Auto Explosion: ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟ: ಅನುಮಾನಾಸ್ಪದ ವಸ್ತುಗಳು ಪತ್ತೆ

ಮಂಗಳೂರು: (Auto Explosion) ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸ್ಪೋಟಗೊಂಡ ರಿಕ್ಷಾದಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದ್ದು, ಬ್ಯಾಟರಿ, ಬೋಲ್ಟ್, ನೆಟ್, ಸರ್ಕಿಟ್‌ ವೈರಿಂಗ್‌ ರೀತಿಯಲ್ಲಿರುವ ವಸ್ತುಗಳು ಪತ್ತೆಯಾಗಿವೆ. ಇದೀಗ ಅನುಮಾನಾಸ್ಪದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ(Auto Explosion) ಸಂಭವಿಸಿತ್ತು. ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯವಾಗಿತ್ತು. ಆತನ ಬಳಿಯಲ್ಲಿದ್ದ ಕುಕ್ಕರ್ ಸ್ಪೋಟಗೊಂಡಿತ್ತು. ಆಟೋ ಪಂಪ್ ವೆಲ್ ನಾಗುರಿ ಕಡೆಗೆ ಚಲಿಸುತ್ತಿತ್ತು. ಈ ವೇಳೆಯಲ್ಲಿ ದಾರಿ ಮಧ್ಯದಲ್ಲಿ ಕುಕ್ಕರ್ ಹಿಡಿದು ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಆಟೋ ಏರಿದ್ದಾರೆ. ಆಟೋ ಸುಮಾರು ಒಂದು ಕಿ.ಮೀ. ದೂರವನ್ನು ಕ್ರಮಿಸುತ್ತಿದ್ದಂತೆಯೇ ಏಕಾಏಕಿಯಾಗಿ ಸ್ಪೋಟಗೊಂಡಿದೆ. ಕೂಡಲೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ಅಲ್ಲದೇ ಕಂಕನಾಡಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಶ್ವಾನದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಆಟೋದಲ್ಲಿ ದೊರೆತಿರುವ ಅನುಮಾನಾಸ್ಪದ ವಸ್ತುಗಳನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ನಿಗೂಢ ಸ್ಪೋಟದ ಹಿಂದೆ ಹಲವು ಅನುಮಾನ :
ಆಟೋದಲ್ಲಿ ನಡೆದಿರುವ ನಿಗೂಢ ಸ್ಪೋಟ ಮಂಗಳೂರಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಆದರೆ ನಗರ ಪೊಲೀಸ್ ಆಯುಕ್ತರು ಈ ಕುರಿತು ನಾಗರೀಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡಾ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆಟೋದಲ್ಲಿ ನಡೆದಿರುವ ಸ್ಪೋಟ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರಯಾಣಿಕನನ್ನ ಹಾಗೂ ಆಟೋ ಚಾಲಕನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಎಲ್ಲಾ ಆಂಗಲ್ ನಲ್ಲಿಯೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : Breaking News : ಮಂಗಳೂರಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ

ಇದನ್ನೂ ಓದಿ : Bus overtuns in Kerala: ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

ಮೈಸೂರಿಗೆ ತೆರಳಿದ ಮಂಗಳೂರು ಪೊಲೀಸರು :
ಇನ್ನು ಆಟೋದಲ್ಲಿದ್ದ ಬ್ಯಾಗ್ ಹಾಗೂ ಬಾಕ್ಸ್ ನಿಂದಲೇ ಈ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹ ಅರ್ಧದಷ್ಟು ಸುಟ್ಟು ಕರಕಲಾಗಿದೆ. ಇನ್ನು ಪೊಲೀಸರು ಪರಿಶೀಲನೆಯನ್ನು ನಡೆಸುವ ವೇಳೆಯಲ್ಲಿ ಆಟೋದಲ್ಲಿ ಐಡಿ ಕಾರ್ಡ್ ಪತ್ತೆಯಾಗಿದ್ದು, ಈ ಕಾರ್ಡ್ ಪ್ರೇಮ್ ರಾಜ್ ಕನೋಗಿ ಎಂಬವರಿಗೆ ಸೇರಿದ್ದಾಗಿದೆ. ಇನ್ನು ಪ್ರಯಾಣಿಕನ ಕೈಯಲ್ಲಿ ಮೂವತ್ತು ಸಾವಿರ ರೂಪಾಯಿ ನಗದು ಹಣ ಪತ್ತೆಯಾಗಿದೆ. ಆಟೋದಲ್ಲಿ ಸಿಕ್ಕ ವಿಳಾಸ ಮೈಸೂರಿನದ್ದಾಗಿರುವುದರಿಂದಾಗಿ ಹೆಚ್ಚಿನ ತನಿಖೆಗಾಗಿ ಮಂಗಳೂರಿನ ಪೊಲೀಸರ ತಂಡ ಈಗಾಗಲೇ ಮೈಸೂರಿಗೆ ತೆರಳಿದೆ.

(Auto Explosion) The investigation of the mysterious explosion that occurred in a moving auto has been accelerated. Suspicious items were found in the exploded rickshaw and items like battery, bolt, net, circuit wiring were found. Now, the police has intensified the investigation after the discovery of suspicious items.

Comments are closed.