zee kannada jote joteyali : ಜೊತೆ ಜೊತೆಯಲಿ ಆರ್ಯವರ್ಧನ್​ ಆಗಿ ಬರಲಿದ್ದಾರೆ ನಟ ಹರೀಶ್​ ರಾಜ್​​

zee kannada jote joteyali : ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸಧ್ಯ ವಿವಾದದ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಜೀ ಕನ್ನಡ ವಾಹಿನಿಯ ಪಾಲಿಗೆ ಭಾರೀ ದೊಡ್ಡ ಮಟ್ಟದ ಯಶಸ್ಸು ಎನಿಸಿದ್ದ ಈ ಧಾರವಾಹಿಯು ಇತ್ತೀಚಿನ ದಿನಗಳಲ್ಲಿ ಕಿರಿಕ್​ ಕತೆಗಳ ಮೂಲಕವೇ ಸುದ್ದಿಯಾಗುತ್ತಿದೆ. ವಯಸ್ಸಾದ ವ್ಯಕ್ತಿಯು ಯುವತಿಯ ಜೊತೆಯಲ್ಲಿ ಪ್ರೀತಿಯಲ್ಲಿ ಬೀಳುವ ಎಳೆಯನ್ನು ಇಟ್ಟುಕೊಂಡು ಆರಂಭವಾದ ಈ ಕತೆಯು ಕರುನಾಡ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿತ್ತು. ಧಾರವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಶೂಟಿಂಗ್​ ಸೆಟ್​ನಲ್ಲಿ ಕಿರಿಕ್​ ಮಾಡಿಕೊಂಡು ಧಾರವಾಹಿಯಿಂದ ಹೊರಬಿದ್ದಿದ್ದು ಮಾತ್ರವಲ್ಲದೇ 2 ವರ್ಷಗಳ ಕಾಲ ಕಿರುತೆರೆಯಿಂದಲೇ ದೂರವಿರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.


ಆರ್ಯವರ್ದನ್​ ಪಾತ್ರದಿಂದ ಅನಿರುದ್ಧರಿಗೆ ಕೊಕ್​ ನೀಡಿದ ಬಳಿಕ ಜೊತೆ ಜೊತೆಯಲಿ ಸೀರಿಯಲ್​ ತಂಡ ಅನಿರುದ್ಧರನ್ನೇ ಹೋಲುವ ವ್ಯಕ್ತಿಯನ್ನು ಈ ಪಾತ್ರಕ್ಕೆ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದೆ. ಅಂತೆಯೇ ಈಗಾಗಲೇ ನಿರ್ದೇಶಕ ಅನೂಪ್​ ಭಂಡಾರಿಗೆ ಆರೂರು ಜಗದೀಶ್​ ಕರೆ ಮಾಡಿದ್ದು ಆದರೆ ಈ ಆಫರ್​ನ್ನು ಅವರು ತಿರಸ್ಕರಿಸಿದ್ದು ಇದ್ಯಾವುದೂ ಕೂಡ ಗುಟ್ಟಾಗಿ ಉಳಿದಿಲ್ಲ.


ಆದರೆ ಇದೀಗ ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುವಲ್ಲಿ ಸೀರಿಯಲ್​ ತಂಡ ಯಶಸ್ವಿಯಾಗಿದೆ. ಸ್ಯಾಂಡಲ್​ವುಡ್​ ನಟ ಹರೀಶ್​ ರಾಜ್​​ರನ್ನು ಆರ್ಯವರ್ಧನ್​ ಪಾತ್ರದಲ್ಲಿ ತೋರಿಸಲು ಧಾರವಾಹಿ ತಂಡ ಇದೀಗ ಸಿದ್ಧವಾಗಿದೆ. ಹರೀಶ್​ ರಾಜ್​ ಜೊತೆ ಜೊತೆಯಲಿ ಆಫರ್​ ಒಪ್ಪಿದ್ದಾರೆ ಎನ್ನಲಾಗಿದ್ದು ಶೀಘ್ರದಲ್ಲಿಯೇ ಅವರು ಆರ್ಯವರ್ಧನ್​ ಆಗಿ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.


ಆದರೆ ಆರ್ಯವರ್ಧನ್​ ಪಾತ್ರದಲ್ಲಿ ಹರೀಶ್​ ರಾಜ್​ ನಟಿಸುತ್ತಿದ್ದಾರೆ ಎಂಬ ಬಗ್ಗೆ ಜೊತೆ ಜೊತೆಯಲಿ ಧಾರವಾಹಿ ತಂಡವಾಗಲಿ ಅಥವಾ ಜೀ ಕನ್ನಡ ವಾಹಿನಿಯಾಗಲಿ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರ ಬಿಟ್ಟಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಆರ್ಯವರ್ಧನ್​ ಕರುನಾಡ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವುದು ಪಕ್ಕಾ ಆಗಲಿದೆ.


ಮೇಘಾ ಶೆಟ್ಟಿ ಹಾಗೂ ಅನಿರುದ್ಧರ ಜೋಡಿ ತೆರೆ ಮೇಲೆ ಕಮಾಲ್​ ಮಾಡುವಲ್ಲಿ ಸಖತ್​ ಯಶಸ್ವಿಯಾಗಿತ್ತು. ಈಗಾಗಲೇ ಅನೇಕರು ನಮಗೆ ಅನಿರುದ್ಧರೇ ಮರಳಿ ಬರಬೇಕು ಅಂತಲೂ ಆಗ್ರಹಿಸುತ್ತಿದ್ದಾರೆ. ಆರೂರು ಜಗದೀಶ್​ ವಿರುದ್ಧ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗ್ತಿದೆ. ಆದರೆ ಹೊಸ ಸಾಹಸಕ್ಕೆ ಕೈ ಹಾಕಿರುವ ಧಾರವಾಹಿ ತಂಡ ಪಾತ್ರ ಬದಲಾವಣೆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದು ಇದಕ್ಕೆ ಕರುನಾಡ ಪ್ರೇಕ್ಷಕರು ಸಾಥ್​ ನೀಡ್ತಾರಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ : Fishing boat : ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ

ಇದನ್ನೂ ಓದಿ : Flight tickets price :ನಾಳೆಯಿಂದ ವಿಮಾನ ಟಿಕೆಟ್ ದರ ಇಳಿಕೆ: ಇಲ್ಲಿದೆ ಸಂಪೂರ್ಣ ವಿವರ

zee kannada jote joteyali anirudh role change in that place hero harish raj fix next hero

Comments are closed.