Skin Care Tips: ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ರೋಸ್‌ ವಾಟರ್‌ಗೆ ಈ ವಸ್ತುಗಳನ್ನು ಸೇರಿಸಿ ಹಚ್ಚಿ; ಮ್ಯಾಜಿಕ್‌ ನೀವೇ ನೋಡಿ

ಇತ್ತಿಚಿನ ದಿನಗಳಲ್ಲಿ ಸೌಂದರ್ಯ (Beauty) ಪ್ರಜ್ಞೆ ಜನರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಈ ಪ್ರಜ್ಞೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರೂ ತ್ವಚೆಯ ಕಾಳಜಿ ವಹಿಸುವುದನ್ನು ನೋಡುತ್ತಿದ್ದೇವೆ. ಆದರೆ, ಮುಖದ ಮೇಲಿನ ಮೊಡವೆ, ಕಲೆಗಳು ಅಂದವನ್ನು ಕೆಡಿಸುತ್ತದೆ. ಮುಖದ ಬಣ್ಣವನ್ನು ಹಾಳು ಮಾಡುತ್ತದೆ. ಅದಕ್ಕಾಗಿ ಬಹಳಷ್ಟು ಕ್ರೀಮ್‌ಗಳನ್ನು ಉಪಯೋಗಿಸುತ್ತಾರೆ. ಆದರೆ, ಕೆಲವರಲ್ಲಿ ಪರಿಣಾಮ ಮಾತ್ರ ಶೂನ್ಯವಾಗಿರುತ್ತದೆ. ರೋಸ್‌ ವಾಟರ್‌ ಅಥವಾ ಗುಲಾಬಿ ಜಲ (Rose Water) ತ್ವಚೆಯ (Skin) ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ತ್ವಚೆಯನ್ನು ರಕ್ಷಿಸಿ, ಮೊಡವೆ, ಕಲೆಗಳನ್ನು ನಿವಾರಿಸುತ್ತದೆ. ಮುಖದ ಕಾಂತಿ ಹೆಚ್ಚಿಸುತ್ತದೆ. ಆದರೆ ಬರೀ ರೋಸ್‌ವಾಟರ್‌ ಒಂದನ್ನೇ ಹಚ್ಚಿಕೊಂಡರೆ ಸಾಕೇ? ಅದರ ಜೊತೆಗೆ ಕೆಲವು ವಸ್ತುಗಳನ್ನು ಸೇರಿಸಿ ಹಚ್ಚಿಕೊಂಡರೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ (Skin Care Tips). ಮುಖದ ಮೇಲಿನ ಹೊಳಪು ಹೆಚ್ಚಾಗುತ್ತದೆ. ಹಾಗಾದರೆ ರೋಸ್‌ವಾಟರ್‌ಗೆ ಯಾವ ವಸ್ತುಗಳನ್ನು ಸೇರಿಸಿ ಹಚ್ಚಿಕೊಳ್ಳಬೇಕು ಇಲ್ಲಿದೆ ಓದಿ.

ಅಲಮ್‌ ಮತ್ತು ರೋಸ್‌ ವಾಟರ್‌:

ಅಲಮ್‌ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಹಲವು ಲಾಭಗಳಿವೆ. ರೋಸ್ ವಾಟರ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಹಾಗಯೇ ಅಲಮ್‌ನಲ್ಲಿ ಆ್ಯಂಟಿ ಬಯೋಟಿಕ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಫಂಗಲ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್‌ಫ್ಲಮೇಟರಿ ಅಂಶಗಳು ಕಂಡುಬರುತ್ತದೆ. ಇದು ಚರ್ಮದ ಮೇಲೆ ಉತ್ತಮ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ರೋಸ್ ವಾಟರ್-ಆಲಂನ ಇತರ ಪ್ರಯೋಜನಗಳು:
ಹಾರ್ಮೋನ್ ಅಸಮತೋಲನದಿಂದ ಮುಖದ ಮೇಲೆ ಕೆಲವು ಕೂದಲುಗಳು ಹೊರಬರುತ್ತವೆ. ರೋಸ್ ವಾಟರ್ ಮತ್ತು ಅಲಂ ಹಚ್ಚುವುದರಿಂದ ಈ ಅನಗತ್ಯ ಕೂದಲುಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಮುಖದಲ್ಲಿರುವ ಡೆಡ್ ಸ್ಕಿನ್‌ ಮಾಯವಾಗಿ, ಸುಂದರವಾಗಿ ಕಾಣುತ್ತದೆ.

ಅಲಮ್‌ ಮತ್ತು ರೋಸ್ ವಾಟರ್ ಅನ್ನು ಉಪಯೋಗಿಸುವುದು ಹೇಗೆ?

  1. ಮೊದಲು ಅರ್ಧ ಚಮಚ ಅಲಮ್‌ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ರೋಸ್ ವಾಟರ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ.
  2. ನಂತರ, ಅದನ್ನು ನಿಮ್ಮ ಎರಡೂ ಅಂಗೈಗಳ ಮೇಲೆ ತೆಗೆದುಕೊಂಡು ನಿಧಾನವಾಗಿ ಕೈಗಳಿಂದ ಮುಖದ ಮೇಲೆ ಮಸಾಜ್ ಮಾಡಿ.
  3. ಈ ಪೇಸ್ಟ್ ಅನ್ನು ಸಂಪೂರ್ಣವಾಗಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದ ಮೇಲೆ ಅರ್ಧ ಗಂಟೆ ಕಾಲ ಹಾಗೆ ಬಿಡಿ.
  4. ಈಗ ಮುಖವನ್ನು ಶುದ್ಧ ನೀರಿನಿಂದ ತೊಳೆದು ಅದರ ಮೇಲೆ ನೀವು ಉಪಯೋಗಿಸುವ ಮಾಯ್‌ಶ್ಚರೈಸರ್‌ ಹಚ್ಚಿ, ಇದರಿಂದ ತ್ವಚೆಯ ಶುಷ್ಕತೆ ತಡೆಗಟ್ಟಬಹುದು.

ಹಾಲು ಮತ್ತು ರೋಸ್‌ ವಾಟರ್‌ :
ಹಾಲು ಉತ್ತಮ ಮಾಯ್‌ಶ್ಚರೈಸರ್‌ ಜೊತೆಗೆ ಇದು ಕಲೆಗಳನ್ನು ನಿವಾರಿಸುತ್ತದೆ. ಎರಡು ಚಮಚ ತಣ್ಣಗಿನ ಹಾಲು (ಫ್ರಿಡ್ಜ್‌ನಲ್ಲಿದ್ದ ಹಾಲು) ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ರೋಸ್‌ವಾಟರ್‌ ಸೇರಿಸಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಿಧಾನವಾಗಿ ಕೈಯಿಂದ ಮಸಾಜ್‌ ಮಾಡಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ನೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ಕಲೆಗಳು ದೂರವಾಗಿ, ಮುಖದ ಕಾಂತಿ ಹೆಚ್ಚುತ್ತದೆ.

ಇದನ್ನೂ ಓದಿ : International Women’s Day 2023 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2023; ಮಹಿಳೆಯರೇ‌, ನಿಮ್ಮ ಹೃದಯ ಆರೋಗ್ಯ ಕಾಪಾಡಿಕೊಳ್ಳಿ

ಇದನ್ನೂ ಓದಿ : ತೊಂಡೆಕಾಯಿಯನ್ನು ದಿನನಿತ್ಯ ಆಹಾರದಲ್ಲಿ ಬಳಸಿ ಉತ್ತಮ ಆರೋಗ್ಯ ಪಡೆಯಿರಿ

(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸೂಚನೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

(Skin Care Tips rose water benefits. alum and milk give you shiny skin)

Comments are closed.