ಚಿಕ್ಕಮಗಳೂರಿನ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವು

ಚಿಕ್ಕಮಗಳೂರು : ಕೆರೆಯ ನೀರಿನಲ್ಲಿ ತಾಯಿ ಮತ್ತು ಮಗಳು ಮುಳುಗಿ ಸಾವನ್ನಪ್ಪಿದ್ದ ದುರ್ಘಟನೆ (Chikmagalur Crime Case) ಸಂಭವಿಸಿದೆ. ಕರೆಯನ್ನು ದಾಟುವಾಗ ನೀರಿನ ಆಳವನು ತಿಳಿಯದೇ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಜೀವವನ್ನು ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಸಮೀಪದ ವಡ್ಡರಹಳ್ಳಿ ಗ್ರಾಮದ ತಾಯಿ ಶೋಭಾ 40ವರ್ಷ ಹಾಗೂ ಮಗಳು ವರ್ಷಾ 8ವರ್ಷ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತ ಶೋಭಾಳ ಇಬ್ಬರು ಮಕ್ಕಳಾದ ವರ್ಷ ಹಾಗೂ ಚೇತನ್‌ ಅವರೊಂದಿಗೆ ದನ ಮೇಯಿಸಲು ಕೆರೆ ಬಳಿ ಹೋಗಿದ್ದಾರೆ. ಆ ಸಂದರ್ಭದಲ್ಲಿ ಕೆರೆ ದಾಟುವಾಗ ದುರ್ಘಟನೆ ಸಂಭವಿಸಿದೆ.

ಮೊದಲು ಕೆರೆ ದಾಟುಲು ಮಗಳು ವರ್ಷ ಹೋಗಿ ನೀರಿನಲ್ಲಿ ಸಿಲುಕಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ತಾಯಿ ಶೋಭಾ ಮಗಳ ರಕ್ಷಣೆಗಾಗಿ ಮುಂದಾಗಿದ್ದು, ದುರಾದೃಷ್ಟಕೊಳ್ಳಗಾದ ತಾಯಿ ಮತ್ತು ಮಗಳು ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಅಲ್ಲಿಯೇ ಇದ್ದ ಮಗ ಚೇತನ್‌ ಜೀವಾಪಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ : ಕಾಲೇಜು ಚುನಾವಣೆ ವೇಳೆ ಘರ್ಷಣೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ಇದನ್ನೂ ಓದಿ : Bengaluru Murder Case: ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ

ಇದನ್ನೂ ಓದಿ : Lovers get suicide: ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಕೆರೆಯ ಒಂದು ಭಾಗದಲ್ಲಿ ನೀರು ಜಾಸ್ತಿ ತುಂಬಿದ್ದು, ಆ ಭಾಗದಲ್ಲಿ ವರ್ಷ ಸಿಲುಕಿಕೊಂಡಿದ್ದರಿಂದ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲೆ ತೆಗೆದು ಕುಟುಂಬದವರಿಗೆ ನೀಡಲಾಗಿದೆ ಎಂದು ಸ್ಥಳ ಆಗಮಿಸಿದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು
ಚಿಕ್ಕಮಗಳೂರು: (Lovers get suicide) ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನ ಆಲ್ದೂರು ಸಮೀಪದ ಗುಲ್ಲನ್‌ ಪೇಟೆಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಕಲ್ಲುಗುಡ್ಡೆ ಸಮೀಪದ ಆಣೂರಿನ ದರ್ಶನ್ ಹಾಗೂ ಯುವತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನ್‍ಬಾಳು ಮೂಲದ ಪೂರ್ವಿಕಾ ಎಂದು ಗುರುತಿಸಲಾಗಿದೆ.

ದರ್ಶನ್‌ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದ, ಹಾಗೂ ಪೂರ್ವಿಕಾ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂಬ ಪ್ರಾಥಮಿಕ ವರದಿಗಳು ಲಭ್ಯವಾಗಿವೆ. ಮೇಲ್ನೋಟಕ್ಕೆ ಇಬ್ಬರು ಪ್ರೇಮಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇಬ್ಬರು ಒಂದೇ ವೇಲನ್ನು ಬಳಸಿಕೊಂಡು ನೇಣು (Lovers get suicide) ಬಿಗಿದುಕೊಂಡಿದ್ದು, ಒಂದು ತುದಿಗೆ ಪೂರ್ವಿಕಾ ಕೊರಳೊಡ್ಡಿದರೆ ಇನ್ನೊಂದು ತುದಿಗೆ ದರ್ಶನ್‌ ಕೊರಳೊಡ್ಡಿದ್ದಾನೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಆಲ್ದೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು, ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಘಟನೆಯ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chikmagalur Crime Case: Mother and daughter drowned in Chikmagalur lake

Comments are closed.