ ಅಗಲಿಕೆ ನೋವು ಇನ್ನು ಅಭಿಮಾನಿಗಳಲ್ಲಿ ಹಾಗೆ ಇದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಇನ್ನು ಮುಂದೆ ನೋಡಲು ಸಾಧ್ಯವಿಲ್ಲ ಎನ್ನುವ ನೋವು ಸದಾ ಅವರನ್ನು ಕಾಡುತ್ತಿದೆ. ಹಾಗಾಗಿ ನಟ ಪುನೀತ್‌ ಅವರ ಸ್ಥಾನದಲ್ಲಿ ಜೂ. ಪವರ್‌ಸ್ಟಾರ್‌ ಆಗಿ ನಟ ಯುವರಾಜ್‌ಕುಮಾರ್‌ನ್ನು ನೋಡಲು ಬಯಸುತ್ತಿದ್ದರು. ಸ್ವಲ್ಪ ತಡವಾಗಿ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು ನಟ ಯುವರಾಜ್‌ಕುಮಾರ್‌ ದೊಡ್ಡಮಟ್ಟದಲ್ಲಿ ಲಾಂಚ್‌ ಅಗಿರುವುದಂತೂ ಸತ್ಯ. ಕನ್ನಡದ ಹೆಸರಾಂತ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಯುವರಾಜ್‌ಕುಮಾರ್‌ಗಾಗಿ ಸಿನಿಮಾವನ್ನು ನಿರ್ದೇಶಿಸಿದ್ದು, ನಿನ್ನೆ ( ಮಾರ್ಚ್ 3 ) ಸಂಜೆ 6.55ಕ್ಕೆ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಅವರು ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ್ದಾರೆ. ಇನ್ನು ಯುವರಾಜ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾಕ್ಕೆ “ಯುವ” ಎನ್ನುವ (Yuva Title Release)‌ ಟೈಟಲ್‌ನ್ನು ಸೂಚಿಸಿದ್ದು, ಇದನ್ನು ನೋಡಿದ ಅಪ್ಪು ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೆನೆದು ಭಾವುಕರಾಗಿದ್ದಾರೆ.

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಚೊಚ್ಚಲ ಸಿನಿಮಾದ ಟೈಟಲ್ ರಿವೀಲ್ ಮಾಡುವುದಕ್ಕೆ ಟೀಸರ್ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳಿಗೆ ಅಂತಾನೇ ಥಿಯೇಟರ್‌ನಲ್ಲಿ ಟೈಟಲ್ ಬಿಡುಗಡೆ ಮಾಡಿ ಸಂಭ್ರಮಿಸಲಾಗಿದೆ. ಈ ಸಿನಿಮಾದ ಟೈಟಲ್ ಅನೌನ್ಸ್ ಆದಲ್ಲಿಂದ ಅಪ್ಪು ಅಭಿಮಾನಿಗಳು ಮತ್ತಷ್ಟು ಭಾವುಕರಾಗಿದ್ದಾರೆ. ಅದಕ್ಕೆ ಕಾರಣ ನಟ ಪುನೀತ್‌ ಅಭಿನಯದ ಮೊದಲ ಸಿನಿಮಾ ದ ಟೈಟಲ್‌ ‘ಅಪ್ಪು’. ಆಗಿದೆ.

ನಿರ್ದೇಶಕ ಸಂತೋಷ್ ಆನಂದ್‌ರಾಮ್ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದಾರೆ. ಈಗಾಗಲೇ ಸಂತೋಷ್‌ ಆನಂದ್‌ರಾಮ್‌ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ’, ‘ರಾಜಕುಮಾರ’ ಹಾಗೂ ‘ಯುವರತ್ನ’ದಂತಹ ಸೂಪರ್‌ಹಿಟ್‌ ಸಿನಿಮಾಗಳನ್ನು ಕೊಟ್ಟಿರೋ ನಿರ್ದೇಶಕರಾಗಿದ್ದಾರೆ. ಹಾಗಾಗಿ ನಟ ಯುವರಾಜ್‌ಕುಮಾರ್‌ ಅಭಿನಯದ ಟೈಟಲ್‌ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಹುಟ್ಟುವಂತೆ ಮಾಡಿದೆ. ‘ಯುವ’ ಟೈಟಲ್ ಟೀಸರ್ ನೋಡಿ ದೊಡ್ಮನೆ ಫ್ಯಾನ್ಸ್‌ಗಳು ಖುಷಿಯಲ್ಲಿ ಕುಣಿದಾಡಿದ್ದಾರೆ.

ಅಭಿಮಾನಿಗಳು ನಟ ಪುನೀತ್‌ ರಾಜ್‌ ಕುಮಾರ್ ಜಾಗ ತುಂಬುವುದಕ್ಕೆ ಯುವ ರಾಜ್‌ಕುಮಾರ್ ಬಂದಿದ್ದ ಖುಷಿಯಲ್ಲಿದ್ದಾರೆ. ಹಾಗೇ ಪುನೀತ್ ರಾಜ್‌ಕುಮಾರ್ ಸಿನಿಮಾ ಇನ್ಮುಂದೆ ನೋಡುವುದಕ್ಕೆ ಆಗೋದಿಲ್ವಲ್ಲ ಅಂತ ನೊಂದುಕೊಂಡವರಿಗೆ ಹೊಸ ಭರವಸೆನೂ ಬಂದಂತಾಗಿದೆ. ಈ ಕಾರಣಕ್ಕೆ ಟೀಸರ್‌ನಲ್ಲಿ ಕಂಡ ಯುವನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದರ ಜೊತೆಗೆ ಪುನೀತ್ ಹಾಗೂ ಯುವ ಇಬ್ಬರ ಮೊದಲ ಸಿನಿಮಾಗಿರುವ ಸಾಮ್ಯತೆಯನ್ನೂ ಹುಡುಕಿ ತೆಗೆದಿದ್ದಾರೆ.

ಇದನ್ನೂ ಓದಿ : ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ? ಇಲ್ಲಿದೆ Exclusive Details

ಇದನ್ನೂ ಓದಿ : ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌

ಇದನ್ನೂ ಓದಿ : ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್‌ ಯಾವುದು ಗೊತ್ತಾ ?

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾ “ಅಪ್ಪು” ಸಖತ್‌ ಹಿಟ್‌ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಟನಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅದರಂತೆ ಯುವರಾಜ್‌ಕುಮಾರ್‌ ಕೂಡ ಅಂತಹದೇ ಟೈಟಲ್‌ ಮೂಲಕ ಸಿನಿರಂಗಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದು, ಚಿಕ್ಕಪ್ಪನಂತೆ ಮಗ ಕೂಡ ಯಶಸ್ಸಿನ ದಾರಿ ಮುಟ್ಟಬಹುದು ಎನ್ನುವುದು ಸಿನಿಪ್ರೇಕ್ಷಕರ ಆಶಯವಾಗಿದೆ.

Yuva Title Release: Appu fans get emotional after seeing “Yuva” title: Do you know what is in the title?

Comments are closed.