ಪುತ್ತೂರು : ಗೋಡಂಬಿ ಬೀಜ ಗಂಟಲಿನಲ್ಲಿ ಸಿಲುಕಿ ಮೂರುವರೆ ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಸಾಲ್ಮರದ ನಿವಾಸಿಯಾಗಿರುವ ಉರುಮಾಲ್ ಇಸಾಕ್ ಎಂಬವರ ಮೂರುವರೆ ವರ್ಷದ ಗಂಡು ಮಗು ಗೋಡಂಬಿ ಬೀಜ ತಿನ್ನುತ್ತಿತ್ತು. ಈ ವೇಳೆಯಲ್ಲಿ ಗೋಡಂಬಿ ಬೀಜ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿತ್ತು.
ಮನೆಯವರ ಗಮನಕ್ಕೆ ಬರುತ್ತಿದ್ದಂತೆಯೇ ಮಗುವನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.